ಎನ್ಸಿಪಿ ಬಲಾಬಲ: ಅಜಿತ್ ಪವಾರ್ ಜತೆ 35 ಶಾಸಕರು, ಶರದ್ ಪವಾರ್ ಸಭೆಯಲ್ಲಿ 13 ಶಾಸಕರು ಭಾಗಿ
ಎನ್ ಸಿಪಿ ಮುಖ್ಯಸ್ಥ, ತಮ್ಮ ಚಿಕ್ಕಪ್ಪ ಶರದ್ ಪವಾರ್ ವಿರುದ್ಧವೇ ಬಂಡಾಯವೆದ್ದಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಮುಂಬೈನಲ್ಲಿ ಕರೆದಿದ್ದ ಪಕ್ಷದ ಸಭೆಯಲ್ಲಿ 53 ಎನ್ಸಿಪಿ ಶಾಸಕರ ಪೈಕಿ 35 ಶಾಸಕರು...

ಮುಂಬೈ: ಎನ್ ಸಿಪಿ ಮುಖ್ಯಸ್ಥ, ತಮ್ಮ ಚಿಕ್ಕಪ್ಪ ಶರದ್ ಪವಾರ್ ವಿರುದ್ಧವೇ ಬಂಡಾಯವೆದ್ದಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರು ಬುಧವಾರ ಮುಂಬೈನಲ್ಲಿ ಕರೆದಿದ್ದ ಪಕ್ಷದ ಸಭೆಯಲ್ಲಿ 53 ಎನ್ಸಿಪಿ ಶಾಸಕರ ಪೈಕಿ 35 ಶಾಸಕರು ಹಾಜರಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಲ್ಲದೆ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎಂದು ಅವರು ಹೇಳಿದ್ದಾರೆ.
ಉಪನಗರ ಬಾಂದ್ರಾದಲ್ಲಿ ನಡೆಯುತ್ತಿರುವ ಅಜಿತ್ ಪವಾರ್ ಶಕ್ತಿ ಪ್ರದರ್ಶನದ ಸಭೆಯಲ್ಲಿ ಎಂಟು ಎನ್ಸಿಪಿ ಎಂಎಲ್ಸಿಗಳ ಪೈಕಿ ಐವರು ಭಾಗವಹಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯ ಮಾಜಿ ಪ್ರಧಾನ ಕಾರ್ಯದರ್ಶಿ ಅನಂತ್ ಕಲ್ಸೆ ಪ್ರಕಾರ, ಅಜಿತ್ ಪವಾರ್ ಅವರ ಬಣ ಅನರ್ಹತೆಯಿಂದ ತಪ್ಪಿಸಲು ಕನಿಷ್ಠ 36 ಶಾಸಕರ ಬೆಂಬಲದ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಅವರು ಎನ್ ಸಿಪಿಯ ಬಹುಪಾಲು ಶಾಸಕರ ಬೆಂಬಲ ತಮಗೆ ಇದೆ ಎಂಬುದನ್ನು ಸಾಬೀತುಪಡಿಸಲು ಮುಂಬೈನ ಬಾಂದ್ರಾದಲ್ಲಿ ಸಭೆ ಕರೆದಿದ್ದರು. ಇದಕ್ಕೆ ಪ್ರತಿಯಾಗಿ ಶರದ್ ಪವಾರ್ ಅವರು ದಕ್ಷಿಣ ಮುಂಬೈನ ಯಶವಂತರಾವ್ ಚವಾಣ್ ಸೆಂಟರ್ ನಲ್ಲಿ ಪಕ್ಷದ ನಾಯಕರ ಸಭೆ ಕರೆದಿದ್ದಾರೆ.
ಶರದ್ ಪವಾರ್ ಅವರ ಸಭೆಯಲ್ಲಿ ಕೇವಲ 13 ಶಾಸಕರು ಭಾಗವಹಿಸಿದ್ದಾರೆ ಎನ್ನಲಾಗಿದೆ. ಅನಿಲ್ ದೇಶ್ಮುಖ್, ಅಶೋಕ್ ಪವಾರ್, ರೋಹಿತ್ ಪವಾರ್, ಕಿರಣ್ ಲಹ್ಮತೆ ಸೇರಿದಂತೆ ಕೆಲವೇ ಮಂದಿ ಶರದ್ ಪವಾರ್ ಅವರಿಗೆ ಬೆಂಬಲ ತೋರಿಸಿದ್ದಾರೆ. ಈ ಸಭೆಗೆ ಎನ್ಸಿಪಿಯ ಎಲ್ಲಾ ಶಾಸಕರೂ ಹಾಜರಾಗಬೇಕು ಎಂದು ಪಕ್ಷದ ಮುಖ್ಯ ವಿಪ್ ಜಿತೇಂದ್ರ ಅವ್ಹಾದ್ ಅವರು ವಿಪ್ ಜಾರಿ ಮಾಡಿದ್ದರು.
ಐದು ಸಂಸದರಾದ ಶ್ರೀನಿವಾಸ್ ಪಾಟೀಲ್(ಲೋಕಸಭೆ), ಸುಪ್ರಿಯಾ ಸುಳೆ(ಲೋಕಸಭೆ), ಅಮೋಲ್ ಕೋಲ್ಹೆ (ಲೋಕಸಭೆ), ಫೌಜಿಯಾ ಖಾನ್ (ರಾಜ್ಯಸಭೆ) ವಂದನಾ ಚವಾಣ್ (ರಾಜ್ಯಸಭೆ) ಮತ್ತು ಮೂವರು ಎಂಎಲ್ಸಿಗಳಾದ ಶಶಿಕಾಂತ್ ಶಿಂಧೆ, ಬಾಬಾಜಾನಿ ದುರಾನಿ, ಏಕನಾಥ್ ಖಡ್ಸೆ ಅವರು ಸಹ ಶರದ್ ಪವಾರ್ ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


