ದೇಶ

ವಿನೇಶ್ ಗೆ ಭಾರತ ರತ್ನ ಅಥವಾ ರಾಜ್ಯಸಭಾ ಸ್ಥಾನ ನೀಡಿ: ಟಿಎಂಸಿ ಆಗ್ರಹ

ಒಲಿಂಪಿಕ್ಸ್ ನಲ್ಲಿ ಆಕೆಯ ಕುಸ್ತಿ ಪ್ರದರ್ಶನವನ್ನು ಪರಿಗಣಿಸಿ ಆಕೆಗೆ ಭಾರತ ರತ್ನ ನೀಡಬೇಕು ಎಂದು ಟಿಎಂಸಿ ಹೇಳಿದೆ.

ವಿನೇಶ್ ಗೆ ಭಾರತ ರತ್ನ ಅಥವಾ ರಾಜ್ಯಸಭಾ ಸ್ಥಾನ ನೀಡಿ: ಟಿಎಂಸಿ ಆಗ್ರಹ
ವಿನೇಶ್ ಫೋಗಟ್ — online desk
Published On :

ನವದೆಹಲಿ: ಒಲಿಂಪಿಕ್ಸ್ 2024 ರ ಕುಸ್ತಿ ಫೈನಲ್ ನಿಂದ ತೂಕ ಹೆಚ್ಚಳದ ಕಾರಣ ಅನರ್ಹಗೊಂಡ ಕುಸ್ತಿಪಟು ವಿನೇಶ್ ಫೋಗಟ್ ಗೆ ಭಾರತ ರತ್ನ ಪ್ರಶಸ್ತಿ ನೀಡಬೇಕು ಅಥವಾ ರಾಜ್ಯಸಭಾ ಸದಸ್ಯತ್ವ ನೀಡಬೇಕೆಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.

ಒಲಿಂಪಿಕ್ಸ್ ನಲ್ಲಿ ಆಕೆಯ ಕುಸ್ತಿ ಪ್ರದರ್ಶನವನ್ನು ಪರಿಗಣಿಸಿ ಆಕೆಗೆ ಭಾರತ ರತ್ನ ನೀಡಬೇಕು ಎಂದು ಟಿಎಂಸಿ ಹೇಳಿದೆ.

ವಿನೇಶ್ ಫೋಗಟ್ ಅನರ್ಹಗೊಂಡಿರುವುದಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರತಿಕ್ರಿಯಿಸಿ, ದುರದೃಷ್ಟಕರ ಎಂದು ಹೇಳಿದ್ದರು ಅಷ್ಟೇ ಅಲ್ಲದೇ ಭಾರತದ 1.4 ಬಿಲಿಯನ್ ಜನತೆಗೆ ಆಕೆ ಚಾಂಪಿನ್ ಗಳ ಚಾಂಪಿಯನ್ ಹಾಗೂ ದೇಶದ ಹೆಮ್ಮೆ ಎಂದು ಹೇಳಿದ್ದರು.

ಸರ್ಕಾರ ಹಾಗೂ ವಿಪಕ್ಷಗಳು ಒಗ್ಗೂಡಿ ವಿನೇಶ್ ಗೆ ಭಾರತ ರತ್ನ ಅಥವಾ ರಾಷ್ಟ್ರಪತಿಗಳ ಮೂಲಕ ರಾಜ್ಯಸಭೆಗೆ ನಾಮನಿರ್ದೇಶನ ಮಾಡುವ ಬಗ್ಗೆ ನಿರ್ಧರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ ಆಗ್ರಹಿಸಿದೆ.

ಆಕೆ ಎದುರಿಸಿದ ಅಪಾರ ಹೋರಾಟವನ್ನು ಪರಿಗಣಿಸಿ ನಾವು ಆಕೆಗೆ ಕನಿಷ್ಠ ಇಷ್ಟನ್ನು ಮಾಡಬಹುದು. ಯಾವುದೇ ಪದಕವು ಆಕೆಯ ನಿಜವಾದ ಸಾಮರ್ಥ್ಯವನ್ನು ಸಂಪೂರ್ಣವಾಗಿ ಪ್ರತಿಬಿಂಬಿಸುವುದಿಲ್ಲ" ಎಂದು ಟಿಎಂಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮಹಿಳಾ ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತದ ಮಾಜಿ ರೆಸ್ಲಿಂಗ್ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಪ್ರತಿಭಟನೆಯಲ್ಲಿ ಫೋಗಟ್ ಪಾತ್ರದ ವೀಡಿಯೊವನ್ನು ಟಿಎಂಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.