'EVM ಹ್ಯಾಕ್ ಮಾಡಿ ತೋರಿಸಿ': ಮಿತ್ರಪಕ್ಷ ಕಾಂಗ್ರೆಸ್ ವಿರುದ್ಧವೇ ಗುಡುಗಿದ TMC
ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತುತ್ತಿರುವಂತೆಯೇ ಇದಕ್ಕೆ ಭಿನ್ನವಾಗಿ ನಿಲವು ತಳೆದಿರುವ ತೃಣಮೂಲ ಕಾಂಗ್ರೆಸ್ 'EVM ಹ್ಯಾಕ್ ಮಾಡಿ ತೋರಿಸಿ' ಎಂದು ಸವಾಲೆಸೆದಿದೆ.

ನವದೆಹಲಿ: ಎಲೆಕ್ಟ್ರಾನಿಕ್ ಮತ ಯಂತ್ರಗಳ ವಿಶ್ವಾಸಾರ್ಹತೆಯ ಬಗ್ಗೆ ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿರುವಂತೆಯೇ ಇತ್ತ ಟಿಎಂಸಿ ಈ ವಿಚಾರವಾಗಿ ಕಾಂಗ್ರೆಸ್ ನಿಂದ ಅಂತರ ಕಾಯ್ದುಕೊಂಡಿದೆ.
ಹೌದು.. ಇವಿಎಂಗಳ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್ ಪ್ರಶ್ನೆಗಳನ್ನು ಎತ್ತುತ್ತಿರುವಂತೆಯೇ ಇದಕ್ಕೆ ಭಿನ್ನವಾಗಿ ನಿಲವು ತಳೆದಿರುವ ತೃಣಮೂಲ ಕಾಂಗ್ರೆಸ್ 'EVM ಹ್ಯಾಕ್ ಮಾಡಿ ತೋರಿಸಿ' ಎಂದು ಸವಾಲೆಸೆದಿದೆ. ಟಿಎಂಸಿ ಸಂಸದ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಸೋಮವಾರ ಈ ವಿಷಯದ ಬಗ್ಗೆ ಕಾಂಗ್ರೆಸ್ ಜೊತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇವಿಎಂಗಳ ಮೇಲಿನ ಆರೋಪಗಳು ಆಗಿದ್ದಾಂಗ್ಗೆ ಕೇಳಿಬರುತ್ತಿವೆಯಾದರೂ ಅಂತಹ ಆರೋಪಗಳು ಈ ವರೆಗೂ ಸಾಬೀತಾಗಿಲ್ಲ. ಆರೋಪಗಳನ್ನು ಮಾಡುವ ಜನರು ಇವಿಎಂಗಳನ್ನು ಹೇಗೆ "ಹ್ಯಾಕ್" ಮಾಡಬಹುದು ಎಂಬುದನ್ನು ಪ್ರದರ್ಶಿಸಬೇಕು ಎಂದು ಒತ್ತಾಯಿಸಿದರು.
"ಇವಿಎಂ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಜನರು, ಅವರ ಬಳಿ ಏನಾದರೂ ಸಾಕ್ಷಿಗಳು ಇದ್ದರೆ ಅವರು ಚುನಾವಣಾ ಆಯೋಗಕ್ಕೆ ಹೋಗಿ ಡೆಮೊ ತೋರಿಸಬೇಕು. ಇವಿಎಂ ಯಾದೃಚ್ಛೀಕರಣದ ಸಮಯದಲ್ಲಿ ಕೆಲಸ ಸರಿಯಾಗಿ ನಡೆದರೆ ಮತ್ತು ಬೂತ್‌ನಲ್ಲಿ ಕೆಲಸ ಮಾಡುವ ಜನರು ಅಣಕು ಮತದಾನ ಮತ್ತು ಎಣಿಕೆಯ ಸಮಯದಲ್ಲಿ ಪರಿಶೀಲಿಸಿದರೆ, ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ನಾನು ಭಾವಿಸುತ್ತೇನೆ" ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಅಂತೆಯೇ "ಇನ್ನೂ ಯಾರಾದರೂ ಇವಿಎಂಗಳನ್ನು ಹ್ಯಾಕ್ ಮಾಡಬಹುದು ಎಂದು ಭಾವಿಸಿದರೆ, ಅವರು ಚುನಾವಣಾ ಆಯೋಗವನ್ನು ಭೇಟಿ ಮಾಡಿ ಇವಿಎಂಗಳನ್ನು ಹೇಗೆ ಹ್ಯಾಕ್ ಮಾಡಬಹುದು ಎಂಬುದನ್ನು ತೋರಿಸಬೇಕು. ಕೇವಲ ಯಾದೃಚ್ಛಿಕ ಹೇಳಿಕೆಗಳನ್ನು ನೀಡುವ ಮೂಲಕ ಏನೂ ಮಾಡಲು ಸಾಧ್ಯವಿಲ್ಲ" ಎಂದು ಟಿಎಂಸಿ ಸಂಸದ ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



