ದೇಶ

Hyderabad: Reels ಗಾಗಿ ರಸ್ತೆ ಮೇಲೆ ಹಣ ಎಸೆದ ಯೂಟ್ಯೂಬರ್ ಬಂಧನ

ಹೈದರಾಬಾದ್ ನ ಕುಕಟ್‌ಪಲ್ಲಿಯ ಫುಟ್‌ಪಾತ್‌ನಲ್ಲಿ ಕರೆನ್ಸಿ ನೋಟುಗಳನ್ನು ಗಾಳಿಯಲ್ಲಿ ಎಸೆದು ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇರೆಗೆ ಯೂಟ್ಯೂಬರ್ ಹರ್ಷನನ್ನು ಕುಕಟ್‌ಪಲ್ಲಿ ಪೊಲೀಸರು ಬಂಧಿಸಿದ್ದಾರೆ.

Hyderabad: Reels ಗಾಗಿ ರಸ್ತೆ ಮೇಲೆ ಹಣ ಎಸೆದ ಯೂಟ್ಯೂಬರ್ ಬಂಧನ
ನಡುರಸ್ತೆಯಲ್ಲಿ ಹಣ ಎಸೆದ ಯೂಟ್ಯೂಬರ್
Published On :

ಹೈದರಾಬಾದ್: ರೀಲ್ಸ್ ಹುಚ್ಚಾಟಕ್ಕಾಗಿ ತುಂಬಿದ ಮಾರುಕಟ್ಟೆ ರಸ್ತೆಯಲ್ಲಿ ಹಣ ಎಸೆದು ವಿಡಿಯೋ ಮಾಡಿದ್ದ ಯೂಟ್ಯಬರ್ ಹರ್ಷನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ.

ಹೌದು.. ಹೈದರಾಬಾದ್ ನ ಕುಕಟ್‌ಪಲ್ಲಿಯ ಫುಟ್‌ಪಾತ್‌ನಲ್ಲಿ ಕರೆನ್ಸಿ ನೋಟುಗಳನ್ನು ಗಾಳಿಯಲ್ಲಿ ಎಸೆದು ಸಾರ್ವಜನಿಕರಿಗೆ ತೊಂದರೆ ನೀಡಿದ ಆರೋಪದ ಮೇರೆಗೆ ಯೂಟ್ಯೂಬರ್ ಹರ್ಷನನ್ನು ಕುಕಟ್‌ಪಲ್ಲಿ ಪೊಲೀಸರು ಬಂಧಿಸಿದ್ದಾರೆ.

ಹರ್ಷ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು Views ಪಡೆಯಲು ಹಣ ಎಸೆದು ವಿಡಿಯೋ ಮಾಡಿದ್ದ. ಆ ವಿಡಿಯೋಗಳನ್ನು ತನ್ನ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದ. ಇದು ವ್ಯಾಪಕ ವೈರಲ್ ಆಗಿತ್ತು.

ಹಣ ಎಸೆಯುವುದು ಇದೇ ಮೊದಲೇನಲ್ಲ

ಹರ್ಷ ಅಲಿಯಾಸ್ ವಂಶಿ ಪವರ್ ಎಂಬ ಈ ಯೂಟ್ಯೂಬರ್ ಹೈದರಾಬಾದ್ ನ ಮೋತಿನಗರ ವ್ಯಾಪ್ತಿಯಲ್ಲಿ ವಾಸವಾಗಿದ್ದು, ತನ್ನ ಯೂಟ್ಯೂಬ್ ನಲ್ಲಿ ತರಹೇವಾರಿ ವಿಚಾರಗಳ ಬಗ್ಗೆ ಮಾತನಾಡುತ್ತಾ ಖ್ಯಾತಿ ಗಳಿಸಿದ್ದ. ಆದರೆ ಇತ್ತೀಚೆಗೆ ಸಾರ್ವಜನಿಕ ಪ್ರದೇಶಗಳಲ್ಲಿ ಹಣವನ್ನು ಎಸೆದು ಹಲವೆಡೆ ವಿಡಿಯೋ ಮಾಡಿಕೊಂಡಿದ್ದ.

ಬಳಿಕ ತನ್ನ ಸಹಾಯಕರನ್ನು ಕಳುಹಿಸಿ ಆ ಹಣವನ್ನು ವಾಪಸ್ ಪಡೆಯಲು ಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ ಜೂನ್ ತಿಂಗಳಲ್ಲಿ ಇದೇ ಕುಕಟ್ ಪಲ್ಲಿಯ ಮೆಟ್ರೋ ರೈಲು ನಿಲ್ದಾಣದ ಬಳಿಯೂ ಹಣ ಎಸೆದು ವಿಡಿಯೋ ಮಾಡಿಕೊಂಡಿದ್ದ. ಈ ವೇಳೆ ನೂರಾರು ಜನ ಆ ಹಣ ಆರಿಸಿಕೊಳ್ಳಲು ಮುಂದಾಗಿ ವ್ಯಾಪಕ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇದೀಗ ಪೊಲೀಸರು ಹರ್ಷ ವಿರುದ್ಧ ಕಿರುಕುಳ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.