ದೇಶ

ಬಿಜೆಪಿ ಸೇರಿದ್ದ ದೆಹಲಿ ಕೌನ್ಸಿಲರ್ ಮತ್ತೆ AAP ಗೆ ವಾಪಾಸ್!

ತಾನು ಬಿಜೆಪಿಗೆ ಸೇರಿದ್ದು ದೊಡ್ಡ ತಪ್ಪು, ಆದರೆ ಈಗ ಅವರು ತಮ್ಮ ಕುಟುಂಬಕ್ಕೆ ಮರಳಲು, ತಪ್ಪನ್ನು ಸರಿಪಡಿಸಿಕೊಳ್ಳಲು ಬಯಸಿದ್ದೇನೆ.

ಬಿಜೆಪಿ ಸೇರಿದ್ದ ದೆಹಲಿ ಕೌನ್ಸಿಲರ್ ಮತ್ತೆ AAP ಗೆ ವಾಪಾಸ್!
ಸಿಸೋಡಿಯಾ ಜೊತೆಗೆ ಕೌನ್ಸಿಲರ್ ರಾಮಚಂದ್ರ ಫೋಟೋ
Published On :

ನವದೆಹಲಿ: ಈ ವಾರದ ಆರಂಭದಲ್ಲಿ ಎಎಪಿ ತೊರೆದು ಬಿಜೆಪಿ ಸೇರಿದ್ದ ಐವರು ಕೌನ್ಸಿಲರ್ ಗಳ ಪೈಕಿ ಒಬ್ಬರು ಗುರುವಾರ ಮತ್ತೆ ಮಾತೃ ಪಕ್ಷಕ್ಕೆ ವಾಪಾಸ್ಸಾಗಿದ್ದಾರೆ.

ತನ್ನ ತಪ್ಪು ನಿರ್ಧಾರವನ್ನು ಸರಿಪಡಿಸಿಕೊಳ್ಳಲು ಬಯಸುವುದಾಗಿ ವಾರ್ಡ್ ನಂಬರ್ 28ರ ಕೌನ್ಸಿಲರ್ ರಾಮಚಂದ್ರ ಹೇಳಿದ್ದಾರೆ. ಇವರು ಬವಾನಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾಗಿದ್ದಾರೆ.

ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಂಸದರಾದ ಸಂಜಯ್ ಸಿಂಗ್ ಸಂದೀಪ್ ಪಾಠಕ್ ಸೇರಿದಂತೆ ಎಎಪಿಯ ಹಿರಿಯ ನಾಯಕರನ್ನು ಭೇಟಿಯಾಗಿರುವ ರಾಮಚಂದ್ರ, ತಾನು ಬಿಜೆಪಿಗೆ ಸೇರಿದ್ದು ದೊಡ್ಡ ತಪ್ಪು, ಆದರೆ ಈಗ ಅವರು ತಮ್ಮ ಕುಟುಂಬಕ್ಕೆ ಮರಳಲು, ತಪ್ಪನ್ನು ಸರಿಪಡಿಸಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ.

ಮತ್ತೊಂಡೆದೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಮಾಹಿತಿ ಹಂಚಿಕೊಂಡಿರುವ ಸಿಸೋಡಿಯಾ, ಆಮ್ ಆದ್ಮಿ ಪಕ್ಷದ ಸಹೋದ್ಯೋಗಿ ಮತ್ತು ಬವನ ವಿಧಾನಸಭಾ ಮಾಜಿ ಶಾಸಕ ರಾಮಚಂದ್ರ ಅವರನ್ನು ಭೇಟಿ ಮಾಡಿದ್ದು, ಅವರು ತಮ್ಮ ಆಮ್ ಆದ್ಮಿ ಕುಟುಂಬಕ್ಕೆ ಮರಳಿದ್ದಾರೆ. ರಾಮಚಂದ್ರ ಅವರನ್ನು ಕೆಲವರು ದಾರಿ ತಪ್ಪಿಸಿದ್ದಾರೆ ಎಂದು ಹೇಳಿದ್ದಾರೆ.

‘ಕೆಲವರು ನನ್ನನ್ನು ದಾರಿ ತಪ್ಪಿಸಿದ ರೀತಿ ಮುಂದೆಯೂ ಅವರ ಪ್ರಭಾವಕ್ಕೆ ಒಳಗಾಗುವುದಿಲ್ಲ ಎಂದು ಸಿಸೋಡಿಯಾ ಮತ್ತಿತರ ಇತರ ಹಿರಿಯ ನಾಯಕರ ಸಮ್ಮುಖದಲ್ಲಿ ರಾಮಚಂದ್ರ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.