ದೇಶ

ದೆಹಲಿಯಲ್ಲಿ ಕಳೆದ 41 ವರ್ಷಗಳಲ್ಲೇ ದಾಖಲೆಯ 153 ಮಿ.ಮೀ ಮಳೆ

ರಾಷ್ಟ್ರ ರಾಜಧಾನಿಯಲ್ಲಿ ಶನಿವಾರ ಮತ್ತು ಭಾನುವಾರ ಬೆಳಗಿನವರೆಗೂ ಕಳೆದ 41 ವರ್ಷಗಳಲ್ಲೇ ದಾಖಲೆಯ 153 ಮಿಮೀ ಮಳೆ ಆಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜುಲೈ 25, 1982ರ ನಂತರ ಒಂದೇ ದಿನದಲ್ಲಿ ಇಷ್ಟೊಂದು ದಾಖಲೆಯ ಮಳೆಯಾಗಿದೆ.

ದೆಹಲಿಯಲ್ಲಿ ಕಳೆದ 41 ವರ್ಷಗಳಲ್ಲೇ ದಾಖಲೆಯ 153 ಮಿ.ಮೀ ಮಳೆ
ರಾಷ್ಟ್ರ ರಾಜಧಾನಿಯಲ್ಲಿ ಭಾರೀ ಮಳೆ
Published On :

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ  ಶನಿವಾರ ಮತ್ತು ಭಾನುವಾರ ಬೆಳಗಿನವರೆಗೂ ಕಳೆದ 41 ವರ್ಷಗಳಲ್ಲೇ ದಾಖಲೆಯ 153 ಮಿಮೀ ಮಳೆ ಆಗಿದೆ. ಭಾರತೀಯ ಹವಾಮಾನ ಇಲಾಖೆ ಪ್ರಕಾರ, ಜುಲೈ 25, 1982ರ  ನಂತರ ಒಂದೇ ದಿನದಲ್ಲಿ ಇಷ್ಟೊಂದು ದಾಖಲೆಯ ಮಳೆಯಾಗಿದೆ.

ಯಮುನಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಸರಾಸರಿ ಮಾನ್ಸೂನ್ ಕೋಟಾ ಶೇ. 20 ರಷ್ಟನ್ನು ನಗರ ಪೊರೈಸಿದ್ದು,  ಈ ಮುಂಗಾರಿನಲ್ಲಿ ದೆಹಲಿಯಲ್ಲಿ ಸರಾಸರಿ ದಾಖಲೆಯ 700 ಮಿ ಮೀ ಮಳೆಯಾಗಿದೆ. 

ದೆಹಲಿ ಪ್ರಾಥಮಿಕ ಹವಾಮಾನ ಕೇಂದ್ರ ಸಫ್ದರ್‌ಜಂಗ್ ವೀಕ್ಷಣಾಲಯ ದಾಖಲಿಸಿದ ಮಳೆಯ ಮಾಹಿತಿಯ ಪ್ರಕಾರ, ನಗರವು ಶನಿವಾರ ಬೆಳಿಗ್ಗೆ 8:30 ರಿಂದ ಭಾನುವಾರ ಬೆಳಿಗ್ಗೆ 8:30 ರ ನಡುವೆ ಸುಮಾರು 153 ಮಿಮೀ ಮಳೆಯನ್ನು ಪಡೆದಿದೆ. ಇದು 1958 ರ ನಂತರ ಜುಲೈನಲ್ಲಿ ಸುರಿದ ಮೂರನೇ ದಿನದ ಅತ್ಯಧಿಕ ಹೆಚ್ಚಿನ ಮಳೆಯಾಗಿದೆ. 

ನಿರಂತರ ಮಳೆಯು ದೆಹಲಿ ಎನ್‌ಸಿಆರ್ ನಿವಾಸಿಗಳಿಗೆ ವಾರಾಂತ್ಯದ-ಚಳಿಯ ವಾತಾವರಣವನ್ನು ತಂದರೆ, ಉದ್ಯಾನವನಗಳು, ಅಂಡರ್‌ಪಾಸ್‌ಗಳು, ಮಾರುಕಟ್ಟೆಗಳು ಮತ್ತು ಆಸ್ಪತ್ರೆ ಆವರಣಗಳು ಜಲಾವೃತಗೊಂಡು ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. 

ಬಲವಾದ ಗಾಳಿ ಮತ್ತು ತುಂತುರು ಮಳೆಯಿಂದಾಗಿ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಮತ್ತು ಇಂಟರ್ನೆಟ್ ಸಂಪರ್ಕದಲ್ಲಿ ಅಡಚಣೆ ಉಂಟಾಗಿದೆ. ಪರಿಸ್ಥಿತಿಯನ್ನು ಸುಧಾರಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಅಧಿಕಾರಿಗಳಿಗೆ ಭಾನುವಾರ ರಜೆಯನ್ನು ರದ್ದುಗೊಳಿಸಿದ ಸರ್ಕಾರ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.