ದೇಶ

ಮಲಯಾಳಂ ಸಾಹಿತಿ, ಗೀತರಚನೆಕಾರ MT Vasudevan Nair ನಿಧನ

ಎರಡು ಸಾಕ್ಷ್ಯಚಿತ್ರ ಸೇರಿದಂತೆ ಮಲಯಾಳಂ ಚಿತ್ರರಂಗದಲ್ಲಿ ಶ್ರೇಷ್ಠವಾದ ನಿರ್ಮಾಲ್ಯಂ (1973) ಸೇರಿ ಆರು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ಮಲಯಾಳಂ ಸಾಹಿತಿ, ಗೀತರಚನೆಕಾರ MT Vasudevan Nair ನಿಧನ
ಎಂಟಿ ವಾಸುದೇವನ್ ನಾಯರ್ — online desk
Published On :

ಕೋಯಿಕ್ಕೋಡ್: ಮಲಯಾಳಂ ನ ಸಾಹಿತಿ, ಗೀತರಚನೆಕಾರ ಎಂಟಿ ವಾಸುದೇವನ್ ನಾಯರ್ (91) ಇಂದು ಕೋಯಿಕ್ಕೋಡ್ ನಲ್ಲಿ ನಿಧನರಾದರು.

ಹೃದಯಾಘಾತದಿಂದ ಕಳೆದ 11 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರು ಬೇಬಿ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ ಅಳವಡಿಸಲಾಗಿದ್ದ ವೆಂಟಿಲೇಟರ್ ತೆಗೆದುಹಾಕಿದ್ದರಿಂದ ಮಂಗಳವಾರ ಅವರ ಸ್ಥಿತಿ ಸುಧಾರಣೆಯ ಲಕ್ಷಣಗಳನ್ನು ತೋರಿಸಿತ್ತಿ. ಆದರೆ ಬುಧವಾರ ರಾತ್ರಿ ವೇಳೆಗೆ ಅದು ಅಷ್ಟೇ ವೇಗವಾಗಿ ಹದಗೆಟ್ಟಿತು.

ಎಂಟಿ ಎಂದೇ ಖ್ಯಾತರಾಗಿದ್ದ ಎಂಟಿ ವಾಸುದೇವನ್ ನಾಯರ್ ಕಾದಂಬರಿಗಳು, ಸಣ್ಣ ಕಥೆಗಳು, ಚಿತ್ರಕಥೆಗಳು, ಮಕ್ಕಳ ಸಾಹಿತ್ಯ, ಪ್ರವಾಸ ಬರವಣಿಗೆ ಮತ್ತು ಪ್ರಬಂಧಗಳನ್ನು ವ್ಯಾಪಿಸಿರುವ ಕೊಡುಗೆಗಳೊಂದಿಗೆ ಮಲಯಾಳಂ ಸಾಹಿತ್ಯ ಮತ್ತು ಸಿನಿಮಾದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ.

ಅವರು ಎರಡು ಸಾಕ್ಷ್ಯಚಿತ್ರಗಳೊಂದಿಗೆ ಮಲಯಾಳಂ ಚಿತ್ರರಂಗದಲ್ಲಿ ಶ್ರೇಷ್ಠವಾದ ನಿರ್ಮಾಲ್ಯಂ (1973) ಸೇರಿದಂತೆ ಆರು ಚಲನಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ.

ಅವರು ಚಲನಚಿತ್ರೋದ್ಯಮಕ್ಕೆ ಪ್ರವೇಶಿಸಿದ ಸ್ವಂತ ಕಥೆಯಾದ Snehathinte Mukhangal ಮುರಪ್ಪೆನ್ನು (1965) ಚಿತ್ರವಾಗಿ ರೂಪುಗೊಂಡಿತ್ತು. ಈ ಬಳಿಕ ಅವರು 44 ಇತರ ಚಿತ್ರಕಥೆಗಳನ್ನು ಬರೆದಿದ್ದಾರೆ.

ಅವರು ಜ್ಞಾನಪೀಠ ಪ್ರಶಸ್ತಿ, ಎಳುತಚ್ಚನ್ ಪುರಸ್ಕಾರಂ, ವಯಲಾರ್ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇರಳ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವಲ್ಲತ್ತೋಳ್ ಪುರಸ್ಕಾರಂ, ಮತ್ತು ಜೆಸಿ ಡೇನಿಯಲ್ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ. ಅವರ ಚಿತ್ರಕಥೆಗಳು ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಮತ್ತು 11 ಬಾರಿ ರಾಜ್ಯ ಪ್ರಶಸ್ತಿಯನ್ನು ಗಳಿಸಿವೆ.

ಎಂಟಿ ವಾಸುದೇವನ್ ನಾಯರ್ ಮಡತ್ ತೆಕ್ಕೆಪಾಟ್ಟು ವಾಸುದೇವನ್ ನಾಯರ್ ಅವರು ಜುಲೈ 15 ರಂದು 1933 ರಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕೂಡಲ್ಲೂರ್ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.