ನೆಲಮಂಗಲ ದುರಂತ: ಸೂತಕದ ಮನೆಯಲ್ಲಿ ಮತ್ತೊಂದು ಸಾವು; ಮಗ ಸೇರಿ 6 ಮಂದಿ ಸಾವಿನಿಂದ ಆಘಾತ, ಚಂದ್ರಮ್ ತಂದೆ ನಿಧನ!
ಮೃತ ಚಂದ್ರಮ್ ತಂದೆ ಈರಗೊಂಡ ಏಗಪ್ಪಗೊಳ ತನ್ನ ಮಕ್ಕಳು, ಮೊಮ್ಮಕ್ಕಳ ಸಾವಿನ ಬಳಿಕ ತೀವ್ರವಾಗಿ ಆಘಾತಗೊಂಡಿದ್ದು 80 ವರ್ಷದ ಈರಗೊಂಡ ಏಗಪ್ಪಗೊಳ ಅವರು ಇಂದು ಸಂಜೆ ಮೃತಪಟ್ಟಿದ್ದಾರೆ.

ಸಾಂಗ್ಲಿ(ಮಹಾರಾಷ್ಟ್ರ): ಡಿಸೆಂಬರ್ 22ರಂದು ತುಮಕೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನೆಲಮಂಗಲದ ಬಳಿ ವೋಲ್ವೋ ಕಾರಿನ ಮೇಲೆ ಕಂಟೇನರ್ ಬಿದ್ದು ಒಂದೇ ಕುಟುಂಬದ 6 ಮಂದಿ ಸಾವನ್ನಪ್ಪಿದ್ದರು. ಈ ಸಾವುಗಳಿಂದ ತೀವ್ರ ಆಘಾತಗೊಂಡಿದ್ದ ಚಂದ್ರಮ್ ಅವರ ತಂದೆ ಈರಗೊಂಡ ಏಗಪ್ಪಗೊಳ ಮೃತಪಟ್ಟಿದ್ದಾರೆ.
ಮೃತ ಚಂದ್ರಮ್ ತಂದೆ ಈರಗೊಂಡ ಏಗಪ್ಪಗೊಳ ತನ್ನ ಮಕ್ಕಳು, ಮೊಮ್ಮಕ್ಕಳ ಸಾವಿನ ಬಳಿಕ ತೀವ್ರವಾಗಿ ಆಘಾತಗೊಂಡಿದ್ದು 80 ವರ್ಷದ ಈರಗೊಂಡ ಏಗಪ್ಪಗೊಳ ಅವರು ಇಂದು ಸಂಜೆ ಮೃತಪಟ್ಟಿದ್ದಾರೆ. ಚಂದ್ರಮ್ ಅವರ ಪತ್ನಿ ಗೌರಾಬಾಯಿ, ಮಕ್ಕಳಾದ ದೀಕ್ಷಾ, ಧ್ಯಾನ್, ತಂಗಿಯಾದ ವಿಜಯಲಕ್ಷ್ಮಿ ಹಾಗೂ ಆಕೆಯ 6 ವರ್ಷದ ಪುತ್ರಿ ಆರ್ಯಾ ಸಾವು ಕಂಟೇನರ್ ಅಡಿ ಸಿಲುಕಿ ಮೃತಪಟ್ಟಿದ್ದರು. ಈ ದಾರುಣ ಘಟನೆಗೆ ಕರ್ನಾಟಕ ಸೇರಿದಂತೆ ದೇಶ ಕಂಬನಿ ಮಿಡಿದಿತ್ತು.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿಯಲ್ಲಿ ಈರಗೊಂಡ ಏಗಪ್ಪಗೊಳ ಮೃತಪಟ್ಟಿದ್ದಾರೆ. ಕುಟುಂಬಸ್ಥರ ಸಾವಿನ ಬಳಿಕ ಈರಗೊಂಡ ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅದಲ್ಲದೆ, ದೀರ್ಘಕಾಲದ ಅನಾರೋಗ್ಯ ಕೂಡ ಅವರನ್ನು ಕುಗ್ಗಿಸಿದ್ದು ಇಂದು ಸಾವಿನ ಕದ ತಟ್ಟಿದ್ದಾರೆ.

ನೆಲಮಂಗಲ ಅಪಘಾತದಲ್ಲಿ ಮೃತಪಟ್ಟ ಚಂದ್ರಮ್ ಕುಟುಂಬಸ್ಥರ ಆಕ್ರಂದನ; ಹುಟ್ಟೂರು ಮಹಾರಾಷ್ಟ್ರದ ಮೊರಬಗಿಯಲ್ಲಿ ಅಂತ್ಯಕ್ರಿಯೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


