ರಾಮೇಶ್ವರಂ: ಲಂಕಾದಿಂದ 27 ಮೀನುಗಾರರ ಬಂಧನ, ಬಿಡುಗಡೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಮುಷ್ಕರ
ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿರುವ ರಾಮೇಶ್ವರಂ ಮೀನುಗಾರರು ಮತ್ತು ದೋಣಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಮೇಶ್ವರಂನ ಮೀನುಗಾರರ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ.ದೋಣಿಗಳು ಬಂದ್ ಆಗಿದ್ದು, ಮೀನುಗಾರರು ಮೀನುಗಾರಿಕೆಗೆ ತೆರಳಿಲ್ಲ.

ರಾಮೇಶ್ವರಂ: ಶ್ರೀಲಂಕಾ ನೌಕಾಪಡೆ ವಶಕ್ಕೆ ಪಡೆದಿರುವ ರಾಮೇಶ್ವರಂ ಮೀನುಗಾರರು ಮತ್ತು ದೋಣಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಒತ್ತಾಯಿಸಿ ರಾಮೇಶ್ವರಂನ ಮೀನುಗಾರರ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿವೆ. ದೋಣಿಗಳು ಬಂದ್ ಆಗಿದ್ದು, ಮೀನುಗಾರರು ಮೀನುಗಾರಿಕೆಗೆ ತೆರಳಿಲ್ಲ.
ಅಕ್ಟೋಬರ್ 14 ರಂದು 400 ಕ್ಕೂ ಹೆಚ್ಚು ದೋಣಿಗಳಲ್ಲಿ ಮೀನುಗಾರಿಕೆಗಾಗಿ ಸಮುದ್ರಕ್ಕೆ ಇಳಿದಾಗ ಶ್ರೀಲಂಕಾ ನೌಕಪಡೆ 27 ಮೀನುಗಾರರೊಂದಿಗೆ 5 ದೋಣಿಗಳನ್ನು ವಶಕ್ಕೆ ಪಡೆದು ತಲೈಮನ್ನಾರ್ ಮತ್ತು ಕಂಕೆಸಂತುರೈ ಬಂದರಿಗೆ ಕರೆದೊಯ್ದು, ಮುಂದಿನ ಕಾನೂನು ಕ್ರಮಕ್ಕಾಗಿ ತಲೈಮನ್ನಾರ್ ಮತ್ತು ಜಾಫ್ನಾ ಕಡಲಿನ ಇನ್ಸ್ ಪೆಕ್ಟರ್ ಗೆ ಹಸ್ತಾಂತರಿಸಿತು ಎಂದು ತಮಿಳುನಾಡು ದೋಣಿ ಮೀನುಗಾರರ ಕಲ್ಯಾಣ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಜೆ. ಬೋಸ್ ಹೇಳಿದ್ದಾರೆ,
ಈ ಹಿಂದೆ, ಶ್ರೀಲಂಕಾದ ನೌಕಾಪಡೆಯು ಸೆಪ್ಟೆಂಬರ್ 13 ರಂದು ಒಳನಾಡಿನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಆರೋಪದ ಮೇರೆಗೆ 17 ಮೀನುಗಾರರನ್ನು ಮತ್ತು 3 ದೋಣಿಗಳನ್ನು ಬಂಧಿಸಿತ್ತು. ಈ ಸಂಬಂದ ಶ್ರೀಲಂಕಾ ನೌಕಪಡೆಯಿಂದ ಭಾರತೀಯ ಮೀನುಗಾರರನ್ನು ರಕ್ಷಿಸಲು ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಬೇಕು ಎಂದು ತಮಿನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


