ದೇಶ

ಸೌದಿ ದೊರೆ ಭಾರತಕ್ಕೆ ಉಡುಗೊರೆಯಾಗಿ ನೀಡಿದ್ದ 'ಅಬ್ದುಲ್ಲಾ' ಚೀತಾ ಸಾವು

ಸೌದಿ ಅರೇಬಿಯಾದ ದೊರೆ ಹೈದರಾಬಾದ್‌ನ ಜವಾಹರಲಾಲ್ ನೆಹರು ಮೃಗಾಲಯಕ್ಕೆ ನೀಡಿದ್ದ ‘ಅಬ್ದುಲ್ಲಾ’ ಎಂಬ ಗಂಡು ಚಿತಾ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

ಸೌದಿ ದೊರೆ ಭಾರತಕ್ಕೆ ಉಡುಗೊರೆಯಾಗಿ ನೀಡಿದ್ದ 'ಅಬ್ದುಲ್ಲಾ' ಚೀತಾ ಸಾವು
ಅಬ್ದುಲ್ಲಾ ಚೀತಾ ಸಾವು
Published On :

ಹೈದರಾಬಾದ್: ಸೌದಿ ಅರೇಬಿಯಾದ ದೊರೆ ಹೈದರಾಬಾದ್‌ನ ಜವಾಹರಲಾಲ್ ನೆಹರು ಮೃಗಾಲಯಕ್ಕೆ ನೀಡಿದ್ದ ‘ಅಬ್ದುಲ್ಲಾ’ ಎಂಬ ಗಂಡು ಚೀತಾ ಹೃದಯಾಘಾತದಿಂದ ಮೃತಪಟ್ಟಿದೆ ಎಂದು ತಿಳಿದುಬಂದಿದೆ.

15 ವರ್ಷದ ಈ ಚೀತಾ ಕೆಲ ದಿನಗಳಿಂದ ಕಾಯಿಲೆಯಿಂದ ಬಳಲುತ್ತಿತ್ತು. ಆದರೆ, ಚಿಕಿತ್ಸೆ ಫಲಿಸದೇ ಹೃದಯಾಘಾತವಾಗಿ ಮೃತಪಟ್ಟಿದೆ ಎನ್ನಲಾಗಿದೆ. 2013 ರಲ್ಲಿ ಸೌದಿ ದೊರೆ ಮೊಹಮ್ಮದ್ ಅಲ್ ಸೌದ್ ಅವರು ಭಾರತ ಭೇಟಿ ವೇಳೆ ಹಿಬಾ ಎಂಬ ಒಂದು ಹೆಣ್ಣು ಚೀತಾ ಹಾಗೂ ಅಬ್ದುಲ್ಲಾ ಎಂಬ ಒಂದು ಗಂಡು ಚೀತಾವನ್ನು ಸ್ನೇಹಾರ್ಥವಾಗಿ ಜವಾಹರಲಾಲ್ ನೆಹರು ಮೃಗಾಲಯಕ್ಕೆ ನೀಡಿದ್ದರು.

2020 ರಲ್ಲಿ ಇದೇ ಮೃಗಾಲಯದಲ್ಲಿ ಹಿಬಾ ಚೀತಾ ಮೃತಪಟ್ಟಿತ್ತು. ಕಳೆದ ವರ್ಷ ನಮಿಬಿಯಾದಿಂದ 8 ಚೀತಾಗಳನ್ನು ತಂದು ಭಾರತದ ಕುನೊ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.