ದೇಶ

'ಮೋದಿ ನಿರ್ಧರಿಸಿದ್ದಾರೆ, ನಾನು ಅದಕ್ಕೆ ತಲೆಬಾಗುತ್ತೇನೆ': ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ

ಬಿಜೆಪಿಯ ಏಕೈಕ ಸಂಸದ ಸುರೇಶ್ ಗೋಪಿ ಅವರಿಗೆ ಇಂದು ಭಾನುವಾರ ಬೆಳಗ್ಗೆ ನರೇಂದ್ರ ಮೋದಿಯವರಿಂದ ಕರೆ ಬಂದಿದ್ದು, ಮೋದಿ 3.0 ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಲು ಸಿದ್ಧರಾಗಿದ್ದಾರೆ.

'ಮೋದಿ ನಿರ್ಧರಿಸಿದ್ದಾರೆ, ನಾನು ಅದಕ್ಕೆ ತಲೆಬಾಗುತ್ತೇನೆ': ಕೇರಳದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ
ಪತ್ನಿ ರಾಧಿಕಾರಿಂದ ಸಂಸದ ಸುರೇಶ್ ಗೋಪಿಗೆ ಸಿಹಿ ತಿನಿಸು
Published On :

ತಿರುವನಂತಪುರ: ಬಿಜೆಪಿಯ ಏಕೈಕ ಸಂಸದ ಸುರೇಶ್ ಗೋಪಿ ಅವರಿಗೆ ಇಂದು ಭಾನುವಾರ ಬೆಳಗ್ಗೆ ನರೇಂದ್ರ ಮೋದಿಯವರಿಂದ ಕರೆ ಬಂದಿದ್ದು, ಮೋದಿ 3.0 ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಲು ಸಿದ್ಧರಾಗಿದ್ದಾರೆ.

ಪಿಎಂ ಮೋದಿ ಮತ್ತು ನಂತರ ಅಮಿತ್ ಶಾ ಇಬ್ಬರೂ ಸುರೇಶ್ ಗೋಪಿ ಅವರಿಗೆ ಕರೆ ಮಾಡಿದ್ದಾರೆ. ಪ್ರಧಾನಿ ಮೋದಿಯವರ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಮತ್ತು ಅದನ್ನು ಪಾಲಿಸುತ್ತಿದ್ದೇನೆ, ನನಗೆ ಯಾವ ಹುದ್ದೆ ನೀಡುತ್ತಿದ್ದಾರೆ ಎಂದು ಗೊತ್ತಿಲ್ಲ ಎಂದು ಸುರೇಶ್ ಗೋಪಿ ದೆಹಲಿಗೆ ತೆರಳುವ ಮೊದಲು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಕೇರಳ ರಾಜ್ಯದ ಮುಂಬರುವ ವಿಧಾನಸಭಾ ಚುನಾವಣೆಗಳ ದೃಷ್ಟಿಯಿಂದ ಕೇರಳಕ್ಕೆ ಪ್ರಾತಿನಿಧ್ಯ ನೀಡಲು ಮೋದಿ ಬಯಸುತ್ತಿದ್ದಾರೆ ಎಂದು ದಕ್ಷಿಣದ ಹಿರಿಯ ನಾಯಕರೊಬ್ಬರು ದೆಹಲಿಯಲ್ಲಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ.

ದಕ್ಷಿಣದ ಇತರ ಮಂತ್ರಿಗಳು: ಶಶಿ ತರೂರ್ ಅವರ ವಿರುದ್ಧ ಸ್ಪರ್ಧಿಸಿದ್ದ ರಾಜೀವ್ ಚಂದ್ರಶೇಖರ್ ಕೂಡ ಮೋದಿ 3.0 ಸರ್ಕಾರದಲ್ಲಿ ಉಳಿಯುವ ನಿರೀಕ್ಷೆಯಿದೆ. ತಮಿಳು ನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಕೂಡ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಟಿಡಿಪಿಗೆ ಒಂದು ಕ್ಯಾಬಿನೆಟ್ ಸ್ಥಾನ ಮತ್ತು ರಾಜ್ಯ ಸಚಿವ (MoS) ಸ್ಥಾನವನ್ನು ನೀಡಲಾಗಿದೆ.

ತ್ರಿಶೂರ್ ಲೋಕಸಭಾ ಸ್ಥಾನದಲ್ಲಿ ಗೆಲ್ಲವ ಮೂಲಕ ಕೇರಳದಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಾಧಿಸಿದ್ದು, ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.