ಕೋರ್ಟ್ ನಲ್ಲಿ ನ್ಯಾಯಾಧೀಶರಿಂದಲೇ ಲೈಂಗಿಕ ದೌರ್ಜನ್ಯ: ಸಂತ್ರಸ್ತೆ
ನ್ಯಾಯ ಒದಗಿಸಬೇಕಾದ ನ್ಯಾಯಾಧೀಶರೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ತ್ರಿಪುರಾ ನ್ಯಾಯಾಲಯದಲ್ಲಿ ವರದಿಯಾಗಿದೆ.

ತ್ರಿಪುರಾ: ನ್ಯಾಯ ಒದಗಿಸಬೇಕಾದ ನ್ಯಾಯಾಧೀಶರೇ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ತ್ರಿಪುರಾ ನ್ಯಾಯಾಲಯದಲ್ಲಿ ವರದಿಯಾಗಿದೆ. ಅತ್ಯಾಚಾರದ ಸಂತ್ರಸ್ತೆಯೊಬ್ಬರು ನ್ಯಾಯಾಧೀಶರ ವಿರುದ್ಧ ಆರೋಪ ಮಾಡಿದ್ದು, ತ್ರಿಪುರಾದ ಕೋರ್ಟ್ ನ ಚೇಂಬರ್ ನಲ್ಲಿಯೇ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.
ಧಲೈ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ನೇತೃತ್ವದ ಮೂವರು ಸದಸ್ಯರ ಸಮಿತಿಯು ಆರೋಪದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದೆ ಎಂದು ಹಿರಿಯ ವಕೀಲರು ತಿಳಿಸಿದ್ದಾರೆ. ಫೆಬ್ರವರಿ 16 ರಂದು ತನ್ನ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ತನ್ನ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಕಮಲಾಪುರದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಕೋಣೆಗೆ ಹೋದಾಗ ಲೈಂಗಿಕ ದೌರ್ಜನ್ಯದ ಘಟನೆ ನಡೆದಿದೆ ಎಂದು ಮಹಿಳೆ ಆರೋಪಿಸಿದ್ದಾರೆ.
ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಕಮಲಾಪುರಕ್ಕೆ ನೀಡಿದ ದೂರಿನಲ್ಲಿ ಮಹಿಳೆ, "ಫೆಬ್ರವರಿ 16 ರಂದು ನನ್ನ ಹೇಳಿಕೆಯನ್ನು ದಾಖಲಿಸಲು ನಾನು ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರ ಕೊಠಡಿಗೆ ಹೋಗಿದ್ದೆ. ನಾನು ನನ್ನ ಹೇಳಿಕೆಯನ್ನು ನೀಡಲು ಮುಂದಾದಾಗ, ನ್ಯಾಯಾಧೀಶರು ತಬ್ಬಿಕೊಂಡರು. ನಾನು ಅವರ ಕೊಠಡಿಯಿಂದ ಹೊರಗೆ ಧಾವಿಸಿ ವಕೀಲರು ಮತ್ತು ನನ್ನ ಪತಿಗೆ ಘಟನೆಯ ಬಗ್ಗೆ ತಿಳಿಸಿದೆ" ಎಂದು ಹೇಳಿದ್ದಾರೆ.
ಘಟನೆ ಕುರಿತು ಮಹಿಳೆಯ ಪತಿ ಕಮಲಾಪುರ ಬಾರ್ ಅಸೋಸಿಯೇಷನ್‌ಗೆ ಪ್ರತ್ಯೇಕ ದೂರು ನೀಡಿದ್ದಾರೆ. ಸಂತ್ರಸ್ತೆಯ ದೂರಿನ ಮೇರೆಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಗೌತಮ್ ಸರ್ಕಾರ್ ಅವರು ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್ ಸತ್ಯಜಿತ್ ದಾಸ್ ಅವರೊಂದಿಗೆ ಕಮಲಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ಕಚೇರಿಗೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ.
"ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನೇತೃತ್ವದ ತ್ರಿಸದಸ್ಯ ಸಮಿತಿಯು ನ್ಯಾಯಾಲಯದ ಆವರಣದಲ್ಲಿ ಕಮಲಾಪುರ ವಕೀಲರ ಸಂಘದ ಸದಸ್ಯರನ್ನು ಭೇಟಿ ಮಾಡಿ ಮಹಿಳೆಯ ಆರೋಪಗಳ ಬಗ್ಗೆ ನಮ್ಮ ಅಭಿಪ್ರಾಯವನ್ನು ಕೇಳಿದೆವು. ನಾವು ನಮ್ಮ ಅಂಶಗಳನ್ನು ಸಮಿತಿಯ ಮುಂದೆ ಇರಿಸಿದ್ದೇವೆ" ಎಂದು ವಕೀಲರ ಸಂಸ್ಥೆಯ ಕಾರ್ಯದರ್ಶಿ ಶಿಬೇಂದ್ರ ದಾಸ್‌ಗುಪ್ತ ಪಿಟಿಐಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.





