ಹೈದರಾಬಾದ್: ಕಲಬೆರಕೆ ನಂದಿನಿ ಹಾಲಿನ ಪೌಡರ್ ಮಾರಾಟ, ವ್ಯಕ್ತಿಯ ಬಂಧನ
ಮುಶೀರಾಬಾದ್ ಪೊಲೀಸರೊಂದಿಗೆ ಕೇಂದ್ರ ವಲಯದ ಕಾರ್ಯ ಪಡೆಯ ತಂಡ ಈ ದಾಳಿ ನಡೆಸಿದ್ದು, 330 ಕೆಜಿ ಹಾಲಿನ ಪುಡಿಯ ಬ್ಯಾಗ್ ಗಳು ಮತ್ತು 450 ಕೆಜಿ ಹಾಲಿನ ಪುಡಿಯ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ

ಮುಶೀರಾಬಾದ್: ಹೈದರಾಬಾದಿನ ಮುಶೀರಾಬಾದ್ ನ ಒಂದು ಗೋದಾಮಿನ ಮೇಲೆ ದಾಳಿ ನಡೆಸಿದ ಪೊಲೀಸರು ಕಲಬೆರಕೆ ಅಥವಾ ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.
ಮುಶೀರಾಬಾದ್ ಪೊಲೀಸರೊಂದಿಗೆ ಕೇಂದ್ರ ವಲಯದ ಕಾರ್ಯ ಪಡೆಯ ತಂಡ ಈ ದಾಳಿ ನಡೆಸಿದ್ದು, 330 ಕೆಜಿ ಹಾಲಿನ ಪುಡಿಯ ಬ್ಯಾಗ್ ಗಳು ಮತ್ತು 450 ಕೆಜಿ ಹಾಲಿನ ಪುಡಿಯ ಪ್ಯಾಕೆಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತನನ್ನು ಚಿತ್ತಬೋಯಿನ ದಾಮೋದರ್ ಯಾದವ್ ಎಂದು ಗುರುತಿಸಲಾಗಿದೆ.
ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ "ಕ್ಷೀರ ಭಾಗ್ಯ ಯೋಜನೆಯಡಿ ಶಾಲಾ ಮಕ್ಕಳಿಗೆ ನಂದಿನಿ ಹಾಲಿನ ಪುಡಿ ಪೂರೈಸಲಾಗುತ್ತಿದೆ. ಇದನ್ನು ಮಾರಾಟ ಮಾಡುವಂತಿಲ್ಲ. ಆದರೆ ಯೋಗ್ಯವಲ್ಲದ ಅವಧಿ ಮೀರಿದ ನಂದಿನಿ ಹಾಲಿನ ಪೌಡರ್ ನ್ನು ಅಕ್ರಮವಾಗಿ ಸಾಗಿಸಿ, ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಆರೋಪಿಯನ್ನು ಬಂಧಿಸಲಾಗಿದೆ.
ದಾಮೋದರ್ ಯಾದವ್ ಬಳಕೆಗೆ ಯೋಗ್ಯವಲ್ಲದ ಪೌಡರ್ ನ್ನು ಹೆಚ್ಚಿನ ಬೆಲೆಗೆ ಅಗತ್ಯವಿರುವ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಆತನನ್ನು ಆಹಾರ ಸುರಕ್ಷತಾ ಅಧಿಕಾರಿಗಳು ಈ ಹಿಂದೆ ಒಂದೆರಡು ಬಾರಿ ಬಂಧಿಸಿದ್ದರು. ಆದರೂ ತನ್ನ ಹಾದಿಯನ್ನು ಸರಿಪಡಿಸಿಕೊಳ್ಳದ ಆರೋಪಿ, ಅಕ್ರಮ ವ್ಯಾಪಾರವನ್ನು ಪುನರಾರಂಭಿಸಿದ್ದ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



