ಬಿಹಾರ: ಶೇ.34 ರಷ್ಟು ಕುಟುಂಬಗಳ ಮಾಸಿಕ ವರಮಾನ ಕೇವಲ 6,000 ರೂ.!
ಬಿಹಾರದಲ್ಲಿರುವ ಕುಟುಂಬಗಳ ಪೈಕಿ ಶೇ.34.13 (94,12,786 ಕುಟುಂಬಗಳು) ರಾಷ್ಟು ಕುಟುಂಬಗಳ ಮಾಸಿಕ ಆದಾಯ ಕೇವಲ 6,000 ರೂಪಾಯಿ ಎಂಬ ಮಾಹಿತಿ ಅಲ್ಲಿನ ಜಾತಿ-ಆರ್ಥಿಕ ಸಮೀಕ್ಷೆ ವರದಿ ಮೂಲಕ ಬಹಿರಂಗವಾಗಿದೆ.

ಪಾಟ್ನ: ಬಿಹಾರದಲ್ಲಿರುವ ಕುಟುಂಬಗಳ ಪೈಕಿ ಶೇ.34.13 (94,12,786 ಕುಟುಂಬಗಳು) ರಾಷ್ಟು ಕುಟುಂಬಗಳ ಮಾಸಿಕ ಆದಾಯ ಕೇವಲ 6,000 ರೂಪಾಯಿ ಎಂಬ ಮಾಹಿತಿ ಅಲ್ಲಿನ ಜಾತಿ-ಆರ್ಥಿಕ ಸಮೀಕ್ಷೆ ವರದಿ ಮೂಲಕ ಬಹಿರಂಗವಾಗಿದೆ.
ವಿಧಾನಸಭೆಯ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಈ ವರದಿಯ ಪ್ರತಿಗಳನ್ನು ಶಾಸಕರಿಗೆ ಲಭ್ಯ ಮಾಡಲಾಗಿದೆ.
ವರದಿಯ ಪ್ರಕಾರ ಮಾಸಿಕ 6,000-10,000 ರೂಪಾಯಿ ಸಂಪಾದಿಸುವ ಕುಟುಂಬಗಳು ಶೇ.29.61 ರಷ್ಟಿವೆ (81,91,390 ಕುಟುಂಬಗಳು) ಅಂದರೆ ಮಾಸಿಕ 10,000 ರೂಪಾಯಿ ಗಳಿಸುವ ಶೇ.63 ರಷ್ಟು ಕುಟುಂಬಗಳು ರಾಜ್ಯದಲ್ಲಿವೆ.
10,000 ರೂಪಾಯಿಗಳಿಗಿಂತಲೂ ಹೆಚ್ಚಿನ, 20,000 ವರೆಗಿನ ಆದಾಯವನ್ನು ಶೇ.18.06 ರಷ್ಟು ಕುಟುಂಬಗಳು ಮಾತ್ರ ಹೊಂದಿದ್ದರೆ, ಶೇ.9.83 ರಷ್ಟು ಕುಟುಂಬಗಳು 20,000 ಕ್ಕಿಂತ ಹೆಚ್ಚಿನ, 50,000 ಒಳಗಿನ ಆದಾಯವನ್ನು ಹೊಂದಿವೆ.
ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರ ಒತ್ತಡದಿಂದ ಉದ್ದೇಶಪೂರ್ವಕವಾಗಿ ಮುಸ್ಲಿಮರು ಮತ್ತು ಯಾದವರ ಜನಸಂಖ್ಯೆಯನ್ನು ಜಾತಿ ಗಣತಿ ವರದಿಯಲ್ಲಿ ಹೆಚ್ಚಾಗಿ ತೋರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದರು.
ಬಿಹಾರದಲ್ಲಿ ಬಿಜೆಪಿ ಎನ್ಡಿಎ ಸರ್ಕಾರದ ಭಾಗವಾಗಿದ್ದಾಗ ಬಿಹಾರದಲ್ಲಿ ಜಾತಿ ಆಧಾರಿತ ಸಮೀಕ್ಷೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಮಿತ್ ಶಾ ಹೇಳಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


