ನಿತೀಶ್ ಕುಮಾರ್ ಅವರಿಗಿಂತ ಉತ್ತಮ ಪ್ರಧಾನಿ ಯಾರು? ಸರ್ಕಾರ ರಚನೆಗೂ ಮುನ್ನವೇ ಜೆಡಿಯು ಭಿನ್ನರಾಗ!
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶ್ಲಾಘಿಸಿರುವ ಜನತಾ ದಳ-ಯುನೈಟೆಡ್ (ಜೆಡಿಯು) ಎಂಎಲ್‌ಸಿ ಡಾ.ಖಾಲೀದ್ ಅನ್ವರ್, ನಿತೀಶ್ ಕುಮಾರ್ ಅವರಿಗಿಂತ ಉತ್ತಮ ಪ್ರಧಾನಿ ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಶ್ಲಾಘಿಸಿರುವ ಜನತಾ ದಳ-ಯುನೈಟೆಡ್ (ಜೆಡಿಯು) ಎಂಎಲ್‌ಸಿ ಡಾ.ಖಾಲೀದ್ ಅನ್ವರ್, ನಿತೀಶ್ ಕುಮಾರ್ ಅವರಿಗಿಂತ ಉತ್ತಮ ಪ್ರಧಾನಿ ಯಾರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ನಿತೀಶ್ ಕುಮಾರ್ ಸಮಾಜ ಮತ್ತು ದೇಶವನ್ನು ಅರ್ಥಮಾಡಿಕೊಳ್ಳುವ ಅನುಭವಿ ರಾಜಕಾರಣಿ. ಅವರು ಎಲ್ಲಾ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ಗೌರವಿಸುತ್ತಾರೆ, ನಾವು ಸದ್ಯ NDA ಮೈತ್ರಿಕೂಟದ ಭಾಗವಾಗಿದ್ದೇವೆ, ಆದರೆ ಹಿಂದೆ ಮತ್ತು ಇಂದು, ಜನರು ನಿತೀಶ್ ಕುಮಾರ್ ಪ್ರಧಾನಿಯಾಗಬೇಕೆಂದು ಬಯಸಿದ್ದರು. ಇಂದಿನ ಫಲಿತಾಂಶದ ನಂತರ ಜನರ ನಿರೀಕ್ಷೆ ಹೆಚ್ಚಿದೆ ಎಂದು ಖಾಲಿದ್ ಅನ್ವರ್ ಹೇಳಿದರು.
ನಿತೀಶ್ ಕುಮಾರ್ ಬಿಹಾರ ರಾಜ್ಯವನ್ನು ಅಭಿವೃದ್ಧಿ ಮಾಡಿದ ರೀತಿ, ಅವರು ಕೃಷಿ ಸಚಿವರಾಗಿದ್ದಾಗ ದೇಶಕ್ಕೆ ಮಾಡಿದ ಕೃಷಿ ಮಾರ್ಗಸೂಚಿಯನ್ನು ಇಂದಿಗೂ ಅನುಸರಿಸಲಾಗುತ್ತಿದೆ. ದೇಶದ ರೈಲ್ವೇ ಕ್ಷೇತ್ರಕ್ಕಾಗಿ ಅವರು ಮಾಡಿದ ಕೆಲಸಕ್ಕಾಗಿ ಅವರು ಸ್ಮರಣೀಯರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಕೇಂದ್ರದಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದಲ್ಲಿ ಬಿಹಾರ ಸಿಎಂ ಸ್ಥಾನಕ್ಕೆ ಮತ್ತೊಮ್ಮೆ ನಿತೀಶ್ ಕುಮಾರ್ ರಾಜೀನಾಮೆ!?
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


