ದೇಶ

ಬಿಸಿಗಾಳಿಯಿಂದ ಸಾವಿನ ಸಂಖ್ಯೆ 87ಕ್ಕೆ ಏರಿಕೆ; ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್ ತೋರಿಸಿದ ಸೆನ್ಸಾರ್!

ಉತ್ತರ ಭಾರತದಲ್ಲಿ ಬಿಸಿಗಾಳಿಯ ಆರ್ಭಟ ಹೆಚ್ಚಾಗಿದ್ದು, ಬಿಸಿಲಿನ ತಾಪದಿಂದ ಕಳೆದ 36 ಗಂಟೆಗಳಲ್ಲಿ ಒಟ್ಟು 45 ಮಂದಿ ಸಾವನ್ನಪ್ಪಿದ್ದಾರೆ.

ಬಿಸಿಗಾಳಿಯಿಂದ ಸಾವಿನ ಸಂಖ್ಯೆ 87ಕ್ಕೆ ಏರಿಕೆ; ದೆಹಲಿಯಲ್ಲಿ 52 ಡಿಗ್ರಿ ಸೆಲ್ಸಿಯಸ್ ತೋರಿಸಿದ ಸೆನ್ಸಾರ್!
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಉತ್ತರ ಭಾರತದಲ್ಲಿ ಬಿಸಿಗಾಳಿಯ ಆರ್ಭಟ ಹೆಚ್ಚಾಗಿದ್ದು, ಬಿಸಿಲಿನ ತಾಪದಿಂದ ಕಳೆದ 36 ಗಂಟೆಗಳಲ್ಲಿ ಒಟ್ಟು 45 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಬಿಸಿಗಾಳಿಯಿಂದ ಮೃತಪಟ್ಟವರ ಸಂಖ್ಯೆ 87 ಕ್ಕೆ ಏರಿಕೆಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಪಶ್ಚಿಮ ಒಡಿಶಾದಲ್ಲಿ 19 ಜನರು ಶಾಖದ ಹೊಡೆತದಿಂದ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದಲ್ಲಿ 16 ಜನ, ಬಿಹಾರದಲ್ಲಿ ಐದು ಜನ, ರಾಜಸ್ಥಾನದಲ್ಲಿ ನಾಲ್ವರು ಮತ್ತು ಪಂಜಾಬ್‌ನಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ.

ಹರ್ಯಾಣ, ಚಂಡೀಗಢ-ದೆಹಲಿ, ಮತ್ತು ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಬಿಸಿಲಿನ ತಾಪದಿಂದ ಜನ ತತ್ತರಿಸಿ ಹೋಗಿದ್ದಾರೆ, ಮಧ್ಯಪ್ರದೇಶ, ಪಂಜಾಬ್, ರಾಜಸ್ಥಾನದ ಕೆಲವು ಭಾಗಗಳಲ್ಲಿ ಮತ್ತು ಉತ್ತರಾಖಂಡದ ಕೆಲವು ಪ್ರದೇಶಗಳಲ್ಲಿ ತಾಪಮಾನ ಹೆಚ್ಚಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ(IMD) ತಿಳಿಸಿದೆ.

ನಿನ್ನೆ (ಶುಕ್ರವಾರ) ಕಾನ್ಪುರದಲ್ಲಿ(ಪಶ್ಚಿಮ ಉತ್ತರ ಪ್ರದೇಶ) 48.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ವರದಿಯಾಗಿದೆ.

ಏತನ್ಮಧ್ಯೆ, ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಮೇ 29 ರಂದು ದೆಹಲಿಯ ಮುಂಗೇಶ್‌ಪುರ ಹವಾಮಾನ ಕೇಂದ್ರದಲ್ಲಿ ಸೆನ್ಸಾರ್ ತಪ್ಪಾಗಿ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ತೋರಿಸಿದೆ. ಇದು "ಸಂವೇದಕದ ಅಸಮರ್ಪಕ ಕಾರ್ಯನಿರ್ವಹಣೆ"ಯ ಪರಿಣಾಮ ಎಂದು IMD ಹೇಳಿದೆ.

ಮುಂಗೇಶ್‌ಪುರದ ಸ್ವಯಂಚಾಲಿತ ಹವಾಮಾನ ಕೇಂದ್ರ(AWS)ದ ಸಂವೇದಕ "ಸ್ಟ್ಯಾಂಡರ್ಡ್ ಉಪಕರಣವು ವರದಿ ಮಾಡಿದ ಗರಿಷ್ಠ ತಾಪಮಾನಕ್ಕಿಂತ ಸುಮಾರು 3 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನವನ್ನು ತೋರಿಸುತ್ತಿದೆ" ಎಂದು IMD ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.