ದೇಶ

ಪತಿಯನ್ನು ಕೊಂದು ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ, ಕಾಲುವೆಗೆ ಎಸೆದ ಮಹಿಳೆ!

ತನ್ನ ಪತಿಯನ್ನು ಕೊಡಲಿಯಿಂದ ಕೊಂದು ನಂತರ ಆತನ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ ಕಾಲುವೆಯೊಂದಕ್ಕೆ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಪಿಲಿಭಟ್ ಜಿಲ್ಲೆಯಲ್ಲಿ ನಡೆದಿದೆ.

ಪತಿಯನ್ನು ಕೊಂದು ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ, ಕಾಲುವೆಗೆ ಎಸೆದ ಮಹಿಳೆ!
ಮೃತದೇಹದ ಭಾಗಗಳಲ್ಲಿ ಕಾಲುವೆಯಲ್ಲಿ ಸಂಗ್ರಹಿಸುತ್ತಿರುವ ಪೊಲೀಸರು
Published On :

ಪಿಲಿಭಿತ್: ತನ್ನ ಪತಿಯನ್ನು ಕೊಡಲಿಯಿಂದ ಕೊಂದು ನಂತರ ಆತನ ದೇಹವನ್ನು ಐದು ತುಂಡುಗಳಾಗಿ ಕತ್ತರಿಸಿ ಕಾಲುವೆಯೊಂದಕ್ಕೆ ಎಸೆದಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಪಿಲಿಭಟ್ ಜಿಲ್ಲೆಯಲ್ಲಿ ನಡೆದಿದೆ. ಬರ್ಬರ ಕೃತ್ಯವನ್ನು ಒಪ್ಪಿಕೊಂಡ ನಂತರ ಆ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆ ತನ್ನ ಪತಿಯನ್ನು ತುಂಡುಗಳಾಗಿ ಕತ್ತರಿಸುವ ಮೊದಲು ಮಂಚಕ್ಕೆ ಆತನನ್ನು ಕಟ್ಟಿ ಹಾಕಿದ್ದಳು ಎನ್ನಲಾಗಿದೆ. ಮೃತರನ್ನು ಗಜ್ರೌಲಾ ಪ್ರದೇಶದ ಶಿವನಗರ ನಿವಾಸಿ ರಾಮ್ ಪಾಲ್ (55) ಎಂದು ಗುರುತಿಸಲಾಗಿದೆ.

 ಕೆಲವು ದಿನಗಳ ಕಾಲ ತನ್ನ ಪತಿಯ ಸ್ನೇಹಿತನೊಂದಿಗೆ ಓಡಿಹೋಗಿದ್ದ ರಾಮ್ ಪಾಲ್ ಅವರ ಪತ್ನಿ ದುಲಾರೊ ದೇವಿ ಒಂದು ತಿಂಗಳ ಹಿಂದೆಯಷ್ಟೇ ಗ್ರಾಮಕ್ಕೆ ಮರಳಿದ್ದಳು. ಪತಿ ಕಾಣೆಯಾದ ಬಗ್ಗೆ ಮಗನಿಗೆ ತಿಳಿಸಿದ್ದರು. ಅಲ್ಲಿಯೇ ಸಮೀಪದಲ್ಲಿ ತನ್ನ ಹೆಂಡತಿ ಮತ್ತು ಮಕ್ಕಳವೊಂದಿಗೆ ವಾಸಿಸುತ್ತಿದ್ದ  ರಾಮ್ ಪಾಲ್ ಅವರ ಮಗ ಸೋನ್ ಪಾಲ್ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ದೂರು ನೀಡಿದ್ದರು. 

ಅನುಮಾನದ ಆಧಾರದ ಮೇಲೆ ಪೊಲೀಸರು ದುಲಾರೋ ದೇವಿಯನ್ನು ಕಸ್ಟಡಿಗೆ ತೆಗೆದುಕೊಂಡು ಪತಿ ಎಲ್ಲಿದ್ದಾರೆ ಎಂದು ಪ್ರಶ್ನಿಸಿದ್ದಾರೆ. ವಿಚಾರಣೆ ವೇಳೆ ರಾಮ್ ಪಾಲ್ ಅವರ ಪತ್ನಿ ಅಪರಾಧ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಭಾನುವಾರ ರಾತ್ರಿ ಮಲಗಿದ್ದಾಗ ರಾಮ್ ಪಾಲ್ ಅವರನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

ದೇಹದ ಭಾಗಗಳನ್ನು ಹತ್ತಿರದ ಕಾಲುವೆಯಲ್ಲಿ ಎಸೆದಿರುವುದಾಗಿ ದುಲಾರಿ ಪೊಲೀಸರಿಗೆ ತಿಳಿಸಿದ್ದಾರೆ. ರಾಮ್ ಪಾಲ್ ಅವರ ದೇಹದ ಭಾಗಗಳನ್ನು ಹೊರತೆಗೆಯಲು ಮುಳುಗು ತಜ್ಞರ ಸಹಾಯವನ್ನು ಪಡೆಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಕಾಲುವೆಯಲ್ಲಿ ಮೃತರ ರಕ್ತಸಿಕ್ತ ಬಟ್ಟೆ ಹಾಗೂ ಹಾಸಿಗೆ ಪತ್ತೆಯಾಗಿದೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.