ದೇಶ

ಡೆಪ್ಸಾಂಗ್ ನಲ್ಲಿ ಭಾರತೀಯ ಸೇನೆಯ ಪರಿಶೀಲನಾ ಗಸ್ತು ಪ್ರಾರಂಭ: MEA

ಪೂರ್ವ ಲಡಾಖ್‌ನ ಎರಡು ಘರ್ಷಣೆ ಬಿಂದುಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳು ಸೇನೆ ವಾಪಸ್ ಪಡೆದ ಒಂದು ದಿನದ ನಂತರ ಶುಕ್ರವಾರ ಡೆಮ್‌ ಚೋಕ್‌ನಲ್ಲಿ ಭಾರತೀಯ ಸೇನೆ ಗಸ್ತು ತಿರುಗುವಿಕೆ ಕಾರ್ಯ ಪ್ರಾರಂಭಿಸಿತ್ತು.

ಡೆಪ್ಸಾಂಗ್ ನಲ್ಲಿ ಭಾರತೀಯ ಸೇನೆಯ ಪರಿಶೀಲನಾ ಗಸ್ತು ಪ್ರಾರಂಭ: MEA
ಲಡಾಖ್ ನ ಡೆಪ್ಸಾಂಗ್ ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಪೂರ್ವ ಲಡಾಖ್‌ನ ಎರಡನೇ ಘರ್ಷಣೆ ಬಿಂದುವಾದ ಡೆಪ್ಸಾಂಗ್‌ನಲ್ಲಿ ಭಾರತೀಯ ಸೇನೆಯು ಪರಿಶೀಲನಾ ಗಸ್ತು ತಿರುಗುವ ಕಾರ್ಯವನ್ನು ಪ್ರಾರಂಭಿಸಿದೆ ಎಂದು ಸರ್ಕಾರ ಶನಿವಾರ ತಿಳಿಸಿದೆ.

ಪೂರ್ವ ಲಡಾಖ್‌ನ ಎರಡು ಘರ್ಷಣೆ ಬಿಂದುಗಳಲ್ಲಿ ಭಾರತ ಮತ್ತು ಚೀನಾದ ಪಡೆಗಳು ಸೇನೆ ವಾಪಸ್ ಪಡೆದ ಒಂದು ದಿನದ ನಂತರ ಶುಕ್ರವಾರ ಡೆಮ್‌ ಚೋಕ್‌ನಲ್ಲಿ ಭಾರತೀಯ ಸೇನೆ ಗಸ್ತು ತಿರುಗುವಿಕೆ ಕಾರ್ಯ ಪ್ರಾರಂಭಿಸಿತ್ತು.

ಸುದ್ದಿಗೋಷ್ಠಿಯಲ್ಲಿಂದು ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಚೀನಾದೊಂದಿಗಿನ ಒಪ್ಪಂದದ ನಂತರ, ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಎರಡರಲ್ಲೂ ಪರಸ್ಪರ ಒಪ್ಪಿಗೆಯ ನಿಯಮಗಳ ಮೇಲೆ ಪರಿಶೀಲನಾ ಗಸ್ತು ಪ್ರಾರಂಭವಾಗಿದೆ ಎಂದು ಹೇಳಿದರು.

ಗುರುವಾರ ದೀಪಾವಳಿಯ ಸಂದರ್ಭದಲ್ಲಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಹಲವಾರು ಗಡಿ ಬಿಂದುಗಳಲ್ಲಿ ಸಿಹಿ ವಿನಿಮಯ ಮಾಡಿಕೊಂಡಿದ್ದರು. ಎರಡೂ ದೇಶಗಳು ಘರ್ಷಣೆ ಬಿಂದುಗಳಲ್ಲಿ ಸೇನೆ ಹಿಂಪಡೆಯುವಿಕೆಯನ್ನು ಪೂರ್ಣಗೊಳಿಸಿದ ನಂತರ ಸಾಂಪ್ರದಾಯಿಕವಾಗಿ ಸಿಹಿ ವಿನಿಮಯ ಮಾಡಿಕೊಳ್ಳಲಾಯಿತು.

ಇದು ಚೀನಾ-ಭಾರತೀಯ ಸಂಬಂಧಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿತು. 2020ರ ಏಪ್ರಿಲ್ ಪೂರ್ವದಲ್ಲಿದ್ದ ಹಾಗೆಯೇ ಉಭಯ ದೇಶಗಳ ಪ್ರದೇಶಗಳು ಹಾಗೂ ಗಸ್ತು ತಿರುಗುವಿಕೆ ಇರಲಿದೆ ಎಂಬ ನಿರೀಕ್ಷೆಯಿದೆ ಎಂದು ಮೂಲಗಳು ಈ ಹಿಂದೆಯೇ ತಿಳಿಸಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.