ಸಂವಿಧಾನ ರಕ್ಷಣೆಗೆ ಹೋರಾಟ ಮಾಡ್ತೀವಿ: ವೇಣುಗೋಪಾಲ್
ಸಂವಿಧಾನದ ರಕ್ಷಣೆಗಾಗಿ ಜನರು ಇಂಡಿಯಾ ಬಣಕ್ಕೆ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ ಮತ್ತು ಅದಕ್ಕಾಗಿ ಪ್ರತಿಪಕ್ಷಗಳು ಹೋರಾಡಲು ನಿರ್ಧರಿಸಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಸೋಮವಾರ ಹೇಳಿದ್ದಾರೆ.

ನವದೆಹಲಿ: ಸಂವಿಧಾನದ ರಕ್ಷಣೆಗಾಗಿ ಜನರು ಇಂಡಿಯಾ ಬಣಕ್ಕೆ ಬಹುದೊಡ್ಡ ಜವಾಬ್ದಾರಿ ನೀಡಿದ್ದಾರೆ ಮತ್ತು ಅದಕ್ಕಾಗಿ ಪ್ರತಿಪಕ್ಷಗಳು ಹೋರಾಡಲು ನಿರ್ಧರಿಸಿವೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಸೋಮವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸಂವಿಧಾನದೊಂದಿಗೆ ಆಟವಾಡಲು ಪ್ರಯತ್ನಿಸುತ್ತಿರುವುದರಿಂದ ನಮ್ಮ ಎಲ್ಲಾ ಸದಸ್ಯರಿಗೆ ಸಂವಿಧಾನದ ಪ್ರತಿಯೊಂದಿಗೆ ಬರಲು ಕೇಳಿದ್ದೇವೆ. 400 ಕ್ಕಿಂತಲೂ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂಬ ಅವರ ಎಲ್ಲಾ ಮಾತುಗಳು ನೆಲಚ್ಚಿವೆ. ಜನರು ನಮಗೆ ದೊಡ್ಡ ಜವಾಬ್ದಾರಿಯನ್ನು ನೀಡಿದ್ದಾರೆ ಮತ್ತು ಸಂವಿಧಾನವನ್ನು ರಕ್ಷಿಸಲು ನಾವು ಜನರಿಗೆ ನಮ್ಮ ಮಾತನ್ನು ನೀಡಿದ್ದೇವೆ ಎಂದರು.
ಲೋಕಸಭೆಯಲ್ಲಿ ಉಪಸಭಾಪತಿ ಸ್ಥಾನದ ಕುರಿತು ಮಾತನಾಡಿದ ಅವರು, ಪ್ರತಿಪಕ್ಷಗಳು ಅದನ್ನು ಪಡೆಯಬೇಕು ಎಂಬುದು ಚರ್ಚೆಯಾಗಿದೆ. ಎರಡು ಯುಪಿಎ ಸರ್ಕಾರಗಳ ಅವಧಿಯಲ್ಲಿ ನಾವು ಅಂದಿನ ಪ್ರತಿಪಕ್ಷಗಳಿಗೆ ಉಪಸಭಾಪತಿ ಸ್ಥಾನವನ್ನು ನೀಡಿದ್ದೇವೆ. ಈ ಬಾರಿ ಏನಾಗುತ್ತದೋ ನೋಡುತ್ತೇವೆ ಎಂದರು.
ರಾಹುಲ್ ಗಾಂಧಿ ಅವರು ವಿರೋಧ ಪಕ್ಷದ ನಾಯಕನ ಪಾತ್ರವನ್ನು ವಹಿಸಿಕೊಂಡ ನಂತರ, ನಿರ್ಧಾರವು ಗಾಂಧಿಯವರದ್ದೇ ಆಗಿರಬೇಕು ಎಂದು ಹೇಳಿದರು. ವೇಣುಗೋಪಾಲ್ ಅವರು 2009 ರಿಂದ 2019 ರವರೆಗೆ ಆಲಪ್ಪುಳದಿಂದ ಲೋಕಸಭೆಗೆ ಸತತವಾಗಿ ಎರಡು ಬಾರಿ ಗೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



