ದೇಶ

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2024-25 ಮಂಡನೆ; ಮೋದಿ 3.0 ಸರ್ಕಾರದಿಂದ ನಿರೀಕ್ಷೆ

ಕೇಂದ್ರ ಬಜೆಟ್ ಭಾಷಣ ಮಂಡನೆ ಕೇಂದ್ರ ಸರ್ಕಾರ ನಿರ್ವಹಿಸುವ ಸಂಸದ್ ಟಿವಿ ಮತ್ತು ದೂರದರ್ಶನ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ.

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ 2024-25 ಮಂಡನೆ; ಮೋದಿ 3.0 ಸರ್ಕಾರದಿಂದ ನಿರೀಕ್ಷೆ
ಮುಖ್ಯ ಆರ್ಥಿಕ ಸಲಹೆಗಾರರೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
Published On :

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಗೆ 2024-25ನೇ ಹಣಕಾಸು ವರ್ಷದ ಮೋದಿ 3.0 ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್ ಮಂಡನೆ ಮಾಡಲಿದ್ದಾರೆ. ಕಳೆದ ಫೆಬ್ರುವರಿಯಲ್ಲಿ ನಡೆದ ಮಧ್ಯಂತರ ಬಜೆಟ್ ನ್ನೂ ಸೇರಿ ನಿರ್ಮಲಾ ಸೀತಾರಾಮನ್ ಅವರು ಸತತ ಏಳನೇ ಬಾರಿಗೆ ಮಂಡಿಸುತ್ತಿರುವ ಬಜೆಟ್ ಇದಾಗಿದೆ.

ಎಲ್ಲಾ ವಿಭಾಗಗಳಲ್ಲಿ ತೆರಿಗೆದಾರರಿಗೆ ಲಾಭದಾಯಕವಾಗುವಂತೆ ಆದಾಯ ತೆರಿಗೆ ರಚನೆಯಲ್ಲಿನ ಬದಲಾವಣೆಗಳ ಮೇಲೆ ಮತ್ತು ಭಾರತದಲ್ಲಿ ಸುಲಭವಾಗಿ ವ್ಯಾಪಾರ ಮಾಡುವುದನ್ನು ಸುಧಾರಿಸುವ ಕುರಿತು ಬಜೆಟ್ ನಲ್ಲಿ ಮಂಡನೆ ಸಾಧ್ಯತೆಯಿದೆ.

ನಿರ್ಮಲಾ ಸೀತಾರಾಮನ್ ಅವರ ಸತತ ಏಳನೇ ಕೇಂದ್ರ ಬಜೆಟ್ ಮಂಡನೆ ಇದು ಆಗಿರುವುದರಿಂದ, ಈ ಹಿಂದೆ ಸತತ ಆರು ಬಾರಿ ಬಜೆಟ್‌ ಮಂಡಿಸಿದ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ಮೀರಿಸುತ್ತಾರೆ.

ನೇರ ಪ್ರಸಾರ: ಕೇಂದ್ರ ಬಜೆಟ್ ಭಾಷಣ ಮಂಡನೆ ಕೇಂದ್ರ ಸರ್ಕಾರ ನಿರ್ವಹಿಸುವ ಸಂಸದ್ ಟಿವಿ ಮತ್ತು ದೂರದರ್ಶನ ಟಿವಿ ವಾಹಿನಿಗಳಲ್ಲಿ ನೇರ ಪ್ರಸಾರ ಇರುತ್ತದೆ. ಈ ವಾಹಿನಿಗಳ ಯೂಟ್ಯೂಬ್ ಚಾನಲ್​ಗಳಲ್ಲೂ ನೇರ ಪ್ರಸಾರ ಇರುತ್ತದೆ. ಇಂಡಿಯಾ ಬಜೆಟ್ ವೆಬ್​ಸೈಟ್​ನಲ್ಲೂ ಲೈವ್ ಸ್ಟ್ರೀಮ್ ಇರುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.