ರಾಜೀವ್ ಗಾಂಧಿ ಹತ್ಯೆ: ನಳಿನಿ ಪತಿ ಸೇರಿದಂತೆ ಮೂವರು ಅಪರಾಧಿಗಳು ಭಾರತ ತೊರೆದು ಶ್ರೀಲಂಕಾಗೆ ಪ್ರಯಾಣ!
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳಾದ ಮುರುಗನ್ ಅಲಿಯಾಸ್ ಶ್ರೀಹರನ್, ಜಯಕುಮಾರ್ ಮತ್ತು ರಾಬರ್ಟ್ ಪಯಸ್ ಭಾರತ ತೊರೆದು ಲಂಕಾಗೆ ತೆರಳಿದ್ದಾರೆ.

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಮೂವರು ಅಪರಾಧಿಗಳಾದ ಮುರುಗನ್ ಅಲಿಯಾಸ್ ಶ್ರೀಹರನ್, ಜಯಕುಮಾರ್ ಮತ್ತು ರಾಬರ್ಟ್ ಪಯಸ್ ಭಾರತ ತೊರೆದು ಲಂಕಾಗೆ ತೆರಳಿದ್ದಾರೆ.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಎಲ್ಲಾ ಏಳು ಮಂದಿ 30 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ್ದರು. ಬಿಡುಗಡೆಯಾದ ನಂತರ ಅವರನ್ನು ತಿರುಚಿರಾಪಳ್ಳಿಯಲ್ಲಿ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ಈ ಪೈಕಿ ಮೂವರು ಕೊಲಂಬೊಗೆ ತೆರಳಿದ್ದಾರೆ. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಗಡೀಪಾರು ಆದೇಶ ಹೊರಡಿಸಿದ ನಂತರ ಅವರು ಸ್ವದೇಶಕ್ಕೆ ಮರಳಬಹುದು ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್‌ಗೆ ಈ ಹಿಂದೆ ತಿಳಿಸಿತ್ತು. ಇಲ್ಲಿನ ಶ್ರೀಲಂಕಾ ಹೈಕಮಿಷನ್ ಈ ಹಿಂದೆ ಅವರಿಗೆ ಸ್ವದೇಶಕ್ಕೆ ಮರಳಲು ಪ್ರಯಾಣ ದಾಖಲೆಗಳನ್ನು ನೀಡಿತ್ತು.
ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಇತ್ತೀಚಿನ ಬೆಳವಣಿಗೆಯಲ್ಲಿ, ಶ್ರೀಲಂಕಾ ಮೂಲದ ಎಲ್ಲಾ ಮೂವರು ಮಾಜಿ ಅಪರಾಧಿಗಳು ತಮ್ಮ ತಾಯ್ನಾಡಿಗೆ ಮರಳಿದ್ದಾರೆ. ಮುರುಗನ್ ಅಲಿಯಾಸ್ ಶ್ರೀಹರನ್, ಜಯಕುಮಾರ್ ಮತ್ತು ರಾಬರ್ಟ್ ಪಯಸ್ ಅವರನ್ನು ಶ್ರೀಲಂಕಾದ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನವೆಂಬರ್ 2022ರಲ್ಲಿ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದ ಪ್ರಕರಣದ ಏಳು ಅಪರಾಧಿಗಳಲ್ಲಿ ಅವರು ಸೇರಿದ್ದಾರೆ. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಮತ್ತು ಬಿಡುಗಡೆಯಾದ ಇತರರೆಂದರೆ ಪೆರಾರಿವಾಲನ್, ರವಿಚಂದ್ರನ್ ಮತ್ತು ನಳಿನಿ ಇವರೆಲ್ಲಾ ಭಾರತೀಯರು.
1991ರ ಮೇ 21ರ ರಾತ್ರಿ 10:21ಕ್ಕೆ ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಮೂವತ್ತು ವರ್ಷದ ಯುವತಿಯೊಬ್ಬಳು ಶ್ರೀಗಂಧದ ಹಾರವನ್ನು ಹೊತ್ತು ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯಿಂದ ಇದ್ದ ಜಾಗಕ್ಕೆ ಹೋಗಿ ಬಾಂಬ್ ಸ್ಫೋಟಿಸಿಕೊಂಡಿದ್ದು ರಾಜೀವ್ ಗಾಂಧಿ ಸೇರಿದಂತೆ ಹಲವು ಸಾವನ್ನಪ್ಪಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



