ಜುಲೈ 19 ರಂದು 1 ಸಾವಿರ ಅಭ್ಯರ್ಥಿಗಳಿಗೆ CUET-UG ಮರುಪರೀಕ್ಷೆ
CUET-UG ಪರೀಕ್ಷೆಗೆ ಸಂಬಂಧಿಸಿದ ಆರೋಪಗಳು ಸಾಬೀತಾದರೆ ಜುಲೈ 15 ರಿಂದ 19 ರ ನಡುವೆ CUET UG ಅಭ್ಯರ್ಥಿಗಳಿಗೆ ಮರುಪರೀಕ್ಷೆಯನ್ನು ನಡೆಸುವುದಾಗಿ NTA ಘೋಷಿಸಿತ್ತು.

ನವದೆಹಲಿ: ಜುಲೈ 19 ರಂದು ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ-ಯುಜಿ(CUET-UG)ಯ 1000 ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ(NTA) ನಿರ್ಧರಿಸಿದೆ.
NTA ಜುಲೈ 7 ರಂದು ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ-UG 2024 ರ ತಾತ್ಕಾಲಿಕ ಉತ್ತರ ಕೀಯನ್ನು ಬಿಡುಗಡೆ ಮಾಡಿತ್ತು ಮತ್ತು CUET-UG ಪರೀಕ್ಷೆಗೆ ಸಂಬಂಧಿಸಿದ ಆರೋಪಗಳು ಸಾಬೀತಾದರೆ ಜುಲೈ 15 ರಿಂದ 19 ರ ನಡುವೆ CUET UG ಅಭ್ಯರ್ಥಿಗಳಿಗೆ ಮರುಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿತ್ತು.
ಎನ್ ಟಿಎ ಭಾನುವಾರ ಮರುಪರೀಕ್ಷೆ ವೇಳಾಪಟ್ಟಿಯನ್ನು ಪ್ರಕಟಿಸಿದ್ದರೂ, ಅಂತಿಮ ಉತ್ತರಗಳ ಕೀಯೊಂದಿಗೆ ಈಗಾಗಲೇ ಎರಡು ವಾರಗಳಿಗೂ ಹೆಚ್ಚು ವಿಳಂಬವಾಗಿರುವ ಫಲಿತಾಂಶದ ಪ್ರಕಟಣೆಯ ಬಗ್ಗೆ ಅದು ಮೌನವಾಗಿದೆ.
NEET ಮತ್ತು NET ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ CUET-UG ಫಲಿತಾಂಶ ವಿಳಂಬವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



