ಗುಜರಾತ್ ನಲ್ಲಿರುವ ಪಾಕ್ ನಿರಾಶ್ರಿತೆಗೆ PAN ಕಾರ್ಡ್ ವಿತರಣೆ!
ದೀರ್ಘಾವಧಿ ವೀಸಾದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ಪತ್ತೆಯಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯದ ಪುರಾವೆ ಮತ್ತು ಆಯುಷ್ಮಾನ್ ಕಾರ್ಡ್ ಜೊತೆಗೆ ಇದೀಗ ಪ್ಯಾನ್ ಕಾರ್ಡ್ ಸಮಸ್ಯೆ ತಲೆದೋರಿದೆ.

ನವದೆಹಲಿ: ಗುಜರಾತ್ ನಲ್ಲಿ ವಾಸವಿರುವ ಪಾಕಿಸ್ತಾನ ನಿರಾಶ್ರಿತೆ PAN ಕಾರ್ಡ್ ನೀಡಲಾಗಿರುವ ಪ್ರಕರಣ ಪತ್ತೆಯಾಗಿದೆ. ಸಹರ್ನಗರದಲ್ಲಿ ವಾಸವಿರುವ ಪಾಕಿಸ್ತಾನ ಮೂಲದ ನಿರಾಶ್ರಿತರ ಕುಟುಂಬದ ಮಹಿಳೆಗೆ ಈ PAN ಕಾರ್ಡ್ ನೀಡಲಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಹೇಳಿದೆ.
ಆರೋಗ್ಯ ಇಲಾಖೆಯ ತನಿಖೆಯಲ್ಲಿ ಈ ಪ್ರಕರಣ ಬಯಲಾಗಿದ್ದು, ಭೂರಿಬೆನ್ ಠಾಕೋರ್ (ಅಲಿಯಾಸ್ ಭೂರಿ ಶಾಂಡೋ) ಎಂಬ ಪಾಕ್ ನಿರಾಶ್ರಿತ ಕುಟುಂಬಕ್ಕೆ ಆಯುಷ್ಮಾನ್ ಕಾರ್ಡ್ ನೀಡಿರುವುದರ ಬಗ್ಗೆಯೂ ತನಿಖೆ ನಡೆಯಲಿದೆ.
ದೀರ್ಘಾವಧಿ ವೀಸಾದಲ್ಲಿರುವ ಪಾಕಿಸ್ತಾನಿ ಪ್ರಜೆಗಳಿಗೆ ಈ ಹಿಂದೆ ಪತ್ತೆಯಾದ ಪಡಿತರ ಚೀಟಿ, ಆಧಾರ್ ಕಾರ್ಡ್, ಆದಾಯದ ಪುರಾವೆ ಮತ್ತು ಆಯುಷ್ಮಾನ್ ಕಾರ್ಡ್ ಜೊತೆಗೆ ಇದೀಗ ಪ್ಯಾನ್ ಕಾರ್ಡ್ ಸಮಸ್ಯೆ ತಲೆದೋರಿದೆ.
ದೀರ್ಘಾವಧಿಯ ವೀಸಾದಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಕುಟುಂಬವು 2021 ರಲ್ಲಿ ಪಡಿತರ ಚೀಟಿಯನ್ನು ಹೊಂದಿತ್ತು ಎಂದು ಆರೋಗ್ಯ ಇಲಾಖೆಯ ತನಿಖೆಯಿಂದ ತಿಳಿದುಬಂದಿದೆ. ಪಾಕಿಸ್ತಾನಿ ನಿರಾಶ್ರಿತರ ಹೆಸರಿನಲ್ಲಿ ಪ್ಯಾನ್ ಕಾರ್ಡ್ ನೀಡಿರುವುದು ಸಹ ಪತ್ತೆಯಾಗಿದೆ. ಮೆಹಸಾನ ಮಮ್ಮಲದಾರ ಕಛೇರಿಯು ಕುಟುಂಬಕ್ಕೆ ಪಡಿತರ ಚೀಟಿಯನ್ನು ನೀಡಿದ್ದು, ಅದರ ಆಧಾರದ ಮೇಲೆ ಮೆಹಸಾನ ತಾಲೂಕಾ ಅಭಿವೃದ್ದಿ ಅಧಿಕಾರಿಯ ಕಛೇರಿಯು ಆದಾಯ ವಿವರವನ್ನು ನೀಡಿದೆ. ಆದರೆ, ಎರಡು ವರ್ಷಗಳ ಹಿಂದೆ ಚುನಾವಣಾ ಕಾರ್ಡ್‌ನ ಸಮಸ್ಯೆ ಕಾಣಿಸಿಕೊಂಡಾಗ ಪಾಕಿಸ್ತಾನಿ ಕುಟುಂಬವು ಪಡಿತರ ಚೀಟಿಯನ್ನು ಒಪ್ಪಿಸಿತು.
“ಪಾಕಿಸ್ತಾನದ ಈ ಪ್ರಜೆಯು ಆದಾಯದ ವಿವರವನ್ನು ಬಳಸಿಕೊಂಡು ಪ್ಯಾನ್ ಕಾರ್ಡ್ ಪಡೆದಿರಬಹುದು, ಒಬ್ಬ ವ್ಯಕ್ತಿಯು ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಆದಾಯದ ವಿವರವನ್ನು ಹೊಂದಿದ್ದರೆ, ಪಾನ್ ಕಾರ್ಡ್ ಪಡೆಯುವುದು ಕಷ್ಟವೇನಲ್ಲ, ಈ ಆಧಾರದ ಮೇಲೆ ಮಹಿಳೆಯೂ ಸಹ ಪ್ಯಾನ್ ಕಾರ್ಡ್ ಪಡೆದುಕೊಂಡಿರಬಹುದು” ಎಂದು ಮೂಲವೊಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



