ದೇಶ

'ಊಳಿಗಮಾನ್ಯ ಶಕ್ತಿಗಳ' ವಿರುದ್ಧ ದಂಗೆ ಘೋಷಿಸಿದ ಹೇಮಂತ್ ಸೊರೆನ್

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸೊರೆನ್, ತಾನು ಜೈಲಿನಿಂದ ಬಿಡುಗಡೆಯಾಗಿ ಕೇವಲ ಎರಡು ದಿನಗಳು ಕಳೆದಿವೆ. ಆದರೆ ಕೇಸರಿ ಪಕ್ಷವು ಈಗಾಗಲೇ ಗೊಂದಲಕ್ಕೊಳಗಾಗಿದೆ ಎಂದರು.

'ಊಳಿಗಮಾನ್ಯ ಶಕ್ತಿಗಳ' ವಿರುದ್ಧ ದಂಗೆ ಘೋಷಿಸಿದ ಹೇಮಂತ್ ಸೊರೆನ್
ಹೇಮಂತ್ ಸೊರೆನ್
Published On :

ಭೋಗ್ನಾದಿ: ಎರಡು ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿರುವ ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಮತ್ತು ಜೆಎಂಎಂ ಕಾರ್ಯಾಧ್ಯಕ್ಷ ಹೇಮಂತ್ ಸೊರೆನ್ ಅವರು ಭಾನುವಾರ "ದೇಶದಾದ್ಯಂತ ಊಳಿಗಮಾನ್ಯ ಶಕ್ತಿಗಳನ್ನು ಓಡಿಸಲು ದಂಗೆ ಏಳುವುದಾಗಿ" ಘೋಷಿಸಿದ್ದಾರೆ.

ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸೊರೆನ್, ತಾನು ಜೈಲಿನಿಂದ ಬಿಡುಗಡೆಯಾಗಿ ಕೇವಲ ಎರಡು ದಿನಗಳು ಕಳೆದಿವೆ. ಆದರೆ ಕೇಸರಿ ಪಕ್ಷವು ಈಗಾಗಲೇ ಗೊಂದಲಕ್ಕೊಳಗಾಗಿದೆ ಮತ್ತು ನನ್ನನ್ನು ಮತ್ತೆ ಜೈಲಿಗೆ ಕಳುಹಿಸಲು ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.

ಶುಕ್ರವಾರ ಜೈಲಿನಿಂದ ಬಿಡುಗಡೆಯಾದ ನಂತರ ಜಾರ್ಖಂಡ್‌ನ ಸಂತಾಲ್ ಪರಗಣ ಪ್ರದೇಶದ ಭೋಗ್ನಾಡಿಹ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸೊರೆನ್, "ನನ್ನನ್ನು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗಿದೆ... ಬಿಜೆಪಿ ತನ್ನ ವಿರುದ್ಧ ಧ್ವನಿ ಎತ್ತುವವರಿಗೆ ಕಿರುಕುಳ ನೀಡಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿದೆ ಎಂದರು.

ನಾನು ಜೈಲಿನಿಂದ ಹೊರಬಂದು ಕೇವಲ ಎರಡು ದಿನಗಳು ಆಗಿದೆ. ಬಿಜೆಪಿ ಹೆದರಿದೆ ಮತ್ತು ಪಕ್ಷದ ಉನ್ನತ ನಾಯಕರು ಜಾರ್ಖಂಡ್‌ಗೆ ಆಗಾಗ್ಗೆ ಬರುತ್ತಿದ್ದಾರೆ ಮತ್ತು ಮತ್ತೆ ನನ್ನ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆ’’ ಎಂದು ಹೇಳಿದರು.

"ಹುಲ್ ದಿವಸ್'ನಲ್ಲಿ ನಿಮ್ಮನ್ನು ಉದ್ದೇಶಿಸಿ ಮಾತನಾಡಲು ನಾನು ಜೈಲಿನಿಂದ ಬಿಡುಗಡೆಯಾದ ನಂತರ ಮೊದಲ ಬಾರಿಗೆ ನನ್ನ ಮನೆಯಿಂದ ಹೊರಬಂದಿದ್ದೇನೆ. ಇದು ನಮಗೆಲ್ಲರಿಗೂ ಸ್ಫೂರ್ತಿಯ ದಿನವಾಗಿದೆ. ಬ್ರಿಟಿಷರ ವಿರುದ್ಧ ಸಂತಾಲ್ ದಂಗೆಯಂತೆ, ನಾವು 'ಹುಲ್ ಬಂಡಾಯ'ವನ್ನು ಘೋಷಿಸುತ್ತೇವೆ. ಜಾರ್ಖಂಡ್‌ನಿಂದ ಮಾತ್ರವಲ್ಲದೆ ದೇಶದಾದ್ಯಂತ ಊಳಿಗಮಾನ್ಯ ಶಕ್ತಿಗಳನ್ನು ಓಡಿಸಿ" ಎಂದು ಜಾರ್ಖಂಡ್ ಮಾಜಿ ಸಿಎಂ ಕರೆ ನೀಡಿದರು.

ಈ ದಿನವು ಬ್ರಿಟಿಷರ ವಿರುದ್ಧ 1855ರ ಸಂತಾಲ್ ದಂಗೆಯನ್ನು ಸೂಚಿಸುತ್ತದೆ. ಜಾರ್ಖಂಡ್ ಕ್ರಾಂತಿಕಾರಿಗಳ ನಾಡು ಎಂದು ಕರೆಯಲಾಗುತ್ತದೆ ಮತ್ತು "ನಾವು ಜೈಲು, ಲಾಠಿ ಅಥವಾ ಮರಣದಂಡನೆಗೆ ಹೆದರುವುದಿಲ್ಲ". ಇಂತಹ ಕಿರುಕುಳದಿಂದ ಬದುಕುಳಿದ ನಮ್ಮ ಪೂರ್ವಜರಿಂದ ನಾವು ಸ್ಫೂರ್ತಿ ಪಡೆದಿದ್ದೇವೆ. ಹೋರಾಟ ಮಾಡದೇ ಇದ್ದಿದ್ದರೆ ರಾಜ್ಯದಲ್ಲಿ ಆದಿವಾಸಿ ಸರ್ಕಾರ ಇರುತ್ತಿರಲಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.