ದೇಶ

ಯುವತಿಗೆ ಚೂರಿ ಇರಿದು ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ, ಯುವತಿ ಪ್ರಾಣಾಪಾಯದಿಂದ ಪಾರು!

ಪಾಗಲ್ ಪ್ರೇಮಿಯ ಪ್ರೀತಿಯ ಫಲಿತಾಂಶವು ಭಯಾನಕವಾಗಿದೆ. ದೆಹಲಿಯ ರೋಹಿಣಿ ಜಿಲ್ಲೆಯ ಬೇಗಂಪುರದಲ್ಲಿ ವಾಸವಿದ್ದ ಅಮಿತ್ ಎಂಬಾತ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ಯುವತಿಗೆ ಚಾಕುವಿನಿಂದ ಇರಿದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಯುವತಿಗೆ ಚೂರಿ ಇರಿದು ಆತ್ಮಹತ್ಯೆಗೆ ಶರಣಾದ ಪಾಗಲ್ ಪ್ರೇಮಿ, ಯುವತಿ ಪ್ರಾಣಾಪಾಯದಿಂದ ಪಾರು!
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಪಾಗಲ್ ಪ್ರೇಮಿಯ ಪ್ರೀತಿಯ ಫಲಿತಾಂಶವು ಭಯಾನಕವಾಗಿದೆ. ದೆಹಲಿಯ ರೋಹಿಣಿ ಜಿಲ್ಲೆಯ ಬೇಗಂಪುರದಲ್ಲಿ ವಾಸವಿದ್ದ ಅಮಿತ್ ಎಂಬಾತ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ಯುವತಿಗೆ ಚಾಕುವಿನಿಂದ ಇರಿದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಅಮಿತ್ ಪ್ರೀತಿಸುತ್ತಿದ್ದ ಯುವತಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಅಮಿತ್ ಯುವತಿಗೆ ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ. ಆದರೆ ಇದಕ್ಕೆ ಯುವತಿ ಒಪ್ಪಿಕೊಳ್ಳದ ಕಾರಣ ಆಕೆಗೆ ಚೂರಿ ಇರಿದಿದ್ದಾರೆ. 

ನಿನ್ನೆ ಮಧ್ಯಾಹ್ನ ಕಚೇರಿಗೆ ಬಂದ ಅಮಿತ್ ಯುವತಿಗೆ ಇರಿದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ವೇಳೆ ಆತನನ್ನು ಸಿಬ್ಬಂದಿ ತಡೆದಿದ್ದಾರೆ. ಇನ್ನು ಚೂರಿ ಇರಿತದಿಂದ ಗಾಯಗೊಂಡಿದ್ದ ಯುವತಿಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಕಚೇರಿಗೆ ಬಂದ ಬಳಿಕ ಅಮಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೇ ರಾಷ್ಟ್ರ ರಾಜಧಾನಿ ಶಹಬಾದ್ ಡೈರಿಯಲ್ಲಿ ಪ್ರೀತಿಸಿದವಳನ್ನು 24 ಬಾರಿ ಇರಿದು ಕೊಂದ ಘಟನೆ ನಡೆದಿದ್ದು ಅಂಥಹದ್ದೇ ಮತ್ತೊಂದು ಬೆಚ್ಚಿ ಬೀಳಿಸುವ ಸಂಗತಿ ಇದೀಗ ಬೆಳಕಿಗೆ ಬಂದಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.