ಬಹುಸಂಖ್ಯಾತರ ಅಪೇಕ್ಷೆಯಂತೆ ಈ ದೇಶ ನಡೆಯುತ್ತೆ; UCC ಶೀಘ್ರದಲ್ಲೇ ಜಾರಿ: VHP ಕಾರ್ಯಕ್ರಮದಲ್ಲಿ ಜಡ್ಜ್ ಶೇಖರ್ ಯಾದವ್
ಇದು ಭಾರತ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಈ ದೇಶವು ಭಾರತದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ನಡೆಯುತ್ತದೆ. ನ್ಯಾಯಾಧೀಶರಾಗಿ ನಾನು ಇದನ್ನು ಹೇಳಬಾರದು ಅಂತಲ್ಲ. ವಾಸ್ತವದಲ್ಲಿ ಕಾನೂನು ಬಹುಮತಕ್ಕೆ ಅನುಗುಣವಾಗಿ ಕೆಲಸ ಮಾಡುತ್ತದೆ ಎಂದರು.

ಪ್ರಯಾಗರಾಜ್ನಲ್ಲಿ ವಿಶ್ವ ಹಿಂದೂ ಪರಿಷತ್ (VHP) ಕಾನೂನು ಘಟಕ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಲಹಾಬಾದ್ ಹೈಕೋರ್ಟ್ನ ಹಾಲಿ ನ್ಯಾಯಾಧೀಶರು ಏಕರೂಪ ನಾಗರಿಕ ಸಂಹಿತೆಯ ಸಾಂವಿಧಾನಿಕ ಅಗತ್ಯದ ಕುರಿತು ಉಪನ್ಯಾಸ ನೀಡಿದರು. ಭಾರತದಲ್ಲಿ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ದೇಶವು ನಡೆಯುತ್ತದೆ ಎಂದು ಹೇಳಲು ಯಾವುದೇ ಹಿಂಜರಿಕೆಯಿಲ್ಲ ಎಂದರು.
ಇದು ಭಾರತ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಈ ದೇಶವು ಭಾರತದಲ್ಲಿ ವಾಸಿಸುವ ಬಹುಸಂಖ್ಯಾತರ ಇಚ್ಛೆಗೆ ಅನುಗುಣವಾಗಿ ನಡೆಯುತ್ತದೆ. ನ್ಯಾಯಾಧೀಶರಾಗಿ ನಾನು ಇದನ್ನು ಹೇಳಬಾರದು ಅಂತಲ್ಲ. ವಾಸ್ತವದಲ್ಲಿ ಕಾನೂನು ಬಹುಮತಕ್ಕೆ ಅನುಗುಣವಾಗಿ ಕೆಲಸ ಮಾಡುತ್ತದೆ. ಕುಟುಂಬ ಅಥವಾ ಸಮಾಜದ ಹಿನ್ನೆಲೆಯಲ್ಲಿ ನೋಡಿ. ಬಹುಸಂಖ್ಯಾತರ ಕಲ್ಯಾಣ ಮತ್ತು ಸಂತೋಷವನ್ನು ತರುವಂತಹದನ್ನು ಮಾತ್ರ ಸ್ವೀಕರಿಸಲಾಗುತ್ತದೆ ಎಂದರು.
ತಮ್ಮ ಭಾಷಣದಲ್ಲಿ ಅವರು ಹಿಂದೂ ಧರ್ಮದಲ್ಲಿ ಅಸ್ಪೃಶ್ಯತೆ, ಸತಿ ಮತ್ತು ಜೌಹರ್ನಂತಹ ಆಚರಣೆಗಳನ್ನು ರದ್ದುಗೊಳಿಸಲಾಗಿದೆ. ಆದರೂ ಮುಸ್ಲಿಂ ಸಮುದಾಯದಲ್ಲಿ ಬಹು ಹೆಂಡತಿಯರನ್ನು ಹೊಂದುವ ಅಭ್ಯಾಸವನ್ನು ಅನುಮತಿಸಲಾಗಿದೆ ಎಂದು ಪ್ರಶ್ನೆಯನ್ನು ಎತ್ತಿದರು. ಈ ಅಭ್ಯಾಸ ಸ್ವೀಕಾರಾರ್ಹವಲ್ಲ ಎಂದು ಕರೆದರು. ಶಾಸ್ತ್ರಗಳು ಮತ್ತು ವೇದಗಳಂತಹ ಹಿಂದೂ ಧರ್ಮಗ್ರಂಥಗಳಲ್ಲಿ ಮಹಿಳೆಯರನ್ನು ದೇವತೆಗಳಾಗಿ ಪೂಜಿಸಲಾಗುತ್ತದೆ. ಆದರೆ ಒಂದು ಸಮುದಾಯದ ಸದಸ್ಯರು ಬಹು ಪತ್ನಿಯರನ್ನು ಹೊಂದಲು, ಹಲಾಲಾವನ್ನು ಅಭ್ಯಾಸ ಮಾಡುವ ಅಥವಾ ತ್ರಿವಳಿ ತಲಾಖ್ ಅನ್ನು ಅಭ್ಯಾಸ ಮಾಡುವ ಹಕ್ಕನ್ನು ಇನ್ನೂ ಒತ್ತಾಯಿಸುತ್ತಾರೆ ಎಂದು ಅವರು ಹೇಳಿದರು.
ಈ ದೇಶವು ಸಂವಿಧಾನ ಮತ್ತು ದಂಡನಾ ಕಾನೂನುಗಳನ್ನು ಹೊಂದಿರುವುದರಿಂದ ನಾಗರಿಕ ಕಾನೂನುಗಳನ್ನು ಏಕೀಕರಣಗೊಳಿಸುವುದು ತಾರ್ಕಿಕವಾಗಿದೆ. ಈ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದರು. ನಮ್ಮ ಧರ್ಮಗ್ರಂಥಗಳು ಮತ್ತು ವೇದಗಳಲ್ಲಿ ದೇವತೆಯ ಸ್ಥಾನಮಾನವನ್ನು ಪಡೆದಿರುವ ಮಹಿಳೆಯನ್ನು ನೀವು ಅವಮಾನಿಸಲು ಸಾಧ್ಯವಿಲ್ಲ. ನಾಲ್ಕು ಹೆಂಡತಿಯರನ್ನು ಹೊಂದುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ, ಹಲಾಲಾ ಅಥವಾ ತ್ರಿವಳಿ ತಲಾಖ್ ಅನ್ನು ನಿಲ್ಲಿಸಲು ಸಾಧ್ಯವಿಲ್ಲ. ತ್ರಿವಳಿ ತಲಾಖ್' ಹೇಳುವ ಹಕ್ಕು ನಮಗಿದೆ ಎಂದು ನೀವು ಹೇಳುತ್ತೀರಿ, ಆದರೆ ಮಹಿಳೆಯರಿಗೆ ಜೀವನಾಂಶ ಕೊಡುವುದಿಲ್ಲ ಅಂತೀರಿ, ಆದರೆ ಈ ದೇಶವು ಖಂಡಿತವಾಗಿಯೂ UCC ಕಾನೂನನ್ನು ತಂದೆ ತರುತ್ತದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



