ಜಾರ್ಖಂಡ್ ಆದಿವಾಸಿಗಳಿಗೆ ಸೇರಿದ್ದು, ಈ ರಾಜ್ಯವನ್ನು ಅವರೇ ಆಳುತ್ತಾರೆ: ಸಿಎಂ ಸೊರೆನ್
JMM ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸೊರೆನ್ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಚೈಬಾಸಾ: ಜಾರ್ಖಂಡ್ ಆದಿವಾಸಿಗಳು ಸೇರಿದ್ದು, ಈ ರಾಜ್ಯವನ್ನು ಅವರೇ ಆಳುತ್ತಾರೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಹೇಳಿದ್ದಾರೆ.
JMM ಕಾರ್ಯಕಾರಿ ಅಧ್ಯಕ್ಷರೂ ಆಗಿರುವ ಸೊರೆನ್ ಅವರು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಯಾವುದೇ ಹಿಂದೂ ಅಪಾಯದಲ್ಲಿಲ್ಲ. ಆದರೆ ಬಿಜೆಪಿ ಹಿಂದೂ-ಮುಸ್ಲಿಂರ ನಡುವೆ ಸಂಘರ್ಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.
"ನಾವು ಪ್ರತ್ಯೇಕ ಜಾರ್ಖಂಡ್ ರಾಜ್ಯಕ್ಕಾಗಿ ಹೋರಾಡಿದ್ದೇವೆ ಮತ್ತು ನಮ್ಮ ಹಕ್ಕುಗಳನ್ನು ಪಡೆಯಲು ನಾವು ಹೋರಾಡುತ್ತೇವೆ. ಜಾರ್ಖಂಡ್ ಬುಡಕಟ್ಟು ಜನಾಂಗದವರಿಗೆ ಸೇರಿದ್ದರಿಂದ ಇಲ್ಲಿ ಆದಿವಾಸಿಗಳು ಆಳ್ವಿಕೆ ನಡೆಸುತ್ತಾರೆ" ಎಂದು ಸೊರೆನ್ ಅವರು ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಚೋಟಾನಾಗ್ರಾದಲ್ಲಿ ಹೇಳಿದ್ದಾರೆ.
ಜನರ ಬೆಂಬಲದೊಂದಿಗೆ ತಮ್ಮ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಮುಂದೆಯೂ ಇದನ್ನು ಮುಂದುವರಿಸಲಿದೆ ಎಂದು ಸೊರೆನ್ ತಿಳಿಸಿದ್ದಾರೆ.
"ಬಿಜೆಪಿಯವರು ಸಿಬಿಐ ಮತ್ತು ಇಡಿ ಜತೆ ಶಾಮೀಲಾಗಿ ನನ್ನನ್ನು ಬೆದರಿಸುತ್ತಿದ್ದಾರೆ ಮತ್ತು ಸುಳ್ಳು ಆರೋಪಗಳನ್ನು ಹೊರಿಸಿ ಜೈಲಿಗೆ ಕಳುಹಿಸಿದ್ದರು. ಆದರೆ ನಾನು ಜಾರ್ಖಂಡ್ ಮಣ್ಣಿನ ಮಗ, ನಾನು ಹೆದರುವುದಿಲ್ಲ ಮತ್ತು ಎಂದಿಗೂ ತಲೆಬಾಗುವುದಿಲ್ಲ" ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
2011 ರ ಜನಗಣತಿಯ ಪ್ರಕಾರ, ಜಾರ್ಖಂಡ್ ಒಟ್ಟು 32,988,134 ಜನಸಂಖ್ಯೆಯನ್ನು ಹೊಂದಿದೆ. ಅವರಲ್ಲಿ ಶೇ. 26.21 ರಷ್ಟು (8,645,042) ಆದಿವಾಸಿಗಳಿದ್ದಾರೆ.
2000ರಲ್ಲಿ ಜಾರ್ಖಂಡ್ ರಾಜ್ಯ ರಚನೆಯಾದ ನಂತರ ರಘುಬರ್ ದಾಸ್ ಅವರನ್ನು ಹೊರತುಪಡಿಸಿ, ರಾಜ್ಯದ ಎಲ್ಲಾ ಮುಖ್ಯಮಂತ್ರಿಗಳು ಬುಡಕಟ್ಟು ಸಮುದಾಯಗಳಿಗೆ ಸೇರಿದವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



