ಮಣಿಪುರದಲ್ಲಿ ಹಿಂಸಾಚಾರ: ಅಮಿತ್ ಶಾ ನಿವಾಸದ ಎದುರು ಕುಕಿ ಬುಡಕಟ್ಟು ಮಹಿಳೆಯರಿಂದ ಪ್ರತಿಭಟನೆ
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಡೆಯುವಂತೆ ಕುಕಿ ಬುಡಕಟ್ಟಿನ ಮಹಿಳೆಯರು ಮನವಿಯ ಫಲಕಗಳನ್ನು ಹಿಡಿದು ನವದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದರು.

ನವದೆಹಲಿ: ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರವನ್ನು ತಡೆಯುವಂತೆ ಕುಕಿ ಬುಡಕಟ್ಟಿನ ಮಹಿಳೆಯರು ಮನವಿಯ ಫಲಕಗಳನ್ನು ಹಿಡಿದು ನವದೆಹಲಿಯಲ್ಲಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಿವಾಸದ ಹೊರಗೆ ಬುಧವಾರ ಪ್ರತಿಭಟನೆ ನಡೆಸಿದರು.
"ಶಾಂತಿ ಮರುಸ್ಥಾಪಿಸಲಾಗುವುದು ಎಂದು ಗೃಹ ಸಚಿವರು ಭರವಸೆ ನೀಡಿದ ಹೊರತಾಗಿಯೂ, ಮಣಿಪುರದಲ್ಲಿ ನಮ್ಮ ಸಮುದಾಯದ ಮೇಲೆ ದಾಳಿಗಳು ಮುಂದುವರಿದಿವೆ. ಇಲ್ಲಿ ಜೀವಗಳು ಅಪಾಯದಲ್ಲಿವೆ. ಗೃಹ ಸಚಿವರು ಹಾಗೂ ಪ್ರಧಾನಿ ಮೋದಿ ಮಾತ್ರ ನಮಗೆ ಸಹಾಯ ಮಾಡಬಹುದು" ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
ಪ್ರತಿಭಟನೆ ನಡೆಸುತ್ತಿದ್ದ ಹಲವರ ಪೈಕಿ ನಾಲ್ವರನ್ನು ಸಚಿವರ ಭೇಟಿಗೆ ಅವಕಾಶ ನೀಡಲಾಯಿತು. ಉಳಿದರವನ್ನು ಜಂಟರ್ ಮಂತರ್'ಗೆ ಸ್ಥಳಾಂತರಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಮ್ಯಾನ್ಮಾರ್‌ನ ಗಡಿಯಲ್ಲಿರುವ ಈಶಾನ್ಯ ರಾಜ್ಯವು ಕಳೆದ ಕೆಲವು ವಾರಗಳಲ್ಲಿ ಉದ್ವಿಗ್ನವಾಗಿದೆ, ಗಲಭೆಗಳು ಮತ್ತು ಜನಾಂಗೀಯ ಘರ್ಷಣೆಗಳು ಮೇ ಆರಂಭದಿಂದ ಇಲ್ಲಿಯವರೆಗೆ ಕನಿಷ್ಠ 98 ಜನರು ಸಾವಿಗೀಡಾಗಿದ್ದು, 310 ಮಂದಿ ಗಾಯಗೊಂಡಿದ್ದಾರೆ. ಇಲ್ಲಿಯವರೆಗೆ 37,450 ಮಂದಿ 272 ಶಿಬಿರಗಳಲ್ಲಿ ಆಶ್ರ ಪಡೆದುಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


