ಮಲೆನಾಡ ನಿವಾಸಿಗಳ ಬಳಿ ಇರುವ ವನ್ಯಜೀವಿ ಕಲಾಕೃತಿಗಳ ಶರಣಾಗತಿಗಾಗಿ ಶೀಘ್ರವೇ ಬರಲಿದೆ ಗೆಝೆಟ್ ಅಧಿಸೂಚನೆ
ಕೊಡಗು ಸೇರಿದಂತೆ ಮಲೆನಾಡಿನ ನಿವಾಸಿಗಳ ಬಳಿ ವನ್ಯಜೀವಿಗಳ ದೇಹ, ಅಂಗಗಳಿಂದ ತಯಾರಿಸಲಾದ ಕಲಾಕೃತಿಗಳಿವೆ.

ಬೆಂಗಳೂರು: ಕೊಡಗು ಸೇರಿದಂತೆ ಮಲೆನಾಡಿನ ನಿವಾಸಿಗಳ ಬಳಿ ವನ್ಯಜೀವಿಗಳ ದೇಹ, ಅಂಗಗಳಿಂದ ತಯಾರಿಸಲಾದ ಕಲಾಕೃತಿಗಳಿವೆ.
ಇಂತಹ ಕಲಾಕೃತಿಗಳನ್ನು ವಾಪಸ್ ಸರ್ಕಾರದ ವಶಕ್ಕೆ ನೀಡುವುದಕ್ಕೆ ಸರ್ಕಾರ 3 ತಿಂಗಳ ಕಾಲಾವಧಿಯನ್ನೂ ನೀಡಿದೆ. ಆದರೆ ಇದನ್ನು ಪೂರ್ಣಗೊಳಿಸುವುದಕ್ಕೆ ಯಾರೊಬ್ಬರೂ ಆಸಕ್ತಿ ವಹಿಸಿಲ್ಲ.
"1973 ರಲ್ಲಿ ಕೇಂದ್ರ ಸರ್ಕಾರ ಇಂತಹ ವಸ್ತುಗಳನ್ನು ಹೊಂದಿದ್ದವರಿಗೆ ಅಥವಾ ವನ್ಯಜೀವಿಗಳ ಅಂಗಗಳನ್ನು ಇಟ್ಟುಕೊಂಡವರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ಎದುರಿಸುವುದರಿಂದ ತಪ್ಪಿಸಿಕೊಳ್ಳಲು ವಾಪಸ್ ನೀಡುವಂತೆ ಸೂಚನೆ ನೀಡಿತ್ತು 2003 ರಲ್ಲಿ ಸರ್ಕಾರ 180 ದಿನಗಳ ಕಾಲಾವಕಾಶ ನೀಡಿ ವಾಪಸ್ ನೀಡಲು ಸೂಚನೆ ನೀಡಿತ್ತು. ಆದರೆ ಹಲವು ಮಂದಿ ಅವುಗಳನ್ನು ಇನ್ನೂ ತಮ್ಮ ಬಳಿಯೇ ಇಟ್ಟುಕೊಂಡಿದ್ದಾರೆ" ಎಂದು ನಿವೃತ್ತ ಡಿಸಿಎಫ್ ಕಾಳಪ್ಪ ನೆನಪಿಸಿಕೊಂಡಿದ್ದಾರೆ.
ಮೂಲಗಳ ಪ್ರಕಾರ ಸೇನೆ, ಅಖಿಲ ಭಾರತೀಯ ಸೇವೆಗಳಲ್ಲಿ ತೊಡಗಿಸಿಕೊಂಡವರೂ ಸಹ ಈ ರೀತಿಯ ವನ್ಯಜೀವಿಗಳ ಅಂಗಗಳಿಂದ ತಯಾರಿಸಿದ ವಸ್ತುಗಳನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ 2003 ರಲ್ಲಿ ಇದರ ಪ್ರಮಾಣೀಕರಣಕ್ಕೆ ಅರ್ಜಿ ಸಲ್ಲಿಸಿಲ್ಲ. ಇವುಗಳನ್ನು ವಾಪಸ್ ಪಡೆಯುವುದಕ್ಕೆ ಸಚಿವ ಸಂಪುಟದಲ್ಲಿ ಆದೇಶ ಜಾರಿಯಾಗಿದ್ದು, ಗೆಜೆಟ್ ಅಧಿಸೂಚನೆ ಹೊರಬೀಳಬೇಕಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
"ಗೆಜೆಟ್ ಅಧಿಸೂಚನೆಯು ಹೊರಬಂದ ನಂತರ, ವಿನಾಯಿತಿಗಾಗಿ ನಾವು ನಿಯಮಗಳ ಸ್ಪಷ್ಟ ಚಿತ್ರಣವನ್ನು ಪಡೆಯುತ್ತೇವೆ. ಕೊಡಗಿನಲ್ಲಿ ಈ ವಿಚಾರ ಸೂಕ್ಷ್ಮವಾಗಿದ್ದು, ಸಂಬಂಧಪಟ್ಟ ವನ್ಯಜೀವಿ ಅಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದೇವೆ. ನಿಯಮಗಳು ಮತ್ತು ಷರತ್ತುಗಳನ್ನು ಸಮಗ್ರ ವಿಧಾನವನ್ನು ಅನುಸರಿಸಿ ಕೆಳಗೆ ನಮೂದಿಸಲಾಗುವುದು, ”ಎಂದು ಅವರು ವಿವರಿಸಿದರು. ಆದರೂ ಅಧಿಸೂಚನೆ ಜಾರಿಗೂ ಮುನ್ನ ಸೂಕ್ತ ಜಾಗೃತಿ ಮೂಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


