ಇದೇ ಮೊದಲ ಬಾರಿಗೆ 20,000 ಕೋಟಿ ರೂ ದಾಟಿದ ಭಾರತದ ರಕ್ಷಣಾ ರಫ್ತು ಮೌಲ್ಯ
ಭಾರತದ ರಕ್ಷಣಾ ರಫ್ತುಗಳ ಮೌಲ್ಯ ಇದೇ ಮೊದಲ ಬಾರಿಗೆ 20,000 ಕೋಟಿ ರೂಪಾಯಿಗಳನ್ನು ದಾಟಿದೆ. 2023-24 ರ ಆರ್ಥಿಕ ವರ್ಷದಲ್ಲಿ ಭಾರತದಿಂದ ರಫ್ತಾಗುತ್ತಿರುವ ರಕ್ಷಣಾ ಉಪಕರಣಗಳ ಮೌಲ್ಯ 21,000 ಕೋಟಿ ರೂಪಾಯಿ ತಲುಪಿದೆ.

ನವದೆಹಲಿ: ಭಾರತದ ರಕ್ಷಣಾ ರಫ್ತುಗಳ ಮೌಲ್ಯ ಇದೇ ಮೊದಲ ಬಾರಿಗೆ 20,000 ಕೋಟಿ ರೂಪಾಯಿಗಳನ್ನು ದಾಟಿದೆ. 2023-24 ರ ಆರ್ಥಿಕ ವರ್ಷದಲ್ಲಿ ಭಾರತದಿಂದ ರಫ್ತಾಗುತ್ತಿರುವ ರಕ್ಷಣಾ ಉಪಕರಣಗಳ ಮೌಲ್ಯ 21,000 ಕೋಟಿ ರೂಪಾಯಿ ತಲುಪಿದೆ.
ಈ ವರ್ಷ ರಕ್ಷಣಾ ರಫ್ತುದಾರರಿಗೆ ನೀಡಲಾದ ರಫ್ತು ದೃಢೀಕರಣ ಸಂಖ್ಯೆಯೂ ಹೆಚ್ಚಳವನ್ನು ಕಂಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ರಕ್ಷಣಾ ರಫ್ತು ಈ ವರ್ಷ ಶೇ.32.5 ರಷ್ಟು ಬೆಳವಣಿಗೆ ಕಂಡಿದೆ. ಕಳೆದ ವರ್ಷ ರಕ್ಷಣಾ ರಫ್ತು ಮೌಲ್ಯ 15,920 ಕೋಟಿ ರೂಪಾಯಿಗಳಷ್ಟಿತ್ತು.
FY 2013-14 ಕ್ಕೆ ಹೋಲಿಸಿದರೆ ಕಳೆದ 10 ವರ್ಷಗಳಲ್ಲಿ ರಕ್ಷಣಾ ರಫ್ತು 31 ಪಟ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ಅಂಕಿ-ಅಂಶಗಳ ಮೂಲಕ ತಿಳಿದುಬಂದಿದೆ.
ಖಾಸಗಿ ವಲಯ ಮತ್ತು ರಕ್ಷಣಾ ಸಾರ್ವಜನಿಕ ವಲಯದ ಉದ್ಯಮಗಳು (ಡಿಪಿಎಸ್‌ಯು) ಸೇರಿದಂತೆ ರಕ್ಷಣಾ ಉದ್ಯಮದ ಪ್ರಯತ್ನಗಳು ಈ ಸಾಧನೆಗೆ ಕಾರಣವೆಂದು ರಕ್ಷಣಾ ಸಚಿವಾಲಯ ಹೇಳಿದೆ. "ಖಾಸಗಿ ವಲಯ ಮತ್ತು DPSU ಗಳು ಕ್ರಮವಾಗಿ 60% ಮತ್ತು 40% ರಷ್ಟು ಕೊಡುಗೆ ನೀಡಿವೆ, ರಕ್ಷಣಾ ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



