ದೇಶ

Ragging ಪರಿಣಾಮ ಕಿಡ್ನಿ ಕಳೆದುಕೊಂಡ ಎಂಬಿಬಿಎಸ್ ವಿದ್ಯಾರ್ಥಿ!

ಹಿರಿಯ ವಿದ್ಯಾರ್ಥಿಗಳಿಂದ ರಾಗಿಂಗ್ ಗೆ ಒಳಗಾದ ಪರಿಣಾಮ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದು ನಾಲ್ಕು ಬಾರಿ ಡಯಾಲಿಸಿಸ್ ಮೊರೆ ಹೋಗಬೇಕಾದ ಘಟನೆ ಡುಂಗರಪುರ ವೈದ್ಯಕೀಯ ಕಾಲೇಜಿನಲ್ಲಿ ವರದಿಯಾಗಿದೆ.

Ragging ಪರಿಣಾಮ ಕಿಡ್ನಿ ಕಳೆದುಕೊಂಡ ಎಂಬಿಬಿಎಸ್ ವಿದ್ಯಾರ್ಥಿ!
ಸಂಗ್ರಹ ಚಿತ್ರ
Published On :

ನವದೆಹಲಿ: ಹಿರಿಯ ವಿದ್ಯಾರ್ಥಿಗಳಿಂದ ರ‍್ಯಾಗಿಂಗ್  ಗೆ ಒಳಗಾದ ಪರಿಣಾಮ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಕಿಡ್ನಿ ವೈಫಲ್ಯಕ್ಕೆ ಒಳಗಾಗಿದ್ದು ನಾಲ್ಕು ಬಾರಿ ಡಯಾಲಿಸಿಸ್ ಮೊರೆ ಹೋಗಬೇಕಾದ ಘಟನೆ ಡುಂಗರಪುರ ವೈದ್ಯಕೀಯ ಕಾಲೇಜಿನಲ್ಲಿ ವರದಿಯಾಗಿದೆ.

ರ್ಯಾಗಿಂಗ್ ಗೆ ಒಳಗಾಗಿದ್ದ ವಿದ್ಯಾರ್ಥಿಯ ಕಿಡ್ನಿಗೆ ಸೋಂಕು ತಗುಲಿತ್ತು. ಡುಂಗರಪುರ ಪೊಲೀಸ್ ಠಾಣೆಯ ಎಸ್ ಹೆಚ್ಒ ಗಿರ್ಧಾರಿ ಸಿಂಗ್ ಮಾಹಿತಿಯ ಪ್ರಕಾರ, ಮೇ 15 ರಂದು ದ್ವಿತೀಯ ವರ್ಷದ ವೈದ್ಯಕೀಯ ಶಿಕ್ಷಣ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 300 ಸಿಟ್ ಅಪ್ಸ್ ಮಾಡುವಂತೆ ವಿದ್ಯಾರ್ಥಿಗೆ ರ‍್ಯಾಗಿಂಗ್ ಮಾಡಿದ್ದಾರೆ. ಪರಿಣಾಮ ಆತನ ಮೂತ್ರಪಿಂಡಗಳ ಮೇಲೆ ತೀವ್ರವಾದ ಒತ್ತಡ ಉಂಟಾಗಿದ್ದು, ಸೋಂಕು ತಗುಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತನನ್ನು ಅಹಮದಾಬಾದ್‌ನಲ್ಲಿ ಒಂದು ವಾರದವರೆಗೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಸಮಯದಲ್ಲಿ ನಾಲ್ಕು ಬಾರಿ ಡಯಾಲಿಸಿಸ್ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ, ವಿದ್ಯಾರ್ಥಿಯು ಈಗ ಸ್ಥಿರವಾಗಿದ್ದಾನೆ.

ವಿದ್ಯಾರ್ಥಿ ಮರಳಿ ಕಾಲೇಜಿಗೆ ಬರಲು ಆರಂಭಿಸಿದ್ದಾನೆ. ಸಂಸ್ಥೆಯ ರ್ಯಾಗಿಂಗ್ ವಿರೋಧಿ ಸಮಿತಿಯ ವಿಚಾರಣೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ ಕಾಲೇಜು ಪ್ರಾಂಶುಪಾಲರು 7 ಆರೋಪಿಗಳ ವಿರುದ್ಧ ದೂರು ನೀಡಿದ್ದು ಎಫ್‌ಐಆರ್ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ಹೇಳಿದ್ದಾರೆ.

"ಸಂತ್ರಸ್ತ ವಿದ್ಯಾರ್ಥಿ ಈ ಹಿಂದೆಯೂ ರ್ಯಾಗಿಂಗ್ ಎದುರಿಸಿದ್ದರು ಆದರೆ ದೂರು ನೀಡಿರಲಿಲ್ಲ. ಕಾಲೇಜು ಪ್ರಾಧಿಕಾರವು ಜೂನ್ 20 ರಂದು ಆನ್‌ಲೈನ್ ಪೋರ್ಟಲ್ ಮೂಲಕ ದೂರು ಸ್ವೀಕರಿಸಿದ ನಂತರ ವಿಚಾರಣೆ ನಡೆಸಿದ ನಂತರ ಇತ್ತೀಚಿನ ಘಟನೆ ಬೆಳಕಿಗೆ ಬಂದಿದೆ" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಏಳು ವಿದ್ಯಾರ್ಥಿಗಳ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಗಾಯಗೊಳಿಸುವುದು), 143 (ಕಾನೂನುಬಾಹಿರ ಸಭೆ), 147 (ಗಲಭೆ), 149 (ಅಪರಾಧ), 341 (ತಪ್ಪು ನಿರ್ಬಂಧ) ಮತ್ತು 352 (ಹಲ್ಲೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಎಸ್‌ಎಚ್‌ಒ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.