ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವು ಸಂಖ್ಯೆ ಹೆಚ್ಚಳ ಆತಂಕಕಾರಿ: ಜೈಶಂಕರ್
ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವು ಸಂಖ್ಯೆ ಹೆಚ್ಚಳ ಆತಂಕಕಾರಿ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ.

ಬೆಂಗಳೂರು: ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಸಾವು ಸಂಖ್ಯೆ ಹೆಚ್ಚಳ ಆತಂಕಕಾರಿ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. ಆ ಪ್ರಕರಣಗಳಿಗೆ ಸಂಬಂಧವಿಲ್ಲದೇ ಇದ್ದರೂ ಸಹ ಘಟನೆಗಳು ಸರ್ಕಾರಕ್ಕೆ ಖಂಡಿತವಾಗಿಯೂ ದೊಡ್ಡ ಆತಂಕವಾಗಿ ಮಾರ್ಪಟ್ಟಿದೆ ಎಂದು ಜೈಶಂಕರ್ ಹೇಳಿದ್ದಾರೆ.
ಕೆಲವು ವಿದ್ಯಾರ್ಥಿಗಳ ಹತ್ಯೆಗಳು ವೈಯಕ್ತಿಕ ವಿಷಯಗಳಿಗಾಗಿ ನಡೆಯುತ್ತಿದೆ. ಇನ್ನು ಕೆಲವರು ಆಕಸ್ಮಿಕ ಘಟನೆಗಳ ಬಲಿಪಶುಗಳಾಗಿರಬಹುದು ಎಂದು ಜೈಶಂಕರ್ ಹೇಳಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿರುವ ವಿದೇಶಾಂಗ ಸಚಿವರು, ವಿದೇಶಗಳಲ್ಲಿ ಭಾರತೀಯ ವಿದ್ಯಾರ್ಥಿಗಳ ಹತ್ಯೆಗೆ ಸಂಬಂಧಿಸಿದ ಪ್ರಶ್ನೆಗೆ ಉತ್ತರಿಸಿದ್ದು, ಪ್ರತಿ ಪ್ರಕರಣವೂ ದುರದೃಷ್ಟಕರ, ಕುಟುಂಬಸ್ಥರಿಗೆ ಅತ್ಯಂತ ನೋವಿನ ಸಂಗತಿಯಾಗಿದ್ದು, ನಮಗೂ ಆತಂಕಕಾರಿ ಎಂದು ಹೇಳಿದ್ದಾರೆ. ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ನಮ್ಮ ರಾಯಭಾರ ಕಚೇರಿ ಅಥವಾ ದೂತವಾಸ ಕಚೇರಿ ಪರಿಶೀಲನೆ ನಡೆಸಿದೆ. ಆದರೆ ಅದಕ್ಕೆ ಯಾವುದಕ್ಕೂ ವಾಸ್ತವದಲ್ಲಿ ಕಾನೂನು ರೀತಿಯಲ್ಲಿ ಭಾರತಕ್ಕೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

'ಇನ್ನು ಕೈಕಟ್ಟಿ ಕುಳಿತಿರುವುದು ಅಸಾಧ್ಯ...': ಭಯೋತ್ಪಾದನೆ ಕುರಿತು ಪಾಕಿಸ್ತಾನಕ್ಕೆ ಎಸ್ ಜೈಶಂಕರ್ ನೇರ ಎಚ್ಚರಿಕೆ!
ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಅವರೊಂದಿಗೆ ಚಾಟ್ ಮಾಡಲು ರಾಯಭಾರ ಕಚೇರಿಗಳಿಗೆ ಸೂಚನೆ ನೀಡಲಾಗಿದೆ, ವಿಶೇಷವಾಗಿ ನಗರಗಳ ಅಪಾಯಕಾರಿ ಪ್ರದೇಶಗಳ ಬಗ್ಗೆ ಎಚ್ಚರಿಸಲು, ವಿವಿಧ ದೇಶಗಳಲ್ಲಿ 11 ಲಕ್ಷದಿಂದ 12 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಾಸಿಸುತ್ತಿದ್ದಾರೆ ಎಂದು ಜೈಶಂಕರ್ ಹೇಳಿದ್ದಾರೆ. ವಿದ್ಯಾರ್ಥಿ ಕಲ್ಯಾಣ ಬಹಳ ಮುಖ್ಯ. ನಾನು ಹೇಳಿದಂತೆ ಪ್ರತಿಯೊಬ್ಬ ಭಾರತೀಯನೂ ಹೊರಗೆ ಹೋಗುವಾಗ ಮೋದಿಯವರ ಗ್ಯಾರಂಟಿ ಇದೆ. ವಿದ್ಯಾರ್ಥಿ ಕ್ಷೇಮ ನಮಗೆ ಮುಖ್ಯವಾಗಿದೆ ಎಂದು ಜೈಶಂಕರ್ ಹೇಳಿದರು.
ವಶಕ್ಕೆ ಪಡೆದಿರುವ ಹಡಗಿನಲ್ಲಿ 17 ಭಾರತೀಯರ ಬಿಡುಗಡೆಗೆ ಇರಾನ್ ನಿಂದ ಸಕಾರಾತ್ಮಕ ಪ್ರತಿಕ್ರಿಯೆ
ಇರಾನ್ ಸೇನೆ ವಶಕ್ಕೆ ಪಡೆದಿರುವ ಪೋರ್ಚುಗೀಸ್ ಸರಕು ಹಡಗಿನಲ್ಲಿ 17 ಮಂದಿ ಭಾರತೀಯರಿದ್ದು, ಅವರ ಬಿಡುಗಡೆಗೆ ಭಾರತ ಇರಾನ್ ಗೆ ಮನವಿ ಮಾಡಿದೆ ಎಂದು ಇದೇ ವೇಳೆ ಜೈಶಂಕರ್ ತಿಳಿಸಿದ್ದಾರೆ.
ಭಾರತದ ಮನವಿಗೆ ಇರಾನ್ ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದೆ. ಈ ಸಂಬಂಧದ ಬೆಳವಣಿಗೆಗಳ ಸಂವಹನಗಳು ಭಾರತ- ಇರಾನ್ ನಡುವೆ ನಡೆಯಲಿದೆ ಎಂದು ಜೈಶಂಕರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


