ಜೀವದ ಹಂಗು ತೊರೆದು ಬಾವಿಗೆ ಬಿದ್ದಿದ್ದ ನಾಗರಹಾವು ರಕ್ಷಿಸಿದ ಉರಗ ಪ್ರೇಮಿ
ತೋಟವೊಂದರಲ್ಲಿ ಇದ್ದ ಬಾವಿಗೆ ನಾಗರಹಾವೊಂದು ಬಂದು ಬಿದ್ದಿದ್ದು, ಮೇಲೇರಿ ಬರಲಾಗದೇ ಒದ್ದಾಡುತ್ತಿತ್ತು. ಇದನ್ನು ಕಂಡ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ.

ನವದೆಹಲಿ: ಉರಗ ರಕ್ಷಕರೊಬ್ಬರು ಬಾವಿಗೆ ಬಿದ್ದಿದ್ದ ಹಾವೊಂದನ್ನು ತಮ್ಮ ಜೀವದ ಹಂಗು ತೊರೆದು ರಕ್ಷಣೆ ಮಾಡಿರುವ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ವಿದಿತ್ ಶರ್ಮಾ ಎಂಬ ಟ್ವಿಟರ್ ಖಾತೆದಾರರು ಅಪ್ಲೋಡ್ ಮಾಡಿದ್ದು, ಈ ವೈರಲ್ ವಿಡಿಯೋದಲ್ಲಿ ತೋಟವೊಂದರಲ್ಲಿ ಇದ್ದ ಬಾವಿಗೆ ನಾಗರಹಾವೊಂದು ಬಂದು ಬಿದ್ದಿದ್ದು, ಮೇಲೇರಿ ಬರಲಾಗದೇ ಒದ್ದಾಡುತ್ತಿತ್ತು. ಇದನ್ನು ಕಂಡ ತೋಟದಲ್ಲಿ ಕೆಲಸ ಮಾಡುತ್ತಿದ್ದವರು ಉರಗ ರಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಉರಗ ರಕ್ಷಕ ತನ್ನ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಬಾವಿಗೆ ಇಳಿದು ಕ್ಷಣಮಾತ್ರದಲ್ಲಿ ಹಾವನ್ನು ರಕ್ಷಿಸಿದ್ದಾರೆ.
ಈ ರಕ್ಷಣಾ ಕಾರ್ಯಾಚರಣೆ ವೇಳೆ ನಾಗರಹಾವು ಎರಡು ಮೂರು ಬಾರಿ ಉರಗರಕ್ಷಕನನ್ನು ಕಚ್ಚೆಲೆತ್ನಿಸಿತು. ಆದರೆ ಆತ ತುಂಬಾ ಚಾಕಚಕ್ಯತೆ ಇಂದು ತನ್ನ ತಾನು ರಕ್ಷಿಸಿಕೊಂಡು ಹಾವನ್ನೂ ರಕ್ಷಿಸಿ ಮೇಲಕ್ಕೆ ತಂದ ವಿಡಿಯೋ ವೈರಲ್ ಆಗುತ್ತಿದೆ.
ಉರಗ ರಕ್ಷಕನ ಸಾಹಸಕ್ಕೆ ಎಲ್ಲಡೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ವಿಡಿಯೋ ಎಲ್ಲಿ ಸೆರೆಹಿಡಿದಿದ್ದು ಎಂಬ ಮಾಹಿತಿ ಲಭ್ಯವಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



