ರಾಮ ಮಂದಿರ ಉದ್ಘಾಟನೆ: ಅತಿಥಿ, ಗಣ್ಯರಿಗೆ, ಅಯೋಧ್ಯೆ ಕುರಿತ ಪುಸ್ತಕ, ಲೋಹದ ಹಣತೆ ಉಡುಗೊರೆ
ಅಯೋಧ್ಯೆಯ ರಾಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು, ಅತಿಥಿಗಳಿಗೆ ಹಲವು ಉಡುಗೊರೆಗಳನ್ನು ನೀಡಲಾಗಿದೆ.

ಅಯೋಧ್ಯೆ: ಅಯೋಧ್ಯೆಯ ರಾಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಗಣ್ಯರು, ಅತಿಥಿಗಳಿಗೆ ಹಲವು ಉಡುಗೊರೆಗಳನ್ನು ನೀಡಲಾಗಿದೆ. ಈ ಪೈಕಿ ಲೋಹದ ಹಣತೆ, ಅಯೋಧ್ಯೆಯ ಕುರಿತಾದ ಪುಸ್ತಕ, ವಿಶೇಷ ಮಾಲೆ, ಭಗವಾನ್ ರಾಮನ ಹೆಸರು ಇರುವ ಸ್ಕಾರ್ಫ್ ಗಳು ಪ್ರಮುಖವಾದದ್ದಾಗಿದೆ.
ಮಂದಿರ ಹಾಗೂ ಭಗವಾನ್ ರಾಮಲಲ್ಲಾನ ಗ್ರಾಫಿಕ್ ಚಿತ್ರವಿರುವ ಬ್ಯಾಗ್ ನಲ್ಲಿ ಉಡುಗೊರೆಗಳನ್ನಿಟ್ಟು ಕೊಡಲಾಗಿದೆ. ಪ್ರಧಾನಿ ಮೋದಿ ಉಪಸ್ಥಿತಿಯಲ್ಲಿ ಇಂದು ರಾಮಮಂದಿರದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣಪ್ರತಿಷ್ಠಾಪನೆ ನೆರವೇರಿತು.
ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ 7,000 ಮಂದಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಹ್ವಾನ ನೀಡಿತ್ತು. ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಂದಿರಕ್ಕೆ ಹೂವಿನ ಅಲಂಕಾರ ಮಾಡಲಾಗಿತ್ತು.
ಉಡುಗೊರೆ ನೀಡಲಾದ ಅಯೋಧ್ಯ ಧಾಮ- ಭಗವಂತನ ಸನ್ನಿಧಿ ಎಂಬ ಶೀರ್ಶಿಕೆ ಇರುವ ಪುಸ್ತಕದಲ್ಲಿ ಭಗವಾನ್ ರಾಮಲಲ್ಲಾನ ಹಳೆಯ ವಿಗ್ರಹದ ಫೋಟೋವನ್ನು ಒಳಗೊಂಡಿದೆ. ತುಳಸಿ ಮಾಲೆಯಲ್ಲಿ ಉತ್ತರ ಪ್ರದೇಶ ಪ್ರವಾಸೋದ್ಯಮ ಎಂಬ ಟ್ಯಾಗ್ ಲೈನ್ ಇದೆ. ಅತಿಥಿಗಳಿಗೆ ಲಡ್ಡು, ಗೋಡಂಬಿ ಹಾಗೂ ಇನ್ನಿತರ ಪ್ರಸಾದ ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


