ಕೊರೋನಾ ಸಮಸ್ಯೆ ಎದುರಿಸಿದವರು ಹೃದಯಾಘಾತದಿಂದ ಪಾರಾಗಲು ಕಠಿಣ ವ್ಯಾಯಾಮ, ಕೆಲಸ ಮಾಡಬೇಡಿ: ಸಚಿವ ಮನ್ಸುಖ್ ಮಾಂಡವಿಯಾ
ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳು ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿವೆಯೇ? ಎಂಬ ಪ್ರಶ್ನೆ ಇಂದು ಎಲ್ಲರ ಮನದಲ್ಲಿ ಮೂಡುತ್ತಿದೆ. ಹೌದು, ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ...

ನವದೆಹಲಿ: ಭಾರತದಲ್ಲಿ ವೇಗವಾಗಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳು ಕೊರೋನಾ ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿವೆಯೇ? ಎಂಬ ಪ್ರಶ್ನೆ ಇಂದು ಎಲ್ಲರ ಮನದಲ್ಲಿ ಮೂಡುತ್ತಿದೆ. ಹೌದು, ಈಗ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಹೃದಯಾಘಾತಕ್ಕೆ ನಿಜವಾದ ಕಾರಣ ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳನ್ನು ಹೇಳಿದ್ದಾರೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನಡೆಸಿದ ಅಧ್ಯಯನವನ್ನು ಮಾಂಡವಿಯಾ ಉಲ್ಲೇಖಿಸಿದ್ದಾರೆ. ಈ ಹಿಂದೆ ತೀವ್ರವಾದ ಕೋವಿಡ್ -19 ಕಾಯಿಲೆಯಿಂದ ಬಳಲುತ್ತಿದ್ದ ಜನರನ್ನು ಒಂದು ಅಥವಾ ಎರಡು ವರ್ಷಗಳ ಕಾಲ ಹೃದಯಾಘಾತದಿಂದ ಪಾರಾಗಬೇಕಾದರೆ ಹೆಚ್ಚು ಕಷ್ಟಪಟ್ಟು ಕೆಲಸ ಮಾಡುವುದನ್ನು ತಪ್ಪಿಸಬೇಕು. ಕಠಿಣ ವ್ಯಾಯಾಮ ಮಾಡಬಾರದು ಎಂದು ಹೇಳಿದರು.
ಗುಜರಾತ್‌ನಲ್ಲಿ ಇತ್ತೀಚೆಗೆ ನವರಾತ್ರಿ ಉತ್ಸವದ 'ಗರ್ಬಾ' ಕಾರ್ಯಕ್ರಮಗಳು ಸೇರಿದಂತೆ ಹೃದಯ ಸಂಬಂಧಿ ಸಮಸ್ಯೆಗಳಿಂದಾಗಿ ಹಲವು ಸಾವುಗಳು ಸಂಭವಿಸಿತ್ತು. ಇದು ಗುಜರಾತ್ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಹೃದ್ರೋಗ ತಜ್ಞರು ಸೇರಿದಂತೆ ವೈದ್ಯಕೀಯ ತಜ್ಞರೊಂದಿಗೆ ಸಭೆ ನಡೆಸಲು ಪ್ರೇರೇಪಿಸಿದರು.
ಹೃದಯಾಘಾತದ ಕಾರಣಗಳು ಮತ್ತು ಅದನ್ನು ತಡೆಗಟ್ಟುವ ಕ್ರಮಗಳನ್ನು ಕಂಡುಹಿಡಿಯಲು ಸಾವಿನ ಡೇಟಾವನ್ನು ಸಂಗ್ರಹಿಸಲು ಪಟೇಲ್ ತಜ್ಞರನ್ನು ಕೇಳಿದ್ದರು.
ಇನ್ನು ಮಾಂಡವಿಯಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, 'ಐಸಿಎಂಆರ್ ವಿವರವಾದ ಅಧ್ಯಯನವನ್ನು ಮಾಡಿದೆ. ಈ ಅಧ್ಯಯನದ ಪ್ರಕಾರ, ತೀವ್ರ ಕೋವಿಡ್ -19 ಸೋಂಕಿನಿಂದ ಬಳಲುತ್ತಿರುವ ಜನರು ಶ್ರಮದಾಯಕ ಕೆಲಸವನ್ನು ಮಾಡಬಾರದು. ಅವರು ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆಯಬೇಕು. ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ವ್ಯಾಯಾಮ, ಓಟ ಮತ್ತು ಭಾರೀ ವ್ಯಾಯಾಮದಿಂದ ದೂರವಿರಿ, ಇದರಿಂದ ಹೃದಯಾಘಾತವನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದ್ದಾರೆ.
ಗುಜರಾತ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದವರಲ್ಲಿ ಖೇಡಾ ಜಿಲ್ಲೆಯ 12ನೇ ತರಗತಿ ವಿದ್ಯಾರ್ಥಿ ವೀರ್ ಶಾ, ಅಹಮದಾಬಾದ್‌ನ ರವಿ ಪಾಂಚಾಲ್ (28) ಮತ್ತು ವಡೋದರದ ಶಂಕರ್ ರಾಣಾ (55) ಸೇರಿದ್ದಾರೆ.
ನವರಾತ್ರಿ ಉತ್ಸವಗಳು ಪ್ರಾರಂಭವಾಗುವ ಮೊದಲು, ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಧಿಸೂಚನೆಯ ಮೂಲಕ, ಭಾಗವಹಿಸುವವರಿಗೆ ತಕ್ಷಣದ ನೆರವು ನೀಡಲು ಗರ್ಬಾ ಕಾರ್ಯಕ್ರಮದ ಆಯೋಜಕರು ಸ್ಥಳದಲ್ಲಿ ಆಂಬ್ಯುಲೆನ್ಸ್ ಮತ್ತು ವೈದ್ಯಕೀಯ ತಂಡವನ್ನು ನಿಯೋಜಿಸುವುದನ್ನು ಕಡ್ಡಾಯಗೊಳಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


