ದೇಶ

ಮಹಾರಾಷ್ಟ್ರ: ಶಿವಸೇನಾ (UTB) ಜೊತೆ ಮೈತ್ರಿ ಕಡಿದುಕೊಂಡ ಪ್ರಕಾಶ್ ಅಂಬೇಡ್ಕರ್‌ ನೇತೃತ್ವದ VBA

ಲೋಕಸಭಾ ಚುನಾವಣೆ ವೇಳೆ ಸೀಟು ಹಂಚಿಕೆ ವಿಚಾರವಾಗಿ ದೂರವಾಗಿದ್ದ ಶಿವಸೇನಾ (UTB) ಮತ್ತು ವಂಚಿತ್ ಬಹುಜನ್ ಅಘಾಡಿ (ವಿಬಿಎ) ನಡುವಿನ ಮೈತ್ರಿ ಅಂತ್ಯವಾಗಿದೆ.

ಮಹಾರಾಷ್ಟ್ರ: ಶಿವಸೇನಾ (UTB) ಜೊತೆ ಮೈತ್ರಿ ಕಡಿದುಕೊಂಡ ಪ್ರಕಾಶ್ ಅಂಬೇಡ್ಕರ್‌ ನೇತೃತ್ವದ VBA
ಪ್ರಕಾಶ್ ಅಂಬೇಡ್ಕರ್ — Prakash Ambedkar
Published On :

ಮುಂಬೈ: ಲೋಕಸಭಾ ಚುನಾವಣೆ ವೇಳೆ ಸೀಟು ಹಂಚಿಕೆ ವಿಚಾರವಾಗಿ ದೂರವಾಗಿದ್ದ ಶಿವಸೇನಾ (UTB) ಮತ್ತು ವಂಚಿತ್ ಬಹುಜನ್ ಅಘಾಡಿ (ವಿಬಿಎ) ನಡುವಿನ ಮೈತ್ರಿ ಅಂತ್ಯವಾಗಿದೆ.

ಈ ಬಗ್ಗೆ ವಂಚಿತ್ ಬಹುಜನ್ ಅಘಾಡಿ (ವಿಬಿಎ) ಪಕ್ಷದ ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್‌ ಭಾನುವಾರ ಮಾಹಿತಿ ನೀಡಿದ್ದು, ಶಿವಸೇನಾ (ಯುಟಿಬಿ) ಜೊತೆಗಿನ ಮೈತ್ರಿ ಅಂತ್ಯವಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಇಂಡಿಯಾ ಮೈತ್ರಿಕೂಟದ ಭಾಗವಾಗಿದ್ದ ವಿಬಿಎ ಕಳೆದ ಲೋಕಸಭೆ ಚುನಾವಣೆ ವೇಳೆ ಸೀಟು ಹಂಚಿಕೆ ಸಂಬಂಧ ಉಂಟಾದ ಅಸಮಾಧಾನದ ಬಳಿಕ ಮೈತ್ರಿಯಿಂದ ಹೊರಗೆ ಬಂದಿತ್ತು. ಇಂಡಿಯಾ ಮೈತ್ರಿಕೂಟಕ್ಕೆ ಸೇರುವ ಮೊದಲು ವಿಬಿಎ ಶಿವಸೇನಾ (ಯುಟಿಬಿ) ಜೊತೆ ಮೈತ್ರಿ ಮಾಡಿಕೊಂಡಿತ್ತು. ಇದೀಗ ಶಿವಸೇನೆಯೊಂದಿಗೂ ವಿಬಿಎ ಮೈತ್ರಿ ಅಂತ್ಯಗೊಳಿಸಿದೆ.

ಈ ಬಗ್ಗೆ ಮಾತನಾಡಿದ ಪ್ರಕಾಶ್ ಅಂಬೇಡ್ಕರ್ ‘ಮೈತ್ರಿ ಅಂತ್ಯವಾಗಿದೆ. ಇನ್ನು ಏನೂ ಉಳಿದಿಲ್ಲ’ ಎಂದು ಶಿವಸೇನಾ (ಯುಟಿಬಿ) ಜೊತೆಗಿನ ಮೈತ್ರಿ ಸಂಬಂಧ ಕೇಳಲಾದ ಪ್ರಶ್ನೆಗೆ ಉತ್ತರಿಸಿದರು. ಶಿವಸೇನಾ (ಯುಟಿಬಿ) ಹಾಗೂ ವಿಬಿಎ ನಡುವೆ 2023ರ ಜನವರಿಯಲ್ಲಿ ಮೈತ್ರಿ ಏರ್ಪಟ್ಟಿತ್ತು.

ಡಾ. ಬಿ.ಆರ್ ಅಂಬೇಡ್ಕರ್ ಅವರ ಮೊಮ್ಮಗನಾಗಿರುವ ಪ್ರಕಾಶ್‌ ಅಂಬೇಡ್ಕರ್‌ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಕೋಲಾ ಕ್ಷೇತ್ರದಿಂದ ಸ್ಪರ್ಧಿಸಿ ಬಿಜೆಪಿಯ ಅನುಪ್ ಧೋತ್ರೆ ವಿರುದ್ಧ ಸೋಲನುಭವಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.