ಆಪರೇಷನ್ ಅಜಯ್: ಇಸ್ರೇಲ್ ನಿಂದ 2ನೇ ವಿಮಾನದಲ್ಲಿ ನವದೆಹಲಿಗೆ ಬಂದಿಳಿದ 235 ಭಾರತೀಯರು!
ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಇಸ್ರೇಲ್‌ನಿಂದ 235 ಭಾರತೀಯ ಪ್ರಜೆಗಳನ್ನು ಕರೆತರುವ 2ನೇ ವಿಮಾನ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ನಿನ್ನೆ ಆಪರೇಷನ್ ಅಜಯ್ ಕಾರ್ಯಾಚರಣೆಯಡಿ 212 ಭಾರತೀಯ ಪ್ರಜೆಗಳನ್ನು ಸಂಘರ್ಷ ಪೀಡಿತ ದೇಶದಿಂದ ಸ್ವದೇಶಕ್ಕೆ ಮರಳಿ ಕರೆತರಲಾಯಿತು.

ನವದೆಹಲಿ: ಇಸ್ರೇಲ್-ಹಮಾಸ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ, ಇಸ್ರೇಲ್‌ನಿಂದ 235 ಭಾರತೀಯ ಪ್ರಜೆಗಳನ್ನು ಕರೆತರುವ 2ನೇ ವಿಮಾನ ಶನಿವಾರ ದೆಹಲಿ ವಿಮಾನ ನಿಲ್ದಾಣದಲ್ಲಿ ಬಂದಿಳಿಯಿತು. ನಿನ್ನೆ ಆಪರೇಷನ್ ಅಜಯ್ ಕಾರ್ಯಾಚರಣೆಯಡಿ 212 ಭಾರತೀಯ ಪ್ರಜೆಗಳನ್ನು ಸಂಘರ್ಷ ಪೀಡಿತ ದೇಶದಿಂದ ಸ್ವದೇಶಕ್ಕೆ ಮರಳಿ ಕರೆತರಲಾಯಿತು.
ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಭಾರತೀಯ ಪ್ರಜೆಗಳನ್ನು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ರಾಜಕುಮಾರ್ ರಂಜನ್ ಸಿಂಗ್ ಬರಮಾಡಿಕೊಂಡರು.
ಇದಕ್ಕೂ ಮುನ್ನಾ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ 235 ಭಾರತೀಯರನ್ನು ಹೊತ್ತ ವಿಮಾನ ಇಸ್ರೇಲ್ ನ ಟೆಲ್ ಅವೀವ್ ನಿಂದ ಟೇಕ್ ಆಫ್ ಆಗುತ್ತಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮಾಹಿತಿ ಹಂಚಿಕೊಂಡಿದ್ದರು.
ಇಸ್ರೇಲ್‌ನಿಂದ ಸಿಲುಕಿರುವ ನಾಗರಿಕರನ್ನು ಮರಳಿ ಕರೆತರಲು ಸರ್ಕಾರ ಅಕ್ಟೋಬರ್ 11 ರಂದು ‘ಆಪರೇಷನ್ ಅಜಯ್’ ಕಾರ್ಯಾಚರಣೆ ಪ್ರಾರಂಭಿಸಿತು. ಅಕ್ಟೋಬರ್ 7 ರಂದು ಯುದ್ಧ ಪ್ರಾರಂಭವಾದಾಗ ಏರ್ ಇಂಡಿಯಾ ಮತ್ತು ಇತರ ಏರ್‌ಲೈನ್ಸ್ ತನ್ನ ಎಲ್ಲಾ ವಾಣಿಜ್ಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿದ ನಂತರ ಈ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ವಿಶೇಷ ಚಾರ್ಟರ್ಡ್ ವಿಮಾನಗಳು ಭಾರತೀಯರನ್ನು ಮರಳಿ ಕರೆತರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


