ಜಮ್ಮು ಕಾಶ್ಮೀರದಲ್ಲಿ ಮತ್ತೆ ಎನ್‌ಕೌಂಟರ್: 15 ದಿನಗಳಲ್ಲಿ 11ನೇ ಬಾರಿ ಭಯೋತ್ಪಾದಕರೊಂದಿಗೆ ಗುಂಡಿನ ಚಕಮಕಿ
ಭಯೋತ್ಪಾದಕರು ಮತ್ತು ಕಮಾಂಡೋ ಕೊಲ್ಲಲ್ಪಟ್ಟಿದ್ದಾರೆ. ಬುಧವಾರ ಕುಲ್ಗಾಮ್‌ನ ಬಡಿಮಾರ್ಗ್, ಯಾರಿಪೋರಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ವೇಳೆ ಎನ್‌ಕೌಂಟರ್ ಆರಂಭವಾಗಿದೆ.

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಮುಂದುವರಿದಿದೆ. ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಸರಣಿ ಚಕಮಕಿಯಲ್ಲಿ, ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಬುಧವಾರ ಮತ್ತೊಂದು ಎನ್‌ಕೌಂಟರ್ ನಡೆದಿದೆ. ಕಳೆದ ಹದಿನೈದು ದಿನಗಳಲ್ಲಿ ನಡೆದ 11 ನೇ ಎನ್‌ಕೌಂಟರ್ ಇದಾಗಿದೆ.
ಜಮ್ಮಕಾಶ್ಮೀರದ 20 ಜಿಲ್ಲೆಗಳ ಪೈಕಿ ಎಂಟು ಜಿಲ್ಲೆಗಳಲ್ಲಿ ಎನ್‌ಕೌಂಟರ್‌ಗಳು ನಡೆದಿದ್ದು,10 ಭಯೋತ್ಪಾದಕರು ಮತ್ತು ಕಮಾಂಡೋ ಕೊಲ್ಲಲ್ಪಟ್ಟಿದ್ದಾರೆ. ಬುಧವಾರ ಕುಲ್ಗಾಮ್‌ನ ಬಡಿಮಾರ್ಗ್, ಯಾರಿಪೋರಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ವೇಳೆ ಎನ್‌ಕೌಂಟರ್ ಆರಂಭವಾಗಿದೆ. ಎರಡೂ ಕಡೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆರ್ಟಿಕಲ್ 370 ರದ್ದತಿಯ ನಂತರ ಜಮ್ಮು ಕಾಶ್ಮೀರದಲ್ಲಿ ಮೊದಲ ಅಸೆಂಬ್ಲಿ ಚುನಾವಣೆಯಲ್ಲಿ ಗೆದ್ದು ಒಮರ್ ಅಬ್ದುಲ್ಲಾ ನೇತೃತ್ವದ ಎನ್‌ಸಿ ಸರ್ಕಾರವು ಅಕ್ಟೋಬರ್ 16 ರಂದು ಪ್ರಮಾಣ ವಚನ ಸ್ವೀಕರಿಸಿದ ನಂತರ ಈ ಎನ್‌ಕೌಂಟರ್‌ಗಳು ಹೆಚ್ಚಾಗಿವೆ.
ಕಳೆದ 15 ದಿನಗಳಲ್ಲಿ ಕಣಿವೆ ರಾಜ್ಯಗಳು ಬಹುತೇಕ ದೈನಂದಿನ ಎನ್‌ಕೌಂಟರ್‌ಗಳಿಗೆ ಸಾಕ್ಷಿಯಾಗಿದೆ, ಕಳೆದ 15 ದಿನಗಳಲ್ಲಿ 11 ಘಟನೆಗಳು ನಡೆದಿವೆ. ಶ್ರೀನಗರ, ಜಮ್ಮು, ಕಿಶ್ತ್ವಾರ್, ಅನಂತನಾಗ್, ಕುಲ್ಗಾಮ್, ಬಾರಾಮುಲ್ಲಾ, ಕುಪ್ವಾರ ಮತ್ತು ಬಂಡಿಪೋರಾ ಜಿಲ್ಲೆಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಎನ್‌ಕೌಂಟರ್‌ಗಳು ನಡೆದ ಎಂಟು ಜಿಲ್ಲೆಗಳಲ್ಲಿ ಆರು ಕಾಶ್ಮೀರದಲ್ಲಿ ಮತ್ತು ಎರಡು ಜಮ್ಮು ಪ್ರದೇಶದಲ್ಲಿವೆ. ನವೆಂಬರ್ 2 ರಂದು ಶ್ರೀನಗರದ ಖಾನ್ಯಾರ್‌ನಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಪ್ರಮುಖ ಲಷ್ಕರ್ ಭಯೋತ್ಪಾದಕ ಉಸ್ಮಾನ್ ಲಷ್ಕರಿ ಸಾವನ್ನಪ್ಪಿ ನಾಲ್ವರು ಭದ್ರತಾ ಸಿಬ್ಬಂದಿ ಗಾಯಗೊಂಡರು.
ಎರಡು ವರ್ಷಗಳ ನಂತರ ಶ್ರೀನಗರದಲ್ಲಿ ನಡೆದ ಮೊದಲ ಎನ್‌ಕೌಂಟರ್ ಇದಾಗಿದೆ. ಶ್ರೀನಗರದ ಕೊನೆಯ ಗುಂಡಿನ ಚಕಮಕಿಯು ಸೆಪ್ಟೆಂಬರ್ 20, 2022 ರಂದು ನೌಗಾಮ್ ಪ್ರದೇಶದಲ್ಲಿ ನಡೆದಿತ್ತು. 11 ಎನ್‌ಕೌಂಟರ್‌ಗಳಲ್ಲಿ ಹತರಾದ ಹೆಚ್ಚಿನ ಭಯೋತ್ಪಾದಕರು ಪಾಕಿಸ್ತಾನಿ ಪ್ರಜೆಗಲಾಗಿದ್ದಾರೆ. ಎನ್‌ಕೌಂಟರ್‌ಗಳ ಹೆಚ್ಚುತ್ತಿರುವುದು ಕಾಶ್ಮೀರ ಮತ್ತು ಜಮ್ಮು ಪ್ರದೇಶಗಳೆರಡರಲ್ಲೂ ಭಯೋತ್ಪಾದಕರು ನುಸುಳಿದ್ದಾರೆ ಎಂದು ಸೂಚಿಸುತ್ತದೆ ಎಂದು ಮಾಜಿ ಜೆ & ಕೆ ಪೊಲೀಸ್ ಮುಖ್ಯಸ್ಥ ಎಸ್‌ಪಿ ವೈದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



