ದೇಶ

CBSE 10 ಹಾಗೂ 12ನೇ ತರಗತಿ ಫಲಿತಾಂಶ ಪ್ರಕಟ: ಫಲಿತಾಂಶಕ್ಕಾಗಿ ಈ ಲಿಂಕ್ ನೋಡಿ

CBSE 12ನೇ ಹಾಗೂ 10ನೇ ತರಗತಿ ಫಲಿತಾಂಶವೂ ಹೊರಬಿದ್ದಿದೆ. CBSE ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in, results.cbse.nic.in ಮತ್ತು cbse.gov.in ನಲ್ಲಿ ಪರಿಶೀಲಿಸಬಹುದು.

CBSE 10 ಹಾಗೂ 12ನೇ ತರಗತಿ ಫಲಿತಾಂಶ ಪ್ರಕಟ: ಫಲಿತಾಂಶಕ್ಕಾಗಿ ಈ ಲಿಂಕ್ ನೋಡಿ
ಸಂಗ್ರಹ ಚಿತ್ರ
Published On :

CBSE 12ನೇ ಹಾಗೂ 10ನೇ ತರಗತಿ ಫಲಿತಾಂಶವೂ ಹೊರಬಿದ್ದಿದೆ. CBSE ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಾದ cbseresults.nic.in, results.cbse.nic.in ಮತ್ತು cbse.gov.in ನಲ್ಲಿ ಪರಿಶೀಲಿಸಬಹುದು.

ಈ ಬಾರಿಯೂ ಮತ್ತೆ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. 2024ರ 12ನೇ ಬೋರ್ಡ್ ಫಲಿತಾಂಶದಲ್ಲಿ ಶೇ.91.52ರಷ್ಟು ಬಾಲಕಿಯರು ತೇರ್ಗಡೆಯಾಗಿದ್ದಾರೆ. ಬಾಲಕರ ಉತ್ತೀರ್ಣ ಪ್ರಮಾಣ ಶೇಕಡಾ 85.12 ರಷ್ಟಿದೆ. ಕಳೆದ ವರ್ಷ 2023ರಲ್ಲಿ ಬಾಲಕಿಯರ ಉತ್ತೀರ್ಣ ಪ್ರಮಾಣ ಶೇ.90.68 ಮತ್ತು ಬಾಲಕರ ಉತ್ತೀರ್ಣ ಪ್ರಮಾಣ ಶೇ.84.67 ರಷ್ಟಿತ್ತು. ಈ ವರ್ಷ ಎಲ್ಲಾ ವಿಷಯಗಳಲ್ಲಿ ಒಟ್ಟು ಶೇಕಡಾ 87.98ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

2023ರ 10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 93.12 ಶೇಕಡಾ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಬಾಲಕಿಯರ ಫಲಿತಾಂಶವು ಹುಡುಗರಿಗಿಂತ ಉತ್ತಮವಾಗಿತ್ತು. ಬಾಲಕಿಯರು ಶೇ.94.25 ಹಾಗೂ ಬಾಲಕರು ಶೇ.92.72 ಉತ್ತೀರ್ಣರಾಗಿದ್ದಾರೆ. ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು, CBSE ಈ ವರ್ಷ 10 ಮತ್ತು 12 ನೇ ತರಗತಿಗಳ ಮೆರಿಟ್ ಪಟ್ಟಿ ಮತ್ತು ಟಾಪರ್ಸ್ ಪಟ್ಟಿಯನ್ನು ಬಿಡುಗಡೆ ಮಾಡಲಿಲ್ಲ. ವಿದ್ಯಾರ್ಥಿಗಳ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಭಾಗದ ಮಾಹಿತಿಯನ್ನೂ ನೀಡಿಲ್ಲ. ಸಿಬಿಎಸ್‌ಇ 10ನೇ ಮತ್ತು 12ನೇ ಫಲಿತಾಂಶಗಳಲ್ಲಿ ತಿರುವನಂತಪುರ ಪ್ರದೇಶವು ಅಗ್ರಸ್ಥಾನದಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.