ದೇಶ

ಸರ್ಕಾರದಿಂದ ಮೂರು ಉದ್ಯೋಗ ಆಧಾರಿತ ಯೋಜನೆ : ಹಣಕಾಸು ಸಚಿವೆ ಘೋಷಣೆ

ಹವಾಮಾನಕ್ಕೆ ತಕ್ಕಂತೆ ಬೀಜಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಖಾಸಗಿ ವಲಯ, ಈ ಕ್ಷೇತ್ರದ ತಜ್ಞರು ಮತ್ತು ಇತರರಿಗೆ ಹಣ ಒದಗಿಸಲಿದೆ ಎಂದರು.

ಸರ್ಕಾರದಿಂದ ಮೂರು ಉದ್ಯೋಗ ಆಧಾರಿತ ಯೋಜನೆ : ಹಣಕಾಸು ಸಚಿವೆ ಘೋಷಣೆ
ನಿರ್ಮಲಾ ಸೀತಾರಾಮನ್
Published On :

ನವದೆಹಲಿ: ಉದ್ಯೋಗ ಸಂಬಂಧಿತ ಮೂರು ಯೋಜನೆಗಳನ್ನು ಪ್ರಾರಂಭಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ.

2024-25 ನೇ ಸಾಲಿನ ಕೇಂದ್ರ ಬಜೆಟ್ ನ್ನು ಇಂದು ಲೋಕಸಭೆಯಲ್ಲಿ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉದ್ಯೋಗ ಮಾರುಕಟ್ಟೆಗೆ ಪ್ರವೇಶಿಸುವ 30 ಲಕ್ಷ ಯುವಜನತೆಗೆ ಒಂದು ತಿಂಗಳ ಪಿಎಫ್ (ಭವಿಷ್ಯ ನಿಧಿ) ಕೊಡುಗೆಯನ್ನು ನೀಡುವ ಮೂಲಕ ಸರ್ಕಾರವು ಪ್ರೋತ್ಸಾಹವನ್ನು ನೀಡುತ್ತದೆ ಎಂದು ಹೇಳಿದರು.

ಉದ್ಯೋಗಿಗಳಲ್ಲಿ ಮಹಿಳೆಯರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ದೇಶದಲ್ಲಿ ಉದ್ಯೋಗಿ ಮಹಿಳಾ ಹಾಸ್ಟೆಲ್‌ಗಳನ್ನು ಸ್ಥಾಪಿಸಲಾಗುವುದು ಎಂದರು.

ಹವಾಮಾನಕ್ಕೆ ತಕ್ಕಂತೆ ಬೀಜಗಳನ್ನು ಅಭಿವೃದ್ಧಿಪಡಿಸಲು ಸರ್ಕಾರವು ಖಾಸಗಿ ವಲಯ, ಈ ಕ್ಷೇತ್ರದ ತಜ್ಞರು ಮತ್ತು ಇತರರಿಗೆ ಹಣ ಒದಗಿಸಲಿದೆ ಎಂದರು.

ಈಗಾಗಲೇ ಅಸ್ತಿತ್ವದಲ್ಲಿರುವ MGNREGA (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ) ವಯಸ್ಕ ಸದಸ್ಯರು ಕೆಲಸವನ್ನು ಬಯಸುವ ಪ್ರತಿ ಮನೆಯ ಕನಿಷ್ಠ ಒಬ್ಬ ಸದಸ್ಯರಿಗೆ ನಿರ್ದಿಷ್ಟ ಹಣಕಾಸಿನ ವರ್ಷದಲ್ಲಿ 100 ದಿನಗಳ ಕೂಲಿ ಉದ್ಯೋಗವನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.