ದೇಶ

ಸಿಎಂ ರೇವಂತ್ ರೆಡ್ಡಿ ವಿರುದ್ಧ ಮಾತನಾಡಿದರೆ ತೆಲಂಗಾಣದಲ್ಲಿ ನಿಮ್ಮ ಸಿನಿಮಾ ಓಡಲು ಬಿಡಲ್ಲ: ಅಲ್ಲು ಅರ್ಜುನ್‌ಗೆ ಎಚ್ಚರಿಕೆ

ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ 2 ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು ಮತ್ತು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದರು.

ಸಿಎಂ ರೇವಂತ್ ರೆಡ್ಡಿ ವಿರುದ್ಧ ಮಾತನಾಡಿದರೆ ತೆಲಂಗಾಣದಲ್ಲಿ ನಿಮ್ಮ ಸಿನಿಮಾ ಓಡಲು ಬಿಡಲ್ಲ: ಅಲ್ಲು ಅರ್ಜುನ್‌ಗೆ ಎಚ್ಚರಿಕೆ
ಅಲ್ಲು ಅರ್ಜುನ್
Published On :

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ವಿರುದ್ಧ ಅಲ್ಲು ಅರ್ಜುನ್ ಅವರು ಮಾಡುವ ಯಾವುದೇ ಟೀಕೆಗಳನ್ನು ಸಹಿಸುವುದಿಲ್ಲ ಮತ್ತು ನಟನ ಸಿನಿಮಾಗಳು ರಾಜ್ಯದಲ್ಲಿ ತೆರೆಕಾಣಲು ಬಿಡಲ್ಲ ಎಂದು ಆಡಳಿತಾರೂಢ ಕಾಂಗ್ರೆಸ್ ಶಾಸಕ ಆರ್ ಭೂಪತಿ ರೆಡ್ಡಿ ಮಂಗಳವಾರ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಎಂದಿಗೂ ಚಿತ್ರರಂಗದ ವಿರುದ್ಧ ನಿಂತಿಲ್ಲ ಮತ್ತು ಕಾಂಗ್ರೆಸ್ ಸರ್ಕಾರಗಳು ಚಿತ್ರರಂಗದ ವ್ಯಕ್ತಿಗಳಿಗೆ ಹೈದರಾಬಾದ್‌ನಲ್ಲಿ ಭೂಮಿಯನ್ನು ನೀಡಿ ಸಿನಿಮಾ ಉದ್ಯಮವು ಬೇರೂರಲು ಸಹಾಯ ಮಾಡಿದೆ. ಇದಲ್ಲದೆ, ಪುಷ್ಪ 2 ಸಿನಿಮಾ ಸಮಾಜಕ್ಕೆ ಉಪಯೋಗವಾಗುವ ಚಿತ್ರವಲ್ಲ, ಕಳ್ಳಸಾಗಾಣಿಕೆದಾರನ ಕಥೆಯಾಗಿದೆ ಎಂದು ಹೇಳಿದರು.

'ನೀವು (ಅಲ್ಲು ಅರ್ಜುನ್) ನಮ್ಮ ಮುಖ್ಯಮಂತ್ರಿ ಬಗ್ಗೆ ಮಾತನಾಡಿದರೆ, ಹುಷಾರಾಗಿರಿ. ನೀವು ಆಂಧ್ರದವರು. ನೀವು ಇಲ್ಲಿ ವಾಸಿಸಲು ಬಂದಿದ್ದೀರಿ. ತೆಲಂಗಾಣಕ್ಕೆ ನಿಮ್ಮ ಕೊಡುಗೆ ಏನು? ನಾವು ನಿಮಗೆ 100 ಪ್ರತಿಶತ ಎಚ್ಚರಿಕೆ ನೀಡುತ್ತಿದ್ದೇವೆ. ನೀವು ನಿಮ್ಮ ಮಾರ್ಗವನ್ನು ಸರಿಪಡಿಸಿಕೊಳ್ಳದಿದ್ದರೆ, ನಾವು ನಿಮ್ಮ ಸಿನಿಮಾಗಳು ಇಲ್ಲಿ ಪ್ರದರ್ಶನ ಕಾಣಲು ಬಿಡುವುದಿಲ್ಲ' ಎಂದಿದ್ದಾರೆ.

ನಟ ಅಲ್ಲು ಅರ್ಜುನ್ ಅವರು ಅನುಮತಿಯಿಲ್ಲದೆಯೇ ಡಿಸೆಂಬರ್ 4 ರಂದು ಸಂಧ್ಯಾ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಕ್ಕೆ ಹೋಗಿದ್ದರು ಎಂದು ಶಾಸಕರು ತಿಳಿಸಿದ್ದಾರೆ. ಡಿಸೆಂಬರ್ 21 ರಂದು ಅಲ್ಲು ಅರ್ಜುನ್ ಅವರ ಹೇಳಿಕೆಗೆ ಪ್ರತಿಕ್ರಿಯೆಯಾಗಿ ಕಾಂಗ್ರೆಸ್ ಶಾಸಕ ಪ್ರತಿಕ್ರಿಯಿಸಿದ್ದಾರೆ.

ಸಂಧ್ಯಾ ಚಿತ್ರಮಂದಿರದಲ್ಲಿ ಪುಷ್ಪ 2 ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದರು ಮತ್ತು ಅವರ ಮಗ ಗಂಭೀರವಾಗಿ ಗಾಯಗೊಂಡಿದ್ದರು. ನಟ ರೋಡ್‌ಶೋ ನಡೆಸಿದರು ಮತ್ತು ಥಿಯೇಟರ್‌ನಲ್ಲಿ ಜನರತ್ತ ಕೈ ಬೀಸಿದ್ದರು ಎಂಬ ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಮಾಡಿದ್ದ ಆರೋಪಗಳನ್ನು ನಟ ಅಲ್ಲು ಅರ್ಜುನ್ ನಿರಾಕರಿಸಿದ್ದರು.

ಇದು ಮೆರವಣಿಗೆ ಅಥವಾ ರೋಡ್‌ಶೋ ಅಲ್ಲ. ತಾನು ಯಾವುದೇ ಇಲಾಖೆ, ರಾಜಕೀಯ ಮುಖಂಡರು ಅಥವಾ ಸರ್ಕಾರದ ವಿರುದ್ಧ ಅಲ್ಲ ಎಂದಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.