ದೇಶ

ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ 421 ಬಾರಿ ವಿಭಜಿಸುವಂತಹ ಮಾತು: ಕಾಂಗ್ರೆಸ್

ಕಳೆದ 15 ದಿನಗಳ ಭಾಷಣದಲ್ಲಿ ಮೋದಿ ಅವರು ಕಾಂಗ್ರೆಸ್ ಹೆಸರನ್ನು 232 ಬಾರಿ, ತಮ್ಮದೇ ಹೆಸರನ್ನು 758 ಬಾರಿ ತೆಗೆದುಕೊಂಡಿದ್ದಾರೆ. ನಿರುದ್ಯೋಗದ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ ಎಂದು ಖರ್ಗೆ ಹೇಳಿದರು.

ಚುನಾವಣಾ ಪ್ರಚಾರದಲ್ಲಿ ಪ್ರಧಾನಿ ಮೋದಿ 421 ಬಾರಿ ವಿಭಜಿಸುವಂತಹ ಮಾತು: ಕಾಂಗ್ರೆಸ್
ಪ್ರಧಾನಿ ಮೋದಿ
Published On :

ನವದೆಹಲಿ: ಜಾತಿ ಮತ್ತು ಧರ್ಮದ ಆಧಾರದ ಮೇಲೆ ಮತ ಕೇಳುವಂತಿಲ್ಲ ಎಂಬ ಚುನಾವಣಾ ಆಯೋಗದ ನಿರ್ದೇಶನದ ಹೊರತಾಗಿಯೂ ಚುನಾವಣಾ ಪ್ರಚಾರದ ವೇಳೆ 421 ಬಾರಿ 'ಮಂದಿರ-ಮಸೀದಿ' ಮತ್ತು ವಿಭಜನೆಯ ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಗುರುವಾರ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆಯ ಏಳನೇ ಮತ್ತು ಕೊನೆಯ ಹಂತದ ಪ್ರಚಾರದ ಕೊನೆಯ ದಿನದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, ಕಳೆದ 15 ದಿನಗಳ ಭಾಷಣದಲ್ಲಿ ಮೋದಿ ಅವರು ಕಾಂಗ್ರೆಸ್ ಹೆಸರನ್ನು 232 ಬಾರಿ, ತಮ್ಮದೇ ಹೆಸರನ್ನು 758 ಬಾರಿ ತೆಗೆದುಕೊಂಡಿದ್ದಾರೆ. ನಿರುದ್ಯೋಗದ ಬಗ್ಗೆ ಒಮ್ಮೆಯೂ ಮಾತನಾಡಿಲ್ಲ ಎಂದು ಖರ್ಗೆ ಹೇಳಿದರು. ವಿಪಕ್ಷಗಳ ಮೈತ್ರಿಕೂಟ ಸ್ಪಷ್ಟ ಬಹುಮತದೊಂದಿಗೆ ಸರ್ಕಾರವನ್ನು ರಚಿಸುತ್ತದೆ ಮತ್ತು ಇದು ದೇಶವನ್ನು ಒಳಗೊಳ್ಳುವ, ರಾಷ್ಟ್ರೀಯತೆಯ ಸರ್ಕಾರವನ್ನು ನೀಡುತ್ತದೆ ಎಂದು ಅವರು ಹೇಳಿದರು.

ಜೂನ್ 4 ರಂದು ಜನರು ಪರ್ಯಾಯ ಸರ್ಕಾರಕ್ಕೆ ಜನಾದೇಶವನ್ನು ನೀಡುತ್ತಾರೆ ಎಂಬ ವಿಶ್ವಾಸವಿದೆ. "ಈ ಸರ್ಕಾರಕ್ಕೆ ಮತ್ತೊಂದು ಅವಕಾಶ ಸಿಕ್ಕರೆ ಅದು ಪ್ರಜಾಪ್ರಭುತ್ವದ ಅಂತ್ಯ ಎಂಬ ನಮ್ಮ ಅಭಿಪ್ರಾಯವನ್ನು ಜನರು ಅನುಮೋದಿಸಿದ್ದಾರೆ" ಎಂದರು.

ರಿಚರ್ಡ್ ಅಟೆನ್‌ಬರೋ ಅವರ ಚಿತ್ರದ ನಂತರ ಮಹಾತ್ಮ ಗಾಂಧಿ ಬಗ್ಗೆ ಜಾಗತಿಕ ಅರಿವು ಬಂದಿತು ಎಂಬ ಪ್ರಧಾನಿ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಮೋದಿ ಗಾಂಧಿಯ ಬಗ್ಗೆ ಅಧ್ಯಯನ ಮಾಡದಿರಬಹುದು ಆದರೆ ಮಹಾತ್ಮ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.