ರಾಜ್ಯಸಭೆ ಉಪಚುನಾವಣೆ: NCW ಮಾಜಿ ಮುಖ್ಯಸ್ಥೆ, ಬಿಜೆಪಿ ಅಭ್ಯರ್ಥಿ ರೇಖಾ ಶರ್ಮಾ ಅವಿರೋಧವಾಗಿ ಆಯ್ಕೆ
ರೇಖಾ ಶರ್ಮಾ ಅವರು ಮಂಗಳವಾರ ಹರಿಯಾಣದಿಂದ ರಾಜ್ಯಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು.

ಚಂಡೀಗಢ: ರಾಜ್ಯಸಭೆಯ ಉಪಚುನಾವಣೆಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ(NCW) ಮಾಜಿ ಅಧ್ಯಕ್ಷೆ ಮತ್ತು ಬಿಜೆಪಿ ನಾಯಕಿ ರೇಖಾ ಶರ್ಮಾ ಅವರು ಹರಿಯಾಣದಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಶುಕ್ರವಾರ ಘೋಷಿಸಲಾಗಿದೆ.
ರೇಖಾ ಶರ್ಮಾ ಅವರು ಮಂಗಳವಾರ ಹರಿಯಾಣದಿಂದ ರಾಜ್ಯಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿತ್ತು. ಹೀಗಾಗಿ 3 ಗಂಟೆಯ ನಂತರ ಕಣದಲ್ಲಿದ್ದ ಏಕೈಕ ಅಭ್ಯರ್ಥಿ ರೇಖಾ ಶರ್ಮಾ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ.
ಶರ್ಮಾ ಅವರು ಅವಿರೋಧವಾಗಿ ಆಯ್ಕೆಯಾದ ನಂತರ ಚುನಾವಣಾಧಿಕಾರಿ ಪ್ರಮಾಣಪತ್ರವನ್ನು ನೀಡಿದರು. ಈ ವೇಳೆ ಹರಿಯಾಣ ಸಚಿವ ಮಹಿಪಾಲ್ ಧಂಡಾ ಮತ್ತು ಹರಿಯಾಣ ವಿಧಾನಸಭೆಯ ಮಾಜಿ ಸ್ಪೀಕರ್ ಗಿಯಾನ್ ಚಂದ್ ಗುಪ್ತಾ ಅವರು ಇದ್ದರು.
ಡಿಸೆಂಬರ್ 20 ರಂದು ನಡೆಯಲಿರುವ ರಾಜ್ಯಸಭಾ ಉಪಚುನಾವಣೆಗೆ ಶರ್ಮಾ ಅವರ ಹೆಸರನ್ನು ಬಿಜೆಪಿ ಸೋಮವಾರ ಪ್ರಕಟಿಸಿತ್ತು. ಆದರೆ ಪ್ರತಿಪಕ್ಷಗಳು ಉಪಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



