ಹಿಂಡಿನಿಂದ ಬೇರ್ಪಟ್ಟ 2 ವಾರಗಳಲ್ಲಿ ಆನೆ ಮರಿ ಸಾವು!
ತಾಯಿ ಆನೆ ಹಾಗೂ ಆನೆ ಹಿಂಡಿನಿಂದ ಬೇರ್ಪಟ್ಟ 2 ವಾರಗಳಲ್ಲಿ ಆನೆ ಮರಿ ಸಾವನ್ನಪ್ಪಿರುವ ಘಟನೆ ಕೇರಳದ ಅಟ್ಟಪಾಡಿ ಅರಣ್ಯ ಶ್ರೇಣಿಯಲ್ಲಿ ವರದಿಯಾಗಿದೆ.

ಕೇರಳ: ತಾಯಿ ಆನೆ ಹಾಗೂ ಆನೆ ಹಿಂಡಿನಿಂದ ಬೇರ್ಪಟ್ಟ 2 ವಾರಗಳಲ್ಲಿ ಆನೆ ಮರಿ ಸಾವನ್ನಪ್ಪಿರುವ ಘಟನೆ ಕೇರಳದ ಅಟ್ಟಪಾಡಿ ಅರಣ್ಯ ಶ್ರೇಣಿಯಲ್ಲಿ ವರದಿಯಾಗಿದೆ.
1.6 ವರ್ಷದ ಆನೆ ಮರಿ ಮೃತಪಟ್ಟಿದ್ದು, ಇದಕ್ಕೆ ಸೂಕ್ತ ಕಾರಣ ಏನೆಂದು ಈ ವರೆಗೂ ತಿಳಿದುಬಂದಿಲ್ಲ. ಆನೆ ಮರಿ ಸಾವನ್ನಪ್ಪುವುದಕ್ಕೆ ಕಾರಣ ಏನೆಂದು ತಿಳಿಯುವುದಕ್ಕಾಗಿ ಮರಣೋತ್ತರ ಪರೀಕ್ಷೆ ಮಾಡಬೇಕಾಗುತ್ತದೆ ಎಂದು ಅರಣ್ಯ ಅಧಿಕಾರಿ ಹೇಳಿದ್ದಾರೆ.
ಇದನ್ನೂ ಓದಿ: ಆನೆ ಗಣತಿ: ಕೊಡಗಿನ ಅರಣ್ಯಗಳಲ್ಲಿ 1103 ಕಾಡಾನೆಗಳಿವೆ!
ಕಳೆದ 2 ವಾರಗಳಿಂದ ಆನೆ ಮರಿಯ ಆರೈಕೆ ಮಾಡುತ್ತಿದ್ದ ವೈದ್ಯರು ನೀಡಿರುವ ಮಾಹಿತಿಯ ಪ್ರಕಾರ, ಸೋಂಕಿನಿಂದ ಬಳಲುತ್ತಿದ್ದುದ್ದೇ ಇದಕ್ಕೆ ಕಾರಣ ಇರಬಹುದು ಎಂದು ಹೇಳಿದ್ದಾರೆ.
ಜೂ.26 ರಂದು ಆನೆ ಮರಿ ಆರೋಗ್ಯಕರವಾಗಿಯೇ ಇತ್ತು. ಆದರೆ ಏಕಾ ಏಕಿ ದುರ್ಬಲಗೊಂಡ ಪರಿಣಾಮ ಚಿಕಿತ್ಸೆ ನೀಡಿದ್ದೆವು. ಆ ನಂತರವೂ ಸ್ವಲ್ಪ ಚೇತರಿಸಿಕೊಂಡಿತ್ತು. ಆದರೆ ಮಂಗಳವಾರ ಮಧ್ಯಾಹ್ನ ಮತ್ತೆ ನಿತ್ರಾಣಗೊಂಡು ಸಾವನ್ನಪ್ಪಿತು ಎಂದು ಹೇಳಿದ್ದಾರೆ. "ಇದು ಬಹುಶಃ ಹುಟ್ಟಿನಿಂದಲೇ ಸಮಸ್ಯೆಗಳನ್ನು ಹೊಂದಿತ್ತು, ಇದು ಅದರ ಹಿಂಡಿನಿಂದ ಕೈಬಿಡಲ್ಪಟ್ಟಿದ್ದಕ್ಕೆ ಕಾರಣವಾಗಿರಬಹುದು" ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


