ಪ್ರಧಾನಿ ಮೋದಿ ಭೇಟಿ 'ಐತಿಹಾಸಿಕ, ಗೇಮ್ ಚೆಂಜಿಂಗ್': ರಷ್ಯಾ
ಭಾರತ-ರಷ್ಯಾ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವುದರ ಮೇಲೆ ಉಭಯ ನಾಯಕರ ಮಾತುಕತೆ ಗಮನ ಕೇಂದ್ರೀಕರಿಸಿದೆ ಎಂದು ರಷ್ಯಾದ ರಾಜತಾಂತ್ರಿಕರು ಹೇಳಿದ್ದಾರೆ.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಷ್ಯಾ ಭೇಟಿ ಮತ್ತು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ಶೃಂಗಸಭೆಯ ಮಾತುಕತೆಗಳು 'ಐತಿಹಾಸಿಕ, ಗೇಮ್ ಚೆಂಜಿಂಗ್' ಎಂದು ಭಾರತದಲ್ಲಿನ ರಷ್ಯಾದ ಉಪ ರಾಯಭಾರಿ ರೋಮನ್ ಬಾಬುಶ್ಕಿನ್ ರೋಮನ್ ಬಾಬುಶ್ಕಿನ್ ಬುಧವಾರ ಹೇಳಿದ್ದಾರೆ.
ಪ್ರಕ್ಷುಬ್ಧ ಭೌಗೋಳಿಕ ರಾಜಕೀಯ ಪರಿಸರವನ್ನು ಪರಿಗಣಿಸಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಪ್ರಧಾನಿ ಮೋದಿಯವರ ರಷ್ಯಾ ಭೇಟಿಯನ್ನು ಇಡೀ ಜಗತ್ತು ವೀಕ್ಷಿಸಿದ್ದು, ಅವರ ಪ್ರವಾಸ ಎಷ್ಟು ಮಹತ್ವದ್ದಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಮೋದಿ ಮತ್ತು ಪುಟಿನ್ ಮಾತುಕತೆಯ ಒಂದು ದಿನದ ನಂತರ ಅವರು ಹೇಳಿಕೆ ನೀಡಿದ್ದಾರೆ.
ಭಾರತ-ರಷ್ಯಾ ವ್ಯಾಪಾರ ಮತ್ತು ಆರ್ಥಿಕ ಸಂಬಂಧಗಳನ್ನು ವಿಸ್ತರಿಸುವುದರ ಮೇಲೆ ಉಭಯ ನಾಯಕರ ಮಾತುಕತೆ ಗಮನ ಕೇಂದ್ರೀಕರಿಸಿದೆ ಎಂದು ರಷ್ಯಾದ ರಾಜತಾಂತ್ರಿಕರು ಹೇಳಿದ್ದಾರೆ. ಶೃಂಗಸಭೆಯ ಮಾತುಕತೆಗಳು ಭಾರತ ಮತ್ತು ರಷ್ಯಾ ರಾಷ್ಟ್ರೀಯ ಕರೆನ್ಸಿಗಳನ್ನು ಬಳಸಿಕೊಂಡು ದ್ವಿಪಕ್ಷೀಯ ಪಾವತಿ ವ್ಯವಸ್ಥೆಯನ್ನು ಮುಂದುವರಿಸಲು ನಿರ್ಧರಿಸಿವೆ ಎಂದು ಬಾಬುಶ್ಕಿನ್ ಹೇಳಿದರು.
ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಹಿಂದಿರುಗಿಸುವಂತೆ ಭಾರತದ ಬೇಡಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ವಿಷಯದಲ್ಲಿ ನಾವು ಭಾರತದಂತೆ ನಿಲುವು ಹೊಂದಿದ್ದೇವೆ. ಇದು ಶೀಘ್ರದಲ್ಲೇ ಬಗೆಹರಿಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



