ದೇಶ

Cute Elephant Family: ಗಜ ಕುಟುಂಬದ ಸುಖ ನಿದ್ರೆ, ಮರಿಯಿಂದ Z ಕ್ಯಾಟಗರಿ ಭದ್ರತೆ!, Video Viral

ದಟ್ಟ ಕಾನನದಲ್ಲಿ ಆನೆ ಕುಟುಂಬವೊಂದು ಸುಖ ನಿದ್ರೆಗೆ ಜಾರಿದ್ದು, ಈ ಕುಟುಂಬಕ್ಕೆ ಪುಟ್ಟ ಆನೆ ಮರಿ ಭದ್ರತೆ ನೀಡುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

Cute Elephant Family: ಗಜ ಕುಟುಂಬದ ಸುಖ ನಿದ್ರೆ, ಮರಿಯಿಂದ Z ಕ್ಯಾಟಗರಿ ಭದ್ರತೆ!, Video Viral
ನಿದ್ರೆಗೆ ಜಾರಿರುವ ಆನೆ ಕುಟುಂಬ
Published On :

ಚೆನ್ನೈ: ದಟ್ಟ ಕಾನನದಲ್ಲಿ ಆನೆ ಕುಟುಂಬವೊಂದು ಸುಖ ನಿದ್ರೆಗೆ ಜಾರಿದ್ದು, ಈ ಕುಟುಂಬಕ್ಕೆ ಪುಟ್ಟ ಆನೆ ಮರಿ ಭದ್ರತೆ ನೀಡುತ್ತಿರುವ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟರ್ ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋದಲ್ಲಿ ಐದು ಆನೆಗಳ ಕುಟುಂಬ ನಿದ್ರೆಗೆ ಜಾರಿರುವುದನ್ನು ಸೆರೆ ಹಿಡಿಯಲಾಗಿದೆ.

ತಮಿಳುನಾಡಿನ ಅನಮಲೈ ಹುಲಿ ಸಂರಕ್ಷಿತ ಪ್ರದೇಶದ ದಟ್ಟ ಕಾಡಿನಲ್ಲಿ ಆನೆಗಳು ನಿದ್ರಿಸುತ್ತಿರುವುದನ್ನು ಡ್ರೋನ್ ಕ್ಯಾಮೆರಾ ಮೂಲಕ ಸೆರೆ ಹಿಡಿಯಲಾಗಿದೆ.

ನಿದ್ರೆಗೆ ಜಾರಿರುವ ಆನೆ ಕುಟುಂಬಕ್ಕೆ ಮರಿ ಆನೆ Z ಕ್ಯಾಟಗರಿ ಭದ್ರತೆ ನೀಡುತ್ತಿದೆ ಎಂದು ಅಧಿಕಾರಿ ತಮಾಷೆಯ ಶೀರ್ಷಿಕೆ ನೀಡಿದ್ದಾರೆ. ತನ್ನ ಪೋಷಕರು ನಿದ್ರಿಸುತ್ತಿದ್ದರೆ ಪುಟ್ಟ ಆನೆ ಧೈರ್ಯದಿಂದ ಅವರ ಸುತ್ತ ಆಟವಾಡುತ್ತಾ ಸಂಚರಿಸುತ್ತಿರುವುದನ್ನು ಇಲ್ಲಿ ನೋಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.