ತೂತುಕುಡಿಯಲ್ಲಿ ತಾಮ್ರ ಸ್ಥಾವರ ಘಟಕ ಮುಚ್ಚುವಿಕೆ ವಿರುದ್ಧ ವೇದಾಂತ ಸಲ್ಲಿಸಿದ ಮರುಪರಿಶೀಲನಾ ಅರ್ಜಿ: ಸುಪ್ರೀಂ ಕೋರ್ಟ್ ವಜಾ
ತೂತುಕುಡಿಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ್ದರಿಂದ 13 ಜನರು ಮೃತಪಟ್ಟ ನಂತರ ಮೇ 2018 ರಿಂದ ಸ್ಥಾವರವನ್ನು ಮುಚ್ಚಲಾಗಿದೆ.

ನವದೆಹಲಿ: ತಮಿಳುನಾಡಿನ ತೂತುಕುಡಿಯಲ್ಲಿ ಸ್ಟೈರ್ಲೈಟ್ ತಾಮ್ರ ಸ್ಥಾವರ ಘಟಕವನ್ನು ಮುಚ್ಚುವುದರ ವಿರುದ್ಧ ವೇದಾಂತ ಸಮೂಹ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸ್ಥಳೀಯ ನಿವಾಸಿಗಳ ಆರೋಗ್ಯ ಮತ್ತು ಪ್ರಗತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿ, ಮಾಲಿನ್ಯದ ಕಾಳಜಿಯಿಂದ ಮೇ 2018 ರಿಂದ ಮುಚ್ಚಲಾಗಿದ್ದ ತೂತುಕುಡಿಯಲ್ಲಿ ತಾಮ್ರ ಸ್ಥಾವರ ಘಟಕವನ್ನು ಪುನಃ ತೆರೆಯಲು ವೇದಾಂತ ಸಮೂಹ ಸಲ್ಲಿಸಿದ್ದ ಮನವಿಯನ್ನು ಫೆಬ್ರವರಿ 29 ರಂದು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು.
ತೂತುಕುಡಿಯಲ್ಲಿ ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸರು ಗುಂಡು ಹಾರಿಸಿದ್ದರಿಂದ 13 ಜನರು ಮೃತಪಟ್ಟ ನಂತರ ಮೇ 2018 ರಿಂದ ಸ್ಥಾವರವನ್ನು ಮುಚ್ಚಲಾಗಿದೆ.
ಹಿಂದಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ (ಈಗ ನಿವೃತ್ತ) ಮತ್ತು ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠವು ಮರುಪರಿಶೀಲನಾ ಅರ್ಜಿಯನ್ನು ಮುಕ್ತ ನ್ಯಾಯಾಲಯದಲ್ಲಿ ಪಟ್ಟಿ ಮಾಡಲು ವೇದಾಂತ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿತು.
ಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಿದಾಗ, ದಾಖಲೆಯಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳು 2013 ರ ಆದೇಶ XLVII ನಿಯಮ 1 ರ ಅಡಿಯಲ್ಲಿ ಪರಿಶೀಲನೆಗಾಗಿ ಯಾವುದೇ ಪ್ರಕರಣವನ್ನು ಗುರುತಿಸಿಲ್ಲ, ಹಾಗಾಗಿ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ’ ಎಂದು ಪೀಠವು ತನ್ನ ಅಕ್ಟೋಬರ್ 22ರ ಆದೇಶದಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


