ಈಗ NDA ಎಂದರೆ ನಿತೀಶ್-ನಾಯ್ಡು ಡಿಪೆಂಡೆಂಟ್ ಅಲಯನ್ಸ್: ಕಾಂಗ್ರೆಸ್
ದೆಹಲಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ನರೇಂದ್ರ ಮೋದಿ ಒಂದು ಗಂಟೆ ಭಾಷಣದಲ್ಲಿ ಹಲವು ಬಾರಿ ಎನ್ ಡಿಎ ಅನ್ನು ಉಲ್ಲೇಖಿಸಿದ್ದಾರೆ.

ನವದೆಹಲಿ: ದೆಹಲಿಯಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟದ ಸಭೆಯಲ್ಲಿ ನರೇಂದ್ರ ಮೋದಿ ಅವರು ಒಂದು ಗಂಟೆ ಭಾಷಣದಲ್ಲಿ ಹಲವು ಬಾರಿ ಎನ್ ಡಿಎ ಅನ್ನು ಉಲ್ಲೇಖಿಸಿದ್ದಾರೆ. ಆದರೆ ಕಳೆದ 10 ವರ್ಷಗಳಲ್ಲಿ ಎನ್‌ಡಿಎಯನ್ನು ಒಂದು ಬಾರಿಯೂ ಉಲ್ಲೇಖಿಸಿಲ್ಲ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಎನ್‌ಡಿಎಯನ್ನು ನಿತೀಶ್-ನಾಯ್ಡು ಡಿಪೆಂಡೆಂಟ್ ಮೈತ್ರಿಕೂಟ ಎಂದು ಟೀಕಿಸಿದ ಕಾಂಗ್ರೆಸ್, ಸಂಸತ್ ಸಂಕೀರ್ಣದಲ್ಲಿರುವ ರಾಷ್ಟ್ರೀಯ ಪ್ರತಿಮೆಗಳ "ತೆರವು" ಕುರಿತು ಮೋದಿ ಸರ್ಕಾರ ಜನರಿಗೆ ವಿವರಣೆಯನ್ನು ನೀಡಬೇಕಿದೆ ಎಂದು ಕಾಂಗ್ರೆಸ್ ನಾಯಕ ಪವನ್ ಖೇರಾ ಹೇಳಿದ್ದಾರೆ.
ಮಹಾತ್ಮ ಗಾಂಧಿ, ಬಿ ಆರ್ ಅಂಬೇಡ್ಕರ್ ಮತ್ತು ಛತ್ರಪತಿ ಶಿವಾಜಿ ಸೇರಿದಂತೆ ಇತರರ ಪ್ರತಿಮೆಗಳನ್ನು ಸಂಸತ್ತಿನ ಆವರಣದಲ್ಲಿ ಸ್ಥಳಾಂತರಿಸಲಾಗಿದೆ. ಈ ಕ್ರಮವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ ಮತ್ತು ಅವುಗಳನ್ನು ಅವರ ಪ್ರಾಮುಖ್ಯತೆಯ ಸ್ಥಳಗಳಿಂದ ಸ್ಥಳಾಂತರಿಸಲಾಗಿದೆ ಎಂದು ಆರೋಪಿಸಿದೆ.
"ಹತಾಶೆ"ಯಿಂದ ಮತ್ತು ಬಿಜೆಪಿಯು ಸ್ಪಷ್ಟ ಬಹುಮತವನ್ನು ಗಳಿಸದ ಕೋಪವನ್ನು ಹೊರಹಾಕುವ ಯತ್ನದಲ್ಲಿ ಸರ್ಕಾರ, ಈ ರಾಷ್ಟ್ರೀಯ ಐಕಾನ್‌ಗಳ ಪ್ರತಿಮೆಗಳನ್ನು "ತೆಗೆದುಹಾಕಿದೆ" ಎಂದು ಖೇರಾ ಆರೋಪಿಸಿದ್ದಾರೆ.
ಸಂಸತ್ತಿನ ಸಂಕೀರ್ಣದಲ್ಲಿ ಪಾರಂಪರಿಕ ಪ್ರತಿಮೆಗಳ ನಿರ್ವಹಣೆ ಮತ್ತು ಸಂಸತ್ತಿನ ಸಂಕೀರ್ಣದ ಅಭಿವೃದ್ಧಿಗೆ ಸಂಬಂಧಿಸಿದ ಜಂಟಿ ಸಂಸದೀಯ ಸಮಿತಿ ಮತ್ತು ಸಂಸತ್ತಿನ ಸಂಕೀರ್ಣದಲ್ಲಿ ರಾಷ್ಟ್ರೀಯ ನಾಯಕರು ಮತ್ತು ಸಂಸದರ ಭಾವಚಿತ್ರಗಳು ಮತ್ತು ಪ್ರತಿಮೆಗಳನ್ನು ಸ್ಥಾಪಿಸುವ ಸಮಿತಿಯ ನಿರ್ಧಾರವಿಲ್ಲದೆ ಪ್ರತಿಮೆಗಳನ್ನು "ತೆರವುಗೊಳಿಸಲಾಗಿದೆ" ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



