ಗುಜರಾತ್ ಕೈಗಾರಿಕಾ ಘಟಕದಲ್ಲಿ ಸ್ಫೋಟ: ನಾಲ್ವರು ಕಾರ್ಮಿಕರು ಸಾವು
ಕಂಪನಿಯ ಎಂಇ ಪ್ಲಾಂಟ್‌ನಲ್ಲಿ ಸ್ಟೀಮ್ ಪ್ರೆಶರ್ ಪೈಪ್ ಒಡೆದು ಸ್ಫೋಟ ಸಂಭವಿಸಿದೆ.

ಅಹಮದಾಬಾದ್: ಗುಜರಾತ್‌ನ ಅಂಕಲೇಶ್ವರದ ಗುಜರಾತ್ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್(ಜಿಐಡಿಸಿ)ನಲ್ಲಿರುವ ಡಿಟಾಕ್ಸ್ ಇಂಡಿಯಾ ಪ್ರೈ.ಲಿ.ನಲ್ಲಿ ಮಂಗಳವಾರ ಮಧ್ಯಾಹ್ನ ಭಾರೀ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ.
ಕಂಪನಿಯ ಎಂಇ ಪ್ಲಾಂಟ್‌ನಲ್ಲಿ ಸ್ಟೀಮ್ ಪ್ರೆಶರ್ ಪೈಪ್ ಒಡೆದು ಸ್ಫೋಟ ಸಂಭವಿಸಿದ್ದು, ಇಂಡಸ್ಟ್ರಿಯಲ್ ಪ್ರದೇಶದಲ್ಲಿ ತೀವ್ರ ಆಘಾತವನ್ನು ಉಂಟುಮಾಡಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಡಿಟಾಕ್ಸ್ ಇಂಡಿಯಾ ಪ್ರೈ. Ltd. ಕೈಗಾರಿಕಾ ತ್ಯಾಜ್ಯ ವಿಲೇವಾರಿಯಲ್ಲಿ ಪರಿಣತಿ ಹೊಂದಿದೆ.
ಕಂಪನಿಯ ಪ್ಲಾಂಟ್‌ನಲ್ಲಿ ಫೀಡ್ ಟ್ಯಾಂಕ್‌ಗೆ ಕಾರ್ಮಿಕರು ರೇಲಿಂಗ್‌ಗಳನ್ನು ಅಳವಡಿಸುತ್ತಿದ್ದಾಗ ವೆಲ್ಡಿಂಗ್ ಸಮಯದಲ್ಲಿ ಹಠಾತ್ ಸ್ಫೋಟ ಸಂಭವಿಸಿದೆ ಎಂದು ಸ್ಥಳೀಯರು ವರದಿ ಮಾಡಿದ್ದಾರೆ.
ಘಟನೆ ಕುರಿತು ಮಾಹಿತಿ ಸ್ವೀಕರಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸುರಕ್ಷತೆ ಹಾಗೂ ಆರೋಗ್ಯ ಇಲಾಖೆಯ ತಂಡ ತಕ್ಷಣ ಸ್ಥಳಕ್ಕೆ ಧಾವಿಸಿತು. ಪರಿಸ್ಥಿತಿ ನಿಭಾಯಿಸಲು ಪೊಲೀಸ್ ಬೆಂಗಾವಲು ಪಡೆ ಕೂಡ ಆಗಮಿಸಿದೆ.
ಭರೂಚ್ ಬಿಜೆಪಿ ಸಂಸದ ಮನ್ಸುಖ್ ವಾಸವಾ ಅವರು ಈ ಘಟನೆಗೆ ಸಂತಾಪ ಸೂಚಿಸಿದ್ದು, ಈ ಅವಘಡಕ್ಕೆ ಗುಜರಾತ್ ಮಾಲಿನ್ಯ ನಿಯಂತ್ರಣ ಮಂಡಳಿ(ಜಿಪಿಸಿಬಿ) ಅಧಿಕಾರಿಗಳೇ ಹೊಣೆ ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



