ದೇಶ

ಮೋದಿ ಪ್ರಧಾನಿಯಾದ್ದರಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿ: ಕಾಂಗ್ರೆಸ್

ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಮಹಿಳೆಯರ ವಿರುದ್ಧ ಅಪರಾಧ ಎಸಗುವವರನ್ನು ಮೋದಿ ಸರ್ಕಾರ ಯಾವಾಗಲೂ ರಕ್ಷಿಸುತ್ತದೆ ಎಂದು ಸೋಮವಾರ ಆರೋಪಿಸಿದೆ.

ಮೋದಿ ಪ್ರಧಾನಿಯಾದ್ದರಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪರಾರಿ: ಕಾಂಗ್ರೆಸ್
ಪ್ರಜ್ವಲ್ ರೇವಣ್ಣ
Published On :

ನವ ದೆಹಲಿ:ಜೆಡಿಎಸ್ ನಾಯಕ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಕಿರುಕುಳ ಆರೋಪದ ಕುರಿತು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಮಹಿಳೆಯರ ವಿರುದ್ಧ ಅಪರಾಧ ಎಸಗುವವರನ್ನು ಮೋದಿ ಸರ್ಕಾರ ಯಾವಾಗಲೂ ರಕ್ಷಿಸುತ್ತದೆ ಎಂದು ಸೋಮವಾರ ಆರೋಪಿಸಿದೆ.

ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಭಾರತ ಮಹಿಳಾ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ನೆಟ್ಟಾ ಡಿಸೋಜಾ, ಬಿಜೆಪಿ ‘ಬೇಟಿ ಬಚಾವೋ, ಬೇಟಿ ಪಢಾವೋ’ ಎಂಬ ಘೋಷಣೆ ಮಾತ್ರ ನೀಡಿದೆ. ಆದರೆ ವಾಸ್ತವವು ದೇಶದ ಜನರ ಮುಂದಿದೆ. ವೀರ ಮಹಿಳಾ ಕುಸ್ತಿಪಟುಗಳಾಗಲಿ ಅಥವಾ ಅಂಕಿತಾ ಭಂಡಾರಿಯಂತಹ ಹೆಣ್ಣುಮಕ್ಕಳಾಗಲಿ, ಪ್ರಧಾನಿ ಯಾವುದೇ ಹೆಣ್ಣು ಮಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸಲಿಲ್ಲ, ಮಹಿಳೆಯರ ವಿರುದ್ಧ ಅಪರಾಧ ಎಸಗುವವರಿಗೆ ಬಿಜೆಪಿ ಸರ್ಕಾರ ಯಾವಾಗಲೂ ರಕ್ಷಣೆ ನೀಡಿದೆ ಎಂದರು.

ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ದೇಶದ ಮಹಿಳೆಯರು ತೀವ್ರ ಆಕ್ರೋಶಗೊಂಡಿದ್ದಾರೆ.ಕಳೆದ 5 ವರ್ಷಗಳಿಂದ ಸಂಸತ್ತಿನ ಒಳಗೆ ಮೋದಿಜಿಯವರ ರಕ್ಷಣೆಯಲ್ಲಿದ್ದ ವ್ಯಕ್ತಿಯ ನಿಜಸ್ವರೂಪ ಬಯಲಾಗಿದೆ ಎಂದು ದೇಶದ ಮಹಿಳೆಯರು ಯೋಚಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ‘ಬೇರೆಯವರು ಇದೇ ಕೆಲಸ ಮಾಡಿದ್ದರೆ ಮೋದಿಜಿ ದೇಶದಾದ್ಯಂತ ಹೇಳುತ್ತಿದ್ದರು. ಆದರೆ ಈಗ ಅವರ ನೆಚ್ಚಿನ ವ್ಯಕ್ತಿಯ ವಿಷಯಕ್ಕೆ ಬಂದರೆ, ಅವರ ವರ್ತನೆ ಇಡೀ ದೇಶದ ಮುಂದೆ ಕಾಣಿಸುತ್ತಿದೆ ಎಂದು ಟೀಕಿಸಿದರು.

ಹಾಸನ ಲೋಕಸಭಾ ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಪ್ರಜ್ವಲ್ ರೇವಣ್ಣ ಅವರೊಂದಿಗೆ ಪ್ರಧಾನಿ ಮೋದಿ ವೇದಿಕೆ ಹಂಚಿಕೊಂಡು ಮತ ಯಾಚಿಸಿದ್ದಾರೆ. ಮೋದಿ ಪ್ರಧಾನಿಯಾಗಿರುವುದರಿಂದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಪಲಾಯನ ಮಾಡಲು ಸಾಧ್ಯವಾಗಿದೆ. ಆದರೆ ಇಂದು ನರೇಂದ್ರ ಮೋದಿ, ಅಮಿತ್ ಶಾ, ಸ್ಮೃತಿ ಇರಾನಿ ಮೌನವಾಗಿದ್ದಾರೆ. ."ಪ್ರಜ್ವಲ್ ರೇವಣ್ಣ ಅವರಿಗೆ ನೀಡಿದ ಮತವು ಅವರನ್ನು ಬಲಪಡಿಸುತ್ತದೆ ಎಂದು ಮೋದಿಜಿ ಹೇಳಿದ್ದರು. ಆದರೆ ಈಗ ದೇಶದ ಮಹಿಳೆಯರು ನಿಮಗೆ 400 ಸೀಟು ಗೆಲ್ಲುವ ಹೇಳಿಕೆಗೆ ಉತ್ತರಿಸಲಿದ್ದಾರೆ ಎಂದು ಡಿಸೋಜಾ ವಾಗ್ದಾಳಿ ನಡೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.